ಟ್ರೂಥ್ ಆರ್ ಡೇರ್ ಆಟದ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ಅಶ್ಲೀಲ ವೀಡಿಯೋ ಪ್ರಸಾರ

ಪೊಲೀಸರಿಂದ ವಿಚಾರಣೆ

ನವದೆಹಲಿ – ಸಾಮಾಜಿಕ ಜಾಲತಾಣಗಳಲ್ಲಿ ಪಿ.ಯು.ಸಿ. ವಿದ್ಯಾರ್ಥಿಗಳು ಟ್ರೂಥ್ ಆರ್ ಡೇರ್ ಆಟ ಆಡುವಾಗ ವಿಡಿಯೋ ಪ್ರಸಾರವಾಗುತ್ತಿದೆ. ಇದರಲ್ಲಿ ವಿದ್ಯಾರ್ಥಿಗಳು ಚುಂಬಿಸುತ್ತಿರುವುದು ಕಾಣುತ್ತಿದೆ. ಯಾವ ವಿದ್ಯಾರ್ಥಿ ಇದರ ಚಿತ್ರೀಕರಣ ಮಾಡಿದ್ದಾನೆಯೋ ಆತ ಪೊಲೀಸರಿಗೆ ‘ಅವನ ೧೧ ಸ್ನೇಹಿತರು ಅವನ ತರಗತಿಯಲ್ಲಿ ೨ ಹುಡುಗರು ಬಾಡಿಗೆಗೆ ಪಡೆದಿರುವ ಮನೆಯಲ್ಲಿ ಟ್ರೂಥ್ ಆರ್ ಡೇರ್ ಆಟ ಆಡುತ್ತಿದ್ದರು. ಆ ಸಮಯದಲ್ಲಿ ಕೆಲವು ಹುಡುಗರು ಒಬ್ಬ ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದರು. ಈ ವೀಡಿಯೋದಲ್ಲಿ ೩ ಹುಡುಗಿಯರ ಸೇರಿ ೧೧ ವಿದ್ಯಾರ್ಥಿಗಳು ಕಾಣುತ್ತಿದ್ದಾರೆ. ಜನವರಿ ತಿಂಗಳಿನಲ್ಲಿ ಮಂಗಳೂರ ನಗರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ವೀಡಿಯೋ ಪ್ರಸಾರವಾದ ನಂತರ ಮಹಾವಿದ್ಯಾಲಯದ ಆಡಳಿತವು ಈ ವಿಷಯದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಆ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಂಡಿದೆ. ಆದರೆ ಇಲ್ಲಿವರೆಗೆ ಯಾರು ಮುಂದೆ ಬಾರದೇ ಇರುವುದರಿಂದ ಈ ಪ್ರಕರಣದಲ್ಲಿ ಅಪರಾಧ ದಾಖಲಿಸಲಾಗಿಲ್ಲ. ಈ ವಿದ್ಯಾರ್ಥಿಗಳು ನಶೆಯ ಪದಾರ್ಥಗಳನ್ನು ಸೇವಿಸಿದ್ದರೆ ಎಂಬುವುದರ ವಿಚಾರಣೆ ನಡೆಯುತ್ತಿದೆ.

ದ್ವೇಷದಿಂದ ಈ ಹುಡುಗರು ವೀಡಿಯೋ ಪ್ರಸಾರ ಮಾಡಿದ್ದಾರೆ ಎಂದು ಪೊಲೀಸರಿಗೆ ಅನುಮಾನವಿದೆ. ಪೊಲೀಸರು ಆ ಮನೆಯ ಮಾಲೀಕರ ಹತ್ತಿರ ವಿಚಾರಣೆ ನಡೆಸಿದ್ದಾರೆ. ಆಗ ಅವರು ಮನೆಯಲ್ಲಿ ಮದ್ಯದ ಬಾಟಲಿಗಳು ಸಿಕ್ಕಿದ ನಂತರ ಅವರ ಪೋಷಕರಿಗೆ ಮಾಹಿತಿ ನೀಡಿ ಆ ಹುಡುಗರನ್ನು ೨ ತಿಂಗಳ ಹಿಂದೆಯೇ ಇಲ್ಲಿಂದ ಹೊರಹಾಕಲಾಗಿದೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಬಾಲ್ಯದಿಂದಲೇ ಮಕ್ಕಳಿಗೆ ಸಾಧನೆ ಕಲಿಸದೇ ಇರುವುದರ ಪರಿಣಾಮ ! ಇಂತಹ ಸಂಸ್ಕಾರ ರಹಿತ ಮಕ್ಕಳು ಮುಂದೆ ಅಪರಾಧಿಗಳಾದರೆ ಅದರಲ್ಲಿ ಆಶ್ಚರ್ಯ ಏನು ಇಲ್ಲ! ಪೋಷಕರೇ ಈಗಲಾದರೂ ಮಕ್ಕಳಿಗೆ ಬಾಲ್ಯದಿಂದಲೇ ಯೋಗ್ಯ ಸಾಧನೆ ಮಾಡಲು ಕಲಿಸಿ !