ದೆಹಲಿಗೆ ಹೊರಟಿದ್ದ ಪಂಜಾಬ ರೈತರ ಮೆರವಣಿಗೆಯನ್ನು ಮುಂದೂಡಲಾಗಿದೆ

ಇಲ್ಲದಿರುವ ಭಾರತ-ಅಮೆರಿಕ ಒಪ್ಪಂದವನ್ನು ವಿರೋಧಿಸಲು ಯೋಜಿಸಲಾಗಿತ್ತು!

ನವದೆಹಲಿ – ಪಂಜಾಬಿನ ರೈತರು ದೆಹಲಿಯ ಕಡೆಗೆ ನಡೆಸಬೇಕಿದ್ದ ಮೆರವಣಿಗೆಯನ್ನು ಮುಂದೂಡಿದ್ದಾರೆ. ಜುಲೈ 21 ರಂದು ಇಲ್ಲಿನ ಶಂಭು ಗಡಿಯಿಂದ ಮೆರವಣಿಗೆಗಾಗಿ ಬಂದಿದ್ದ ರೈತರು ಹಿಂತಿರುಗಲು ಪ್ರಾರಂಭಿಸಿದ್ದಾರೆ. ಅಮೆರಿಕ-ಭಾರತ ವ್ಯಾಪಾರ ಒಪ್ಪಂದದ ವಿರುದ್ಧ ಈ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಈ ಒಪ್ಪಂದ ಇನ್ನೂ ಆಗಲೇ ಇಲ್ಲ. ರೈತ ಮುಖಂಡರಾದ ದಿಲಬಾಗ ಸಿಂಗ ದಿರಾಜಕೆಯವರು ಮಾತನಾಡಿ, ಹರಿಯಾಣದ ಕೃಷಿ ಸಚಿವರಾದ ಶ್ಯಾಮ ಸಿಂಗ ರಾಣಾ ಅವರೊಂದಿಗಿನ ಸಭೆಯಲ್ಲಿ ಬೇಡಿಕೆಗಳ ಕುರಿತು ಒಮ್ಮತ ಮೂಡಿದೆ. ಹೀಗಾಗಿ ಪ್ರತಿಭಟನೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.

ಯಾವುದೇ ಒಪ್ಪಂದ ನಡೆದಿಲ್ಲ; ಹೀಗಿರುವಾಗ ಈ ಪ್ರತಿಭಟನೆ ಏಕೆ? – ಭಾಜಪ

ಪಂಜಾಬಿನ ಭಾಜಪದ ವಕ್ತಾರರಾದ ಅನಿಲ ಸಾರೀನರವರು ಮಾತನಾಡಿ, “ಇನ್ನೂ ಯಾವುದೇ ಒಪ್ಪಂದ ನಡೆದಿಲ್ಲ. ಯಾವುದೇ ವಿವರಗಳನ್ನು ಘೋಷಿಸಲಾಗಿಲ್ಲ; ಹೀಗಿರುವಾಗ ಈ ಪ್ರತಿಭಟನೆ ಏಕೆ? ಸರಕಾರ ಮಾಡದೇ ಇರುವ ಕೆಲಸದ ವಿರುದ್ಧ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ. ಬಹುಶಃ ಈ ಮುಖಂಡರಿಗೆ ವಿದೇಶದಲ್ಲಿ ಚಿರಪರಿಚಿತರಿದ್ದು, ಆದ್ದರಿಂದಲೇ ಅವರಿಗೆ ಎಲ್ಲವೂ ತಿಳಿದಿರುವ ಸಾಧ್ಯತೆಯಿದೆ. ಕೆಲವು ಜನರಿಗೆ ಯಾವಾಗಲೂ ಪಂಜಾಬಿನ ವಾತಾವರಣವನ್ನು ಹಾಳುಮಾಡಬೇಕಿರುತ್ತದೆ” ಎಂದಿದ್ದಾರೆ.