ನ್ಯೂಸ ೧೮ ಪತ್ರಕರ್ತ ಅಮನಚೋಪ್ರಾ ವಿರುದ್ಧ ರಾಜಸ್ಥಾನದಲ್ಲಿ ೨ ಅಪರಾಧಗಳು ದಾಖಲು

ಹಿಂದಿ ನ್ಯೂಸ ವಾಹಿನಿ ‘ನ್ಯೂಸ೧೮’ ನಿರೂಪಕ ಅಮನ ಚೋಪ್ರಾ ವಿರುದ್ಧ ರಾಜಸ್ಥಾನದ ಬುಂದಿ ಮತ್ತು ಡುಂಗರಪುರದಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. ರಾಜಸ್ಥಾನದ ಅಲವರ ಜಿಲ್ಲೆಯ ರಾಜಗಡನಲ್ಲಿರುವ ೩೦೦ ವರ್ಷಗಳಷ್ಟು ಹಳೆಯದಾದ ಶಿವ ದೇವಾಲಯ ಮತ್ತು ಇತರ ಎರಡು ದೇವಾಲಯಗಳನ್ನು ರಸ್ತೆ ವಿಸ್ತರಣೆಗಾಗಿ ಕೆಡವಲಾಯಿತು.

ಹುಬ್ಬಳ್ಳಿಯ ಹಿಂಸಾಚಾರದಲ್ಲಿ ರಝಾ ಅಕಾಡೆಮಿಯೂ ಭಾಗಿಯಾಗಿದೆ

ಇಲ್ಲಿ ಹನುಮಾನ ಜಯಂತಿಯಂದು ಮತಾಂಧರು ಒಂದು ತಥಾಕಥಿತ ಅಕ್ಷೇಪಾರ್ಹ ಪೋಸ್ಟನಿಂದಾಗಿ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದ್ದರು. ಈ ಪ್ರಕರಣದ ತನಿಖೆಯಿಂದ ರಝಾ ಅಕಾಡೆಮಿಯೂ ಇದರಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ರಝಾ ಅಕಾಡೆಮಿಯು ೨೦೧೨ರಲ್ಲಿ ಮುಂಬೈಯ ಆಝಾದ ಮೈದಾನದಲ್ಲಿ ಹಿಂಸಾಚಾರ ಎಸಗಿದ ಆರೋಪವನ್ನು ಎದುರಿಸುತ್ತಿದೆ.

ಅಲವರ (ರಾಜಸ್ಥಾನ) ಇಲ್ಲಿಯ ಮಾಜಿ ಜಿಲ್ಲಾಧಿಕಾರಿ ಸೇರಿದಂತೆ ಮುವರನ್ನು ೫ ಲಕ್ಷ ರೂಪಾಯಿ ಲಂಚ ಸ್ವಿಕರಿಸುತ್ತಿರುವಾಗ ಬಂಧನ

ಅಲವರ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ನನ್ನುಮಲ ಪಹಾಡಿಯಾ, ಆದಾಯ ತೆರಿಗೆ ಅಧಿಕಾರಿ ಅಶೋಕ ಸಂಖಲಾ ಮತ್ತು ದಲ್ಲಾಳಿ ನಿತಿನ ಅವರನ್ನು ೫ ಲಕ್ಷ ರೂಪಾಯಿಗಳ ಲಂಚ ಸ್ವಿಕರಿಸುತ್ತಿರುವಾಗ ರಾಜ್ಯದ ಲಂಚ ತಡೆ ಇಲಾಖೆಯು ಬಂಧಿಸಿದೆ.

ಪಲಕ್ಕಡ (ಕೇರಳ)ದಲ್ಲಿ ಸಂಘ ಸ್ವಯಂಸೇವಕನ ಹತ್ಯೆಗೆ ಸಂಬಂಧಿಸಿದಂತೆ ಪಿಎಫಐ ಮತ್ತು ಎಸಡಿಪಿಐಯ ೪ ಕಾರ್ಯಕರ್ತರ ಬಂಧನ

ಇಲ್ಲಿ ಏಪ್ರಿಲ ೧೬ ರಂದು ರಾಷ್ಟ್ರೀಯ ಸ್ವಯಂ ಸಂಘದ ಸ್ವಯಂಸೇವಕ ಶ್ರೀನಿವಾಸನರವರ ಹತ್ಯೆಗೆ ಸಂಬಂಧಿಸಿದಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫಐ) ಮತ್ತು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ ಇಂಡಿಯಾ(ಎಸಡಿಪಿಐ)ನ ನಾಲ್ವರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಅಲವರ (ರಾಜಸ್ಥಾನ) ಇಲ್ಲಿಯ ೩೦೦ ವರ್ಷ ಹಳೆಯ ಶಿವಮಂದಿರ ಅನಧಿಕೃತವೆಂದು ಹೇಳಿ ನೆಲಸಮ !

ಅಲವರ ಜಿಲ್ಲೆಯ ರಾಜಗಡನಲ್ಲಿ ೩೦೦ ವರ್ಷ ಹಳೆಯದಾಗಿರುವ ಶಿವ ಮಂದಿರವನ್ನು ಅಕ್ರಮವೆಂದು ಹೇಳುತ್ತಾ ಅದರ ಛಾವಣಿ ಮತ್ತು ಗೋಡೆಗಳನ್ನು ಕೆಡವಲಾಯಿತು. ಈ ಕಾರ್ಯಾಚರಣೆಯಲ್ಲಿ ದೇವಸ್ಥಾನದಲ್ಲಿರುವ ದೇವತೆಗಳ ಮೂರ್ತಿಯನ್ನು ಧ್ವಂಸಗೊಳಿಸಿ ಶಿವಲಿಂಗವನ್ನು ಯಂತ್ರದ ಮೂಲಕ ತುಂಢರಿಸಿದ್ದಾರೆ.

‘ನ್ಯಾಯಾಲಯ ಆಯುಕ್ತ’ರ ನೇಮಕಾತಿಯ ವಿರುದ್ಧ ಅಂಜುಮನ್ ಇಂತಜಾಮಿಯಾ ಕಮಿಟಿಯ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ

ಉತ್ತರ ಪ್ರದೇಶದ ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಅಂಜುಮನ್ ಇಂತಜಾಮಿಯಾ ಕಮಿಟಿಯು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ. ಈ ಅರ್ಜಿಯಲ್ಲಿ ನ್ಯಾಯಾಲಯದ ಆಯುಕ್ತರ ನೇಮಕಾತಿಯನ್ನು ವಿರೋಧಿಸಲಾಗಿತ್ತು.

ದೆಹಲಿಯಲ್ಲಿ ಭಾಜಪದ ಮುಖಂಡನ ಮೇಲೆ ಗುಂಡು ಹಾರಿಸಿ ಕೊಲೆ

ರಾಜಧಾನಿ ದೆಹಲಿಯ ಮಯೂರ ವಿಹಾರ ಪರಿಸರದಲ್ಲಿ ಭಾಜಪದ ಜಿಲ್ಲಾ ಸಚಿವರಾದ ಜೀತೂ ಚೌಧರಿಯವರನ್ನು ಗುಂಡಾಗಳು ಗುಂಡಿಕ್ಕಿ ಕೊಲೆ ಮಾಡಿದುರ. ಜೀತೂ ಚೌಧರಿಯವರು ಮಯೂರ ವಿಹಾರದಲ್ಲಿರುವ ತಮ್ಮ ಮನೆಯಿಂದ ಹೊರಗೆ ಬಂದ ತಕ್ಷಣ ಗುಂಡಾಗಳು ಅವರ ಮೇಲೆ ಗುಂಡು ಹಾರಿಸಿದರು.

ಗುಜರಾತಿನ ಶಾಸಕರಾದ ಜಿಗ್ನೇಶ ಮೇವಾಣಿಯವರ ಅಸ್ಸಾಂ ಪೊಲೀಸರಿಂದ ಬಂಧನ

ಗುಜರಾತಿನ ಶಾಸಕರಾದ ಜಿಗ್ನೇಶ ಮೇವಾಣಿಯವರನ್ನು ಅಸ್ಸಾಮಿನ ಪೊಲೀಸರು ಏಪ್ರಿಲ್‌ ೨೦ರ ರಾತ್ರಿ ಇಲ್ಲಿಂದ ಬಂಧಿಸಿದಿದ್ದಾರೆ. ಅವರನ್ನು ಅಸ್ಸಾಮಿಗೆ ಕರೆದೊಯ್ಯಲಾಗುವುದು. ಮೇವಾಣಿಯವರ ವಿರುದ್ಧ ಅಸ್ಸಾಮಿನಲ್ಲಿ ಅನೇಕ ಅಪರಾಧಗಳು ದಾಖಲಾಗಿದ್ದರಿಂದ ಅವರನ್ನು ಬಂಧಿಸಲಾಗಿದೆ.

ರಾತ್ರಿ ರೈಲಿನಲ್ಲಿ ಪ್ರಯಾಣಿಸುವಾಗ ಮೊಬೈಲ ಫೋನಿನಲ್ಲಿ ಜೋರಾಗಿ ಹಾಡು ಕೇಳುವುದು ಅಥವಾ ಮಾತನಾಡುವುದು ಅಪರಾಧ

ರೈಲ್ವೇಯ ಹೊಸ ನಿಯಮಗಳ ಪ್ರಕಾರ ರಾತ್ರಿ ಪ್ರಯಾಣಿಸುವಾಗ ಯಾವುದೇ ಪ್ರಯಾಣಿಕರು ಮೊಬೈಲ್ ಫೋನಿನಲ್ಲಿ ಜೋರಾಗಿ ಮಾತನಾಡುವಂತಿಲ್ಲ, ಜೋರಾಗಿ ಹಾಡು ಕೇಳುವಂತಿಲ್ಲ. ಇತರೆ ಪ್ರಯಾಣಿಕರಿಂದ ಅಂತಹ ದೂರು ಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

ಕೇರಳದಲ್ಲಿ ರಾ. ಸ್ವ. ಸಂಘದ ಸ್ವಯಂಸೇವಕನ ಕೊಲೆ

ಇಲ್ಲಿ ಏಪ್ರಿಲ ೧೬ ರಂದು ಶ್ರೀನಿವಾಸನ್ (ವಯಸ್ಸು ೪೫) ಎಂಬ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕನನ್ನು ದುಷ್ಕರ್ಮಿಗಳು ಕೊಲೆ ಮಾಡಿದರು. ಅವರು ತಮ್ಮ ಅಂಗಡಿಯಲ್ಲಿ ಕುಳಿತುಕೊಂಡಿರುವಾಗ ಅವರ ಮೇಲೆ ದಾಳಿ ನಡೆಸಲಾಯಿತು.