ಪಾಕಿಸ್ತಾನಕ್ಕೆ ನೀಡಲಾಗುವ ಆರ್ಥಿಕ ನೆರವು ಮತ್ತು ಪಾಕಿಸ್ತಾನಿಗಳಿಗೆ ನೀಡಲಾಗುವ ವೀಸಾವನ್ನು ತಡೆಹಿಡಿಯಬೇಕು!

ಪಾಕಿಸ್ತಾನಿ ಮೂಲದ ಕುಪ್ರಸಿದ್ಧ ಅಪರಾಧಿ ಶಬ್ಬೀರ್ ಅಹ್ಮದ್‌ ನನ್ನು ತನ್ನ ದೇಶಕ್ಕೆ ವಾಪಸ್ ತೆಗೆದುಕೊಳ್ಳಲು ಪಾಕಿಸ್ತಾನ ನಿರಾಕರಿಸಿದ ನಂತರ ಬ್ರಿಟನ್‌ ನ ವಿರೋಧ ಪಕ್ಷಗಳ ಬೇಡಿಕೆ

ಲಂಡನ್ (ಬ್ರಿಟನ್) – ಬ್ರಿಟನ್ ಪಾಕಿಸ್ತಾನಕ್ಕೆ ೩ ವರ್ಷಗಳಿಗಾಗಿ ಮಂಜೂರು ಮಾಡಲಾದ ೧ ಸಾವಿರ ೯೬೩ ಕೋಟಿ ೭೦ ಲಕ್ಷಗಳ ಆರ್ಥಿಕ ನೆರವು ಮತ್ತು ಪಾಕಿಸ್ತಾನದ ನಾಗರಿಕರಿಗೆ ನೀಡಲಾಗುವ ವೀಸಾವನ್ನು (ಯಾವುದೇ ದೇಶದಲ್ಲಿ ಪ್ರವೇಶಿಸಲು ನೀಡಲಾಗುವ ಅಧಿಕೃತ ದಾಖಲೆ ಅಥವಾ ಮುದ್ರೆ) ತಡೆಹಿಡಿಯಬೇಕು ಎಂದು ಅಲ್ಲಿನ ವಿರೋಧ ಪಕ್ಷಗಳು ಸರಕಾರಕ್ಕೆ ಆಗ್ರಹ ಮಾಡಿವೆ. ಪಾಕಿಸ್ತಾನಿ ಮೂಲದ, ಹುಡುಗರು – ಹುಡುಗಿಯರ ಲೈಂಗಿಕ ಶೋಷಣೆ ನಡೆಸಿದ ಕುಖ್ಯಾತ ಅಪರಾಧಿ ಶಬ್ಬೀರ್ ಅಹ್ಮದ್‌ ನನ್ನು ವಾಪಸ್ಸು ತನ್ನ ದೇಶಕ್ಕೆ ತೆಗೆದುಕೊಳ್ಳಲು ಪಾಕಿಸ್ತಾನ ನಿರಾಕರಿಸಿದ ನಂತರ ಈ ಬೇಡಿಕೆ ಇಡಲಾಗಿದೆ.

ಪಾಕಿಸ್ತಾನದಲ್ಲಿ ಜನಿಸಿದ ಶಬ್ಬೀರ್ ಅಹ್ಮದ್ ರೇಚ್‌ ಡೇಲ್ ಗ್ರೂಮಿಂಗ್ ಗ್ಯಾಂಗ್‌ ನ (ಚಿಕ್ಕ ವಯಸ್ಸಿನ ಹೆಣ್ಣುಮಕ್ಕಳು ಅಥವಾ ಯುವತಿಯರಿಗೆ ಆಮಿಷ ಒಡ್ಡಿ ಲೈಂಗಿಕ ಶೋಷಣೆ ಮಾಡುವ ಗ್ಯಾಂಗ್‌ ನ) ಪ್ರಮುಖ ಸದಸ್ಯನಾಗಿದ್ದನು. ಆತನಿಗೆ ಸಣ್ಣ ಮಕ್ಕಳ ಮೇಲೆ ಬಲಾತ್ಕಾರ ನಡೆಸಿದ ೩೦ ಪ್ರಕರಣಗಳಲ್ಲಿ ದೋಷಿ ಎಂದು ತೀರ್ಪು ನೀಡಲಾಗಿತ್ತು. ೨೨ ವರ್ಷಗಳ ಜೈಲು ಶಿಕ್ಷೆಯಲ್ಲಿ ೧೪ ವರ್ಷಗಳನ್ನು ಜೈಲಿನಲ್ಲಿ ಕಳೆದ ನಂತರ ಈ ತಿಂಗಳಲ್ಲಿ ಆತನನ್ನು ಬಿಡುಗಡೆ ಮಾಡಲಾಗಿದೆ. ಬ್ರಿಟನ್ ೨೦೧೬ ರಲ್ಲಿ ಆತನ ನಾಗರಿಕತ್ವವನ್ನು ರದ್ದುಗೊಳಿಸಿತ್ತು; ಆದರೆ ೧೯೭೧ ರ ಇಮಿಗ್ರೇಷನ್ (ವಿದೇಶದಿಂದ ಹೊಸ ದೇಶಕ್ಕೆ ಆಗುವ ಕಾಯಂ ವಲಸೆ) ಕಾಯ್ದೆಯಡಿ ಸಿಕ್ಕಿದ್ದ ಕಾನೂನು ರಕ್ಷಣೆಯಿಂದಾಗಿ ಸರಕಾರಕ್ಕೆ ಆತನನ್ನು ಗಡಿಪಾರು ಮಾಡಲು ಸಾಧ್ಯವಾಗಲಿಲ್ಲ. ಇಂತಹ ಅತ್ಯಂತ ಗಂಭೀರ ಪ್ರಕರಣಗಳಲ್ಲಿ ಕಾನೂನಿಗೆ ತಿದ್ದುಪಡಿ ತರಲಾಗುವುದು ಎಂದು ಗೃಹ ಕಾರ್ಯದರ್ಶಿ ಶಬಾನಾ ಮಹಮೂದ್ ತಿಳಿಸಿದ್ದಾರೆ.

ಪಾಕಿಸ್ತಾನ ನುಣುಚಿಕೊಂಡಿದೆ!

ಈ ಪ್ರಕರಣದಲ್ಲಿ ಪಾಕಿಸ್ತಾನವು, ಅಹ್ಮದ್ ದಶಕಗಳ ಹಿಂದೆಯೇ ಪಾಕಿಸ್ತಾನದ ನಾಗರಿಕತ್ವವನ್ನು ತೊರೆದಿದ್ದನು ಮತ್ತು ಆತನ ಹೊಣೆಗಾರಿಕೆ ಆತನ ಪಾಲನೆ-ಪೋಷಣೆಯಾದ ಹಾಗೂ ಆತ ಅಪರಾಧಗಳನ್ನು ಎಸಗಿದ ಬ್ರಿಟನ್‌ ಗೇ ಸೇರುತ್ತದೆ ಎಂದು ಸ್ಪಷ್ಟಪಡಿಸಿದೆ. (ಬ್ರಿಟನ್ ಈಗ ಇಂತಹ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಅಥವಾ ಜೀವಾವಧಿ ಶಿಕ್ಷೆಗೆ ಒಳಪಡಿಸಬೇಕು ಎಂದೇ ಯಾರಿಗಾದರೂ ಅನಿಸುತ್ತದೆ! – ಸಂಪಾದಕರು)

ಸಂಪಾದಕೀಯ ನಿಲುವು

  • ಪಾಕಿಸ್ತಾನಿ ಎಂದರೆ ಅಪರಾಧಿ ಮತ್ತು ಭಯೋತ್ಪಾದಕ ಎಂದೇ ಈಗ ಜಗತ್ತಿನಲ್ಲಿ ಗುರುತಿಸಲ್ಪಡುತ್ತಿದ್ದಾರೆ. ಜಗತ್ತು ಈಗ ಪಾಕಿಸ್ತಾನವನ್ನು 'ಭಯೋತ್ಪಾದಕ ದೇಶ' ಎಂದು ಘೋಷಿಸಿ ಅದರ ಮೇಲೆ ಎಲ್ಲಾ ರೀತಿಯ ಬಹಿಷ್ಕಾರ ಹೇರಬೇಕು! ಇದಕ್ಕಾಗಿ ಭಾರತವೂ ನೇತೃತ್ವ ವಹಿಸಬೇಕು!
  • ಭಾರತದ ವಿಭಜನೆ ಮಾಡಿ ಪಾಕಿಸ್ತಾನವನ್ನು ನಿರ್ಮಿಸುವಲ್ಲಿ ಬ್ರಿಟಿಷರ ದೊಡ್ಡ ಪಾತ್ರವಿತ್ತು. ಈಗ ಪಾಕಿಸ್ತಾನಿಗಳು ಬ್ರಿಟನ್‌ ಗೆ ಹೊರೆಯಾಗುತ್ತಿದ್ದರೆ, ಅದು ಅವರ ಕರ್ಮದ ಫಲ ಎಂದೇ ಹೇಳಬೇಕಾಗುತ್ತದೆ!