
ಮುಂಬಯಿ – ನಾಶಿಕ್-ತ್ರಯಂಬಕೇಶ್ವರ ಸಿಂಹಸ್ಥ ಕುಂಭಮೇಳ ಮಹಾರಾಷ್ಟ್ರ ರಾಜ್ಯಕ್ಕೆ ಸೇವೆಯ ಆದರ್ಶವನ್ನು ನಿರ್ಮಿಸಲು ಒಂದು ಉತ್ತಮ ಅವಕಾಶವಾಗಿದೆ. ಅಖಾಡಗಳಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಪ್ರತಿ ಅಖಾಡಕ್ಕೆ 5 ಕೋಟಿ ರೂಪಾಯಿ ನಿಧಿ ಹಾಗೂ ಸಣ್ಣ ಸಂಸ್ಥಾನಗಳಿಗೆ ಪ್ರತಿ ಸಂಸ್ಥಾನಕ್ಕೆ 15 ಲಕ್ಷ ರೂಪಾಯಿ ನೀಡುವುದಾಗಿ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಅವರು ಸಹ್ಯಾದ್ರಿ ಅತಿಥಿಗೃಹದಲ್ಲಿ ಆಯೋಜಿಸಲಾಗಿದ್ದ ಸಿಂಹಸ್ಥ ಕುಂಭಮೇಳದ ಪರಿಶೀಲನಾ ಸಭೆಯಲ್ಲಿ ಘೋಷಿಸಿದರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಉಪಸ್ಥಿತರಿದ್ದರು. ಅಖಾಡಗಳ ವಿದ್ಯುತ್ ಬಿಲ್ ಅನ್ನು ಪ್ರಾಧಿಕಾರದ ಮೂಲಕ ಪಾವತಿಸುವುದು ಹಾಗೂ ಅಖಾಡದ ಭೂಮಿಯನ್ನು ಸರಕಾರಿ ಕೆಲಸಗಳಿಗಾಗಿ ಸ್ವಾಧೀನಪಡಿಸಿಕೊಂಡರೆ ಅಖಾಡಗಳಿಗೆ ಪರಿಹಾರ ಅಥವಾ ಪರ್ಯಾಯ ಭೂಮಿಯನ್ನು ನೀಡಲಾಗುವುದೆಂದು ಮುಖ್ಯಮಂತ್ರಿಗಳು ಘೋಷಿಸಿದರು. “ಕುಂಭಮೇಳಕ್ಕಾಗಿ ಪ್ರಪಂಚದಾದ್ಯಂತ ಬರುವ ಸಾಧುಗಳು, ಮಹಂತರು ಮತ್ತು ಭಕ್ತರ ಸೇವೆ ಮಾಡುತ್ತಾ, ಅವರ ಮಾರ್ಗದರ್ಶನದಲ್ಲಿ ಕುಂಭಮೇಳವನ್ನು ಅತ್ಯಂತ ಭವ್ಯ ಹಾಗೂ ದಿವ್ಯವಾಗಿ ಆಯೋಜಿಸಲಾಗುವುದು,” ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಮುಂದೆ ಮಾತನಾಡಿ, “ತ್ರಯಂಬಕೇಶ್ವರ ದೇವಸ್ಥಾನದ ಆವರಣದಲ್ಲಿ ‘ಕಾರಿಡಾರ್’ (ಸುಸಜ್ಜಿತ ಹೆದ್ದಾರಿ) ನಿರ್ಮಿಸಲಾಗುವುದು. ಇದರಿಂದ ಭಕ್ತರಿಗೆ ಹೆಚ್ಚಿನ ಸೌಲಭ್ಯಗಳು ಸಿಗಲಿವೆ. ನಾಶಿಕ್‌ನಲ್ಲಿರುವ ಕುಂಡ (ಕಲ್ಯಾಣಿ), ರಾಮಕಾಲ್ ಪಥ, ದೇವಸ್ಥಾನ ಮತ್ತು ಗುಹೆಗಳನ್ನು ಜೀರ್ಣೋದ್ಧಾರ ಮಾಡಲಾಗುತ್ತಿದೆ. ಇಡೀ ನಾಶಿಕ್ ಮತ್ತು ತ್ರಯಂಬಕೇಶ್ವರ ಪರಿಸರದಲ್ಲಿ ಆಧ್ಯಾತ್ಮಿಕ ವಾತಾವರಣವನ್ನು ನಿರ್ಮಿಸಲು ಪ್ರಯತ್ನಿಸಲಾಗುತ್ತಿದೆ. ಕಳೆದ ಕುಂಭಮೇಳಕ್ಕಿಂತ ಈ ಬಾರಿಯ ಆಯೋಜನೆಯಲ್ಲಿ ಗೋದಾವರಿ ನದಿಯ ಸ್ವಚ್ಛ ಸ್ವರೂಪ ನಮ್ಮೆಲ್ಲರಿಗೂ ಕಾಣಿಸಲಿದೆ. ಅದಕ್ಕಾಗಿ ದೊಡ್ಡ ಮಟ್ಟದಲ್ಲಿ ಕೆಲಸ ಮಾಡಲಾಗುತ್ತಿದೆ,” ಎಂದರು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಮಾತನಾಡಿ, “ಕುಂಭಮೇಳದ ಯಶಸ್ವಿ ಆಯೋಜನೆಗಾಗಿ ರಾಜ್ಯ ಸರಕಾರವು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಈ ಆಯೋಜನೆಯು ಅತ್ಯಂತ ವೈಭವಯುತವಾಗಿ ನೆರವೇರಲಿದೆ. ಕುಂಭಮೇಳದ ಸುರಕ್ಷತೆಯಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವುದಿಲ್ಲ,” ಎಂದು ಹೇಳಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!