ಇನ್ನೂ ಸುರಂಗದಲ್ಲಿ ಸಿಲುಕಿರುವ ೨೭ ಜನರು

ಗ್ಯಾಂಗಟಾಕ್ (ಸಿಕ್ಕಿಂ) – ರಾಜ್ಯದ ನಾಮ್ಚಿಯಲ್ಲಿ ನಿರ್ಮಾಣ ಹಂತದ (ಕಾಮಗಾರಿ ನಡೆಯುತ್ತಿರುವ) ಸುರಂಗದಲ್ಲಿ ಗುಡ್ಡ ಕುಸಿದು ಸಂಭವಿಸಿದ ಭೀಕರ ಅಪಘಾತದಲ್ಲಿ ೮ ಕಾರ್ಮಿಕರು ಮೃತಪಟ್ಟಿದ್ದಾರೆ, ಹಾಗೂ ೨೭ ಕಾರ್ಮಿಕರು ಇನ್ನೂ ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ. ಜುಲೈ ೨೦ ರಂದು ಈ ಅಪಘಾತ ಸಂಭವಿಸಿತು. ಈ ಸುರಂಗವನ್ನು ‘ನ್ಯಾಷನಲ್ ಹೈಡ್ರೋಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್’ನ ‘ತೀಸ್ತಾ ಸ್ಟೇಜ್-೬’ ಜಲವಿದ್ಯುತ್ ಯೋಜನೆಯ ಭಾಗವಾಗಿ ನಿರ್ಮಿಸಲಾಗುತ್ತಿತ್ತು. ಜುಲೈ ೨೦ ರಂದು ಗುಡ್ಡ ಕುಸಿದಿದ್ದರಿಂದ ಈ ಸುರಂಗದ ಪ್ರವೇಶ ದ್ವಾರ ಮುಚ್ಚಿಹೋಯಿತು.
೧. ಅಪಘಾತದ ನಂತರ ಸುರಂಗದಲ್ಲಿ ಮಿಥೇನ್ ಅನಿಲ ಸೋರಿಕೆಯಾಗಿ ಒಂದೂವರೆ ಕಿಲೋಮೀಟರ್ ವರೆಗೆ ಹರಡಿತು. ಆಮ್ಲಜನಕದ ಕೊರತೆಯಿಂದಾಗಿ ಮತ್ತು ಶ್ವಾಸವಾಡದೆ ೮ ಕಾರ್ಮಿಕರು ಮೃತಪಟ್ಟಿದ್ದಾರೆಂದು ಸರಕಾರ ತಿಳಿಸಿದೆ.
೨. ಸಿಲುಕಿಕೊಂಡವರಲ್ಲಿ ‘ಪಟೇಲ್ ಇಂಜನಿಯರಿಂಗ್’ ಸಂಸ್ಥೆಯ ೨೧ ಮತ್ತು ‘ನ್ಯಾಷನಲ್ ಹೈಡ್ರೋಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್’ನ ೬ ನೌಕರರು ಸೇರಿದ್ದಾರೆಂದು ಹೇಳಲಾಗಿದೆ.
೩. ಘಟನಾ ಸ್ಥಳದಲ್ಲಿ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ, ರಾಜ್ಯ ವಿಪತ್ತು ಸ್ಪಂದನಾ ಪಡೆ, ಪೊಲೀಸ್ ಮತ್ತು ಅಗ್ನಿಶಾಮಕ ದಳದಿಂದ ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ.
೪. ಮಿಥೇನ್ ಅನಿಲ, ಕತ್ತಲು ಮತ್ತು ಆಮ್ಲಜನಕದ ಕೊರತೆಯಿಂದಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ಹೆಚ್ಚು ಅಡೆತಡೆಗಳು ಉಂಟಾಗುತ್ತಿದ್ದು, ವಿಶೇಷ ‘ಆಂಟಿ-ಗ್ಯಾಸ್ ಗೇರ್’ ಹೊಂದಿರುವ ಹೆಚ್ಚುವರಿ ರಕ್ಷಣಾ ತಂಡಗಳನ್ನು ಕೂಡ ಕರೆಯಿಸಲಾಗಿದೆ. ಮೃತರ ಗುರುತನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation
‘ಮಾವುಲಿ-ಮಾವುಲಿ’ಯ ಭಕ್ತಿಮಯ ಜಯಘೋಷದೊಂದಿಗೆ ಮಾಳಶಿರಸ ತಾಲೂಕಿನ ಠಾಕೂರಬುವಾ ಸಮಾಧಿಯ ಬಳಿ ನೆರವೇರಿದ ಮಾವುಲಿ ಪಲ್ಲಕ್ಕಿಯ ಮೂರನೇ ಗೋಲಾಕಾರದ ರಿಂಗಣ! : Sant Dnyaneshwar
ಕ್ಷುಲ್ಲಕ ಕಾರಣಕ್ಕೆ ಮುಸಲ್ಮಾನರಿಂದ ಹಿಂದೂಗಳ ಮೇಲೆ ಭೀಕರ ಹಲ್ಲೆ : Sewri Mumbai Muslims Attack
ಪ್ರಸಿದ್ಧ ಚಲನಚಿತ್ರ ನಟ ಚಿನ್ಮಯ ಉದಗೀರಕರ ಮತ್ತು ನಟಿ ಮೋಹಿನಿ ಪೋತದಾರ ಅವರಿಂದ ಸನಾತನದ ಆಶ್ರಮಕ್ಕೆ ಸೌಹಾರ್ದಯುತ ಭೇಟಿ!
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case