ಹರದೋಯಿ (ಉತ್ತರಪ್ರದೇಶ)ದಲ್ಲಿ ಮತಾಂಧರು ೩ ಮೀಟರವರೆಗೆ ಒಡ್ಡು ಒಡೆದರು !

ಈಗ ಮತಾಂಧರ ‘ಪ್ರವಾಹ ಜೀಹಾದ’ !

ಹರದೋಯಿ (ಉತ್ತರಪ್ರದೇಶ) – ಇಲ್ಲಿ ರಾತ್ರಿ ೫ ಮಂದಿ ಮತಾಂಧರು ೩ ಮೀಟರ ವರೆಗೆ ಒಡ್ಡನ್ನು ಒಡೆದಿರುವ ಘಟನೆ ನಡೆದಿದೆ. ಇನ್ನು ಸ್ವಲ್ಪ ಒಡ್ಡು ಒಡೆದಿದ್ದರೆ ಭಾರಿ ಪ್ರವಾಹ ಉಂಟಾಗುತ್ತಿತ್ತು. ಇಲ್ಲಿನ ಶಾರದಾ ನೀರಾವರಿ ಇಲಾಖೆಯ ಅಧಿಕಾರಿಗಳು ನಿಗಾವಹಿಸಿದ್ದರಿಂದ ಅಪಾರ ಪ್ರಮಾಣದ ನಷ್ಟ ತಪ್ಪಿದಂತಾಗಿದೆ. ಇಲಾಖೆಯ ಅಧಿಕಾರಿಗಳು ಇಲ್ಲಿಗೆ ತೆರಳಿ ಪರಿಶೀಲನೆ ನಡೆಸಿದಾಗ ಈ ಘಟನೆ ಗಮನಕ್ಕೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಝೀಶಾನ ಅಲಿ ಎಂಬ ಆರೋಪಿಯನ್ನು ಸ್ಥಳದಲ್ಲೇ ಬಂಧಿಸಲಾಗಿದ್ದು ಉಳಿದ ಆರೋಪಿಗಳಾದ ರಕ್ಷಾನ ಶಾಹ, ಸಿಕಂದರ ಶಾಹ, ವಾಸಿಂ ಖಾನ, ಸರ್ದಾರ ಅಲಿ ಮತ್ತು ಮುದಸ್ಸಿರ ಅಲಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಈ ಹಿಂದೆ ಆಸ್ಸಾಂನಲ್ಲಿ ಮತಾಂಧರಿಂದ ಒಡ್ಡು ಒಡೆದ ಕಾರಣ ಪುರದಲ್ಲಿ ೧ ಲಕ್ಷ ಜನರು ತೊಂದರೆಗೀಡಾಗಿದ್ದರು. ಇಗ ದೇಶದ ಇತರ ಭಾಗಗಳಲ್ಲಿ ಮತಾಂಧರು ಇದೇ ರೀತಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದು ಮುಂಬರುವ ದೊಡ್ಡ ತೊಂದರೆಗಳ ಮುನ್ಸೂಚನೆಯಾಗಿದೆ. ಈ ಬಗ್ಗೆ ದೇಶದ ಜಾತ್ಯತೀತರು ಬಾಯಿ ತೆರೆಯುವರೇ ?