
ನಾಗ್ಪುರ – ಕರ್ತವ್ಯ ಲೋಪ ಎಸಗಿ, ಹಿರಿಯ ಅಧಿಕಾರಿಗಳಿಗೆ ಸೈಬರ್ ಅಪರಾಧದ ಕುರಿತು ಸುಳ್ಳು ಮತ್ತು ದಿಕ್ಕುತಪ್ಪಿಸುವ ವರದಿ ನೀಡಿದ ೩ ಪೊಲೀಸ್ ಅಧಿಕಾರಿಗಳು ಮತ್ತು ೬ ಸಿಬ್ಬಂದಿಗಳನ್ನು ನಾಗ್ಪುರದ ಪೊಲೀಸ್ ಆಯುಕ್ತರು ಅಮಾನತುಗೊಳಿಸಿದ್ದಾರೆ. ಯೋಗೇಶ್ ಘಾರೆ, ಬಳಿರಾಮ ಸುತಾರ್ ಮತ್ತು ವಿಜಯ ರಾಣೆ ಅಮಾನತುಗೊಂಡ ಪೊಲೀಸ್ ಇನ್ಸ್‌ಪೆಕ್ಟರ್‌ಗಳ ಹೆಸರುಗಳು.
೧. ನಾಗ್ಪುರದಲ್ಲಿ ಆನ್‌ಲೈನ್ ಬೆಟ್ಟಿಂಗ್ ಆಪ್ ಮೂಲಕ ೫೦೦ ರೂಪಾಯಿಗಳ ವಂಚನೆಯ ಪ್ರಕರಣದ ತನಿಖೆಗಾಗಿ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ವಿಜಯ ರಾಣೆ ನೇತೃತ್ವದ ವಿಶೇಷ ತಂಡವು ಪುಣೆ ಮತ್ತು ಮುಂಬಯಿಗೆ ತೆರಳಿತ್ತು.
೨. ಪುಣೆಯಲ್ಲಿ ಈ ತಂಡವು ಶಂಕಿತ ಆರೋಪಿ ಏಕಾಂಶ್ ಜೈನ್‌ನನ್ನು ಭೇಟಿ ಮಾಡಿ ನೋಟಿಸ್ ನೀಡಿತ್ತು; ಆದರೆ ನಾಗ್ಪುರಕ್ಕೆ ಮರಳಿದ ನಂತರ ತಂಡವು ‘ಆರೋಪಿ ಸಿಕ್ಕಿಲ್ಲ,’ ಎಂದು ಹಿರಿಯರಿಗೆ ಸುಳ್ಳು ವರದಿ ಸಲ್ಲಿಸಿತು. ತನಿಖೆಯ ಹೆಸರಿನಲ್ಲಿ ಆರೋಪಿಯಿಂದ ದೊಡ್ಡ ಮಟ್ಟದ ಹಣ ವಸೂಲಿ ಮಾಡಲಾಗಿದೆ ಎಂಬ ಚರ್ಚೆಯೂ ನಡೆದಿದೆ.
೩. ‘ಸೈಬರ್ ಸೆಲ್’ನ ಪೊಲೀಸ್ ಹವಾಲ್ದಾರ್ ಪ್ರಫುಲ್ ಠಾಕ್ರೆ ಅವರಿಗೆ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ವಿಜಯ ರಾಣೆ ಹಲ್ಲೆ ನಡೆಸಿದ ನಂತರ ಈ ಮೇಲಿನ ವಿಷಯ ಬೆಳಕಿಗೆ ಬಂದಿದೆ.
೪. ಈ ಘಟನೆಯ ನಂತರ ‘ಸೈಬರ್ ಸೆಲ್’ನ ಪೊಲೀಸ್ ಉಪ ಆಯುಕ್ತರನ್ನು ವರ್ಗಾವಣೆ ಮಾಡಲಾಗಿದ್ದು, ಐ.ಪಿ.ಎಸ್. ಅಧಿಕಾರಿ ದೀಪಕ ಅಗರ್ವಾಲ್ ಅವರಿಗೆ ಸೈಬರ್ ವಿಭಾಗದೊಂದಿಗೆ ಆರ್ಥಿಕ ಅಪರಾಧ ವಿಭಾಗದ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಲಾಗಿದೆ. ‘ಸೈಬರ್ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಮತ್ತು ಸಂತ್ರಸ್ತ ನಾಗರಿಕರಿಗೆ ನ್ಯಾಯ ಒದಗಿಸುವುದು,’ ತಮ್ಮ ಆದ್ಯತೆಯಾಗಿದೆ ಎಂದು ಅಗರ್ವಾಲ್ ಅವರು ಹೇಳಿದ್ದಾರೆ.
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
‘ ಮಹಾತ್ಮ ಫುಲೆ ವಾಡಾ’ ಆವರಣದಲ್ಲಿ ವಟಪೂಜೆ ನಿಷೇಧ ವಾಪಸ್!
ದೇಶದ 3 ರಾಜ್ಯಗಳಲ್ಲಿ ಲವ್ ಜಿಹಾದ್ನ 4 ಘಟನೆಗಳು ಬೆಳಕಿಗೆ!
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram