ಗೋಹತ್ಯೆಯನ್ನು ವಿರೋಧಿಸಿದ ‘ಭಾರತ್ ಹಿಂದೂ ಮುನ್ನಾನಿ’ (ಭಾರತ್ ಹಿಂದೂ ಪಕ್ಷ) ಸಂಸ್ಥಾಪಕ ಶ್ರೀ. ಶಿವಾಜಿ ಅವರ ಮೇಲೆ ೨೦೦ ಹೆಚ್ಚು ಮುಸ್ಲಿಮರಿಂದ ದಾಳಿ
ಪೊಲೀಸರಿಗೆ ದೂರು ಸಲ್ಲಿಕೆ

ಚೆನ್ನೈ (ತಮಿಳುನಾಡು) – ಇಲ್ಲಿ ಜುಲೈ ೧೬ ರ ರಾತ್ರಿ ‘ಭಾರತ್ ಹಿಂದೂ ಮುನ್ನಾನಿ’ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ. ಶಿವಾಜಿ ಅವರು ಕರುಗಳ ಹತ್ಯೆಯನ್ನು ತಡೆಯಲು ಇಲ್ಲಿನ ಎಚ್-೮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕರುಗಳನ್ನು ಎಲ್ಲಿ ಹತ್ಯೆಮಾಡಲಾಗುತ್ತಿತ್ತೋ, ಆ ಸ್ಥಳಕ್ಕೆ ಅವರು ಪೊಲೀಸರನ್ನು ಕರೆದುಕೊಂಡು ಹೋಗಿದ್ದರು. ಈ ವೇಳೆ ಗೋಹತ್ಯೆ ಮಾಡುತ್ತಿದ್ದ ವ್ಯಕ್ತಿಯೊಬ್ಬ ಪೊಲೀಸ್ ಕ್ರಮದ ಬಗ್ಗೆ ಮುಸ್ಲಿಂ ಸಂಘಟನೆಗಳಿಗೆ ಮಾಹಿತಿ ನೀಡಿದನು. ಇದರಿಂದಾಗಿ ಘಟನಾ ಸ್ಥಳದಲ್ಲಿ ೨೦೦ಕ್ಕೂ ಹೆಚ್ಚು ಮುಸ್ಲಿಮರು ಜಮಾಯಿಸಿದರು. ನೆರೆದ ಮುಸ್ಲಿಮರು ಪೊಲೀಸರ ಸಮ್ಮುಖದಲ್ಲೇ ಶ್ರೀ. ಶಿವಾಜಿ ಅವರ ಮೇಲೆ ಹಲ್ಲೆ ನಡೆಸಿದರು. ಅವರ ವಾಹನವನ್ನು ಕಿತ್ತುಕೊಂಡು ಜೀವಬೆದರಿಕೆ ಹಾಕಿದರು. (ಯಾವ ಪೊಲೀಸರಿಗೆ ಹಿಂದುತ್ವನಿಷ್ಠ ನಾಯಕರನ್ನೇ ರಕ್ಷಿಸಲು ಸಾಧ್ಯವಿಲ್ಲವೋ, ಅಂತವರು ಸಾಮಾನ್ಯ ಹಿಂದೂಗಳನ್ನು ಹೇಗೆ ತಾನೇ ರಕ್ಷಿಸುವರು? ತಮಿಳುನಾಡು ಪೊಲೀಸರನ್ನು ಎಷ್ಟು ಖಂಡಿಸಿದರೂ ಕಡಿಮೆಯೇ! – ಸಂಪಾದಕರು) ಈ ಎಲ್ಲ ಘಟನೆಗಳ ವಿವರಗಳು ಮತ್ತು ವೀಡಿಯೊ ಪುರಾವೆಗಳು ಮಾಧ್ಯಮಗಳಲ್ಲಿ ದಾಖಲಾಗಿವೆ ಎಂದು ತಿಳಿಸುತ್ತಾ, ‘ಭಾರತ್ ಹಿಂದೂ ಮುನ್ನಾನಿ’ ಜುಲೈ ೧೯ ರಂದು ಪೊಲೀಸರಿಗೆ ದೂರು ನೀಡಿದೆ. ಈ ಸಂಘಟನೆಯ ತಮಿಳುನಾಡು ಅಧ್ಯಕ್ಷರಾದ ಶ್ರೀ. ಆರ್.ಡಿ. ಪ್ರಭು ಅವರು ‘ಸನಾತನ ಪ್ರಭಾತ್’ ಪ್ರತಿನಿಧಿಗೆ ಈ ಮಾಹಿತಿ ನೀಡಿದರು.
Chennai: Hindutva activists protest against organisations backing cow slaughterers after Shri Shivaji (Founder, Bharat Hindu Munnani) was attacked by a mob of 200 for opposing cow slaughter.
In a country where Hindus are in the majority, cow slaughterers are being glorified. Is… pic.twitter.com/9ztSPnRRBU
— Sanatan Prabhat (@SanatanPrabhat) July 20, 2026
ಮುಸ್ಲಿಂ ಸಂಘಟನೆಗಳು ಹಿಂದೂಗಳ ವಿರುದ್ಧ ಸುಳ್ಳು ಕಥನವನ್ನು ಹೆಣೆಯುತ್ತಿವೆ! – ಭಾರತ್ ಹಿಂದೂ ಮುನ್ನಾನಿ
‘ಗೋವುಗಳ ಹತ್ಯೆ ತಡೆಯುವುದು’, ‘ಗೋಮಾಂಸ ಮಾರಾಟದ ಅಂಗಡಿಗಳನ್ನು ಮುಚ್ಚಿಸುವುದು’ ಅಥವಾ ‘ಕರುಗಳನ್ನು ಕೊಲ್ಲಬಾರದು ಮತ್ತು ಅವುಗಳ ಮಾಂಸವನ್ನು ತಿನ್ನಬಾರದು’ ಎಂಬ ಸುಳ್ಳು ‘ನ್ಯಾರೇಟಿವ್’ (ಅಪಪ್ರಚಾರ) ಅನ್ನು ಹರಡುವ ಮೂಲಕ ಎಸ್.ಡಿ.ಪಿ.ಐ. (ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ) ಎಂಬ ಮೂಲಭೂತವಾದಿ ಪಕ್ಷಕ್ಕೆ ಸೇರಿದ ಮುಸ್ಲಿಂ ಸಂಘಟನೆಗಳು ಈ ಉದ್ವಿಗ್ನ ವಾತಾವರಣವನ್ನು ಉದ್ದೇಶಪೂರ್ವಕವಾಗಿ ಸೃಷ್ಟಿಸಿರುವುದು ಸ್ಪಷ್ಟವಾಗಿದೆ ಎಂದು ಈ ವೇಳೆ ಭಾರತ್ ಹಿಂದೂ ಮುನ್ನಾನಿ ಆರೋಪಿಸಿದೆ. ಸಂಘಟನೆಯು ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದು, ‘ಮುಸ್ಲಿಂ ಸಂಘಟನೆಗಳು ರಾಜಕೀಯ ಪ್ರೇರಿತವಾಗಿ ಅತ್ಯಂತ ಕೀಳು ಮಟ್ಟದ ಕೆಲಸ ಮಾಡಿವೆ’ ಎಂದು ಸ್ಪಷ್ಟಪಡಿಸಿದೆ.
ಹಿಂದುತ್ವನಿಷ್ಠರ ಬೇಡಿಕೆ ಏನು?
ಇಂತಹ ಕೃತ್ಯಗಳಲ್ಲಿ ಭಾಗಿಯಾಗಿರುವ ಮುಸ್ಲಿಂ ಸಂಘಟನೆಗಳು, ವದಂತಿಗಳನ್ನು ಹರಡುವವರು ಮತ್ತು ಮಾಧ್ಯಮಗಳಲ್ಲಿ ಸುಳ್ಳು ಹೇಳಿಕೆಗಳನ್ನು ನೀಡುವವರ ವಿರುದ್ಧ ಚೆನ್ನೈ ಮಹಾನಗರ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು. ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಎಲ್ಲಾ ಮಿತ್ರಪಕ್ಷಗಳ ಹಿಂದೂ ಸಂಘಟನೆಗಳು ಒಟ್ಟಾಗಿ ಪೊಲೀಸ್ ಠಾಣೆಯ ಮುಂದೆ ಬೃಹತ್ ಪ್ರತಿಭಟನೆ ಮತ್ತು ಮುತ್ತಿಗೆ ಹಾಕಲಿವೆ ಎಂದು ಎಚ್ಚರಿಕೆ ನೀಡಲಾಗಿದೆ.
ಜಂತರ್ ಮಂತರ್: ೨೩ ದಿನಗಳಿಂದ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಅಂತ್ಯ
ಮಧ್ಯಪ್ರದೇಶದ ಸಚಿವ ಸಂಪುಟದಿಂದ ಸಮಾನ ನಾಗರಿಕ ಸಂಹಿತೆಗೆ ಅನುಮೋದನೆ
೧೨ ವರ್ಷಗಳ ನಂತರ ಎಲ್ಲಾ ಆರೋಪಿಗಳನ್ನು ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯದಿಂದ ಖುಲಾಸೆ!
ತ್ರಿಪುರಾ ಡಿಜಿಪಿ ಅನುರಾಗ್ ಧನಖಡ್ ಮೃತದೇಹ ಪತ್ತೆ : Anurag Dhankar Death
ಆಗಿನ ಧಾರ್ಮಿಕ ದತ್ತಿ ಇಲಾಖೆಯ ನಿರೀಕ್ಷಕಿ ರಾಗಿಣಿ ಖಡ್ಕೆ ಸೇರಿದಂತೆ ಗುತ್ತಿಗೆದಾರನ ವಿರುದ್ಧ ದೂರು ದಾಖಲು !
ಗದ್ದಲದ ಕಾರಣದಿಂದ ಸಂಸತ್ತಿನ ಕಲಾಪ ದಿನವಿಡೀ ಮುಂದೂಡಿಕೆ