
ತೆಹರಾನ್ (ಇರಾನ್) – ಅಮೆರಿಕದ ಬಳಿ ಸದ್ಭಾವನೆಯ ಕೊರತೆಯಿದೆ. ಅಲ್ಲದೆ ಅಮೆರಿಕದ ಅಪ್ರಾಮಾಣಿಕತೆಯೇ ಈ ಯುದ್ಧದ ಅಂತ್ಯಕ್ಕೆ ಅತಿದೊಡ್ಡ ಅಡ್ಡಿಯಾಗುತ್ತಿದೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘಚಿ ಅವರು ಅಮೆರಿಕವನ್ನು ಟೀಕಿಸುತ್ತಾ ಹೇಳಿಕೆ ನೀಡಿದ್ದಾರೆ. ನಾರ್ವೆಯ ಉಪ ವಿದೇಶಾಂಗ ಸಚಿವರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಅವರು ಮಾತು ಮುಂದುವರೆಸಿ, ಇರಾನ್ ವಿರುದ್ಧದ ಮಿಲಿಟರಿ ಕ್ರಮ ಮತ್ತು ಇರಾನ್ ಬಂದರುಗಳ ಮೇಲಿನ ಸತತ ದಿಗ್ಬಂಧನದಿಂದಾಗಿ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದೆ. ಹಾರ್ಮುಜ್ ಜಲಸಂಧಿಗೆ (2 ದೊಡ್ಡ ಜಲರಾಶಿಗಳನ್ನು ಜೋಡಿಸುವ ಜಲಮಾರ್ಗಕ್ಕೆ) ಹೊಂದಿಕೊಂಡಿರುವ ಕರಾವಳಿ ದೇಶವಾಗಿ ಇರಾನ್, ಅಂತರಾಷ್ಟ್ರೀಯ ಕಾನೂನಿನ ಪ್ರಕಾರ ಈ ಜಲಮಾರ್ಗಕ್ಕೆ ಸಂಬಂಧಿಸಿದ ಹೊಸ ನಿಯಮಗಳ ಬಗ್ಗೆ ಸಮಾಲೋಚನೆ ನಡೆಸುತ್ತಿದೆ ಎಂದು ಹೇಳಿದರು.
ಡೊನಾಲ್ಡ್ ಟ್ರಂಪ್ ಏನು ಹೇಳಿದರು?
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ಪ್ರವಾಸದಲ್ಲಿದ್ದಾರೆ. ಚೀನಾಕ್ಕೆ ತೆರಳುವ ಮೊದಲು ಮಾತನಾಡಿದ ಡೊನಾಲ್ಡ್ ಟ್ರಂಪ್, ಇರಾನ್ ಸೈನ್ಯವು ಬಹಳಷ್ಟು ದುರ್ಬಲಗೊಂಡಿದೆ. ಈ ಸಂಘರ್ಷದಲ್ಲಿ ಅಮೆರಿಕವೇ ಜಯಗಳಿಸಲಿದೆ. ನಾವು ಈ ಯುದ್ಧವನ್ನು ಹೇಗಾದರೂ ಮಾಡಿ ಗೆಲ್ಲುತ್ತೇವೆ. ಶಾಂತಿಯಿಂದಾಗಲಿ ಅಥವಾ ಇತರ ಮಾರ್ಗಗಳಿಂದಾಗಲಿ; ನಾವು ಯುದ್ಧವನ್ನು ಗೆಲ್ಲುತ್ತೇವೆ. ಅವರ (ಇರಾನ್ ನ) ನೌಕಾಪಡೆ ಮತ್ತು ವಾಯುಪಡೆ ನಾಶವಾಗಿದೆ, ಅವರ ಯುದ್ಧ ತಂತ್ರದ ಪ್ರತಿಯೊಂದು ಅಂಗವೂ ಇಲ್ಲದಂತಾಗಿದೆ ಎಂದರು.
ಅಮೆರಿಕದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಯೋಚಿಸುವುದಿಲ್ಲ! – ಟ್ರಂಪ್
ಈ ಸಮಯದಲ್ಲಿ ಪತ್ರಕರ್ತರು, ‘ಅಮೆರಿಕದ ನಾಗರಿಕರ ಆರ್ಥಿಕ ಪರಿಸ್ಥಿತಿಯು ಒಪ್ಪಂದ ಮಾಡಿಕೊಳ್ಳಲು ನಿಮ್ಮ ಮೇಲೆ ಎಷ್ಟು ಒತ್ತಡ ಹೇರುತ್ತಿದೆ?’ ಎಂಬ ಪ್ರಶ್ನೆಯನ್ನು ಕೇಳಿದರು. ಇದಕ್ಕೆ ಉತ್ತರಿಸಿದ ಟ್ರಂಪ್, ಸ್ವಲ್ಪವೂ ಇಲ್ಲ. ನಾನು ಅಮೆರಿಕದ ನಾಗರಿಕರ ಆರ್ಥಿಕ ಪರಿಸ್ಥಿತಿಯ ಬಗ್ಗೆ ಯೋಚಿಸುವುದಿಲ್ಲ. ನಾನು ಯಾರ ಬಗ್ಗೆಯೂ ಯೋಚಿಸುವುದಿಲ್ಲ. ನಾನು ಕೇವಲ ಒಂದೇ ವಿಷಯದ ಬಗ್ಗೆ ಯೋಚಿಸುತ್ತೇನೆ. ನಾವು ಇರಾನ್ ಗೆ ಪರಮಾಣು ಅಸ್ತ್ರಗಳನ್ನು ಪಡೆಯಲು ಬಿಡುವುದಿಲ್ಲ. ಅಷ್ಟೇ, ಎಂದು ಉತ್ತರಿಸಿದರು.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು