ಸಂತ ಬಾಳುಮಾಮಾ ದೇವಸ್ಥಾನದಲ್ಲಿ ೫೫ ಲಕ್ಷ ರೂಪಾಯಿಗಳ ಹಗರಣದ ಪ್ರಕರಣ

ಕೊಲ್ಲಾಪುರ – ರಾಜ್ಯದ ಲಕ್ಷಾಂತರ ಭಕ್ತರ ಶ್ರದ್ಧಾಕೇಂದ್ರವಾಗಿರುವ ಆದಮಾಪುರದ ‘ಸಂತ ಬಾಳುಮಾಮಾ ದೇವಸ್ಥಾನ’ದಲ್ಲಿ ೫೫ ಲಕ್ಷ ರೂಪಾಯಿಗಳ ಹಗರಣ ನಡೆದಿದೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಆಡಳಿತ ಮಂಡಳಿಯು ತತ್ಕಾಲೀನ ಧರ್ಮಾದಾಯ ನಿರೀಕ್ಷಕ ಅಧಿಕಾರಿ ರಾಗಿಣಿ ಖಡ್ಕೆ ಮತ್ತು ಸಂಬಂಧಿತ ಗುತ್ತಿಗೆದಾರನ ವಿರುದ್ಧ ದೂರು ದಾಖಲಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಗಿಣಿ ಖಡ್ಕೆ ಅವರ ವಿರುದ್ಧ ಈಗಾಗಲೇ ಅಮಾನತು ಕ್ರಮ ಕೈಗೊಳ್ಳಲಾಗಿದೆ. (ದೇವಸ್ಥಾನ ಸರಕಾರೀಕರಣದ ದುಷ್ಟರಿಣಾಮಗಳು ! ಯಾವಾಗ ಯಾವುದೇ ದೇವಸ್ಥಾನಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸಲಾಯಿತೋ, ಆಗ ಪ್ರತಿಯೊಂದು ಆಡಳಿತಾತ್ಮಕ ಕಚೇರಿಯಲ್ಲಿ ಯಾವುದಾದರೊಂದು ರೂಪದಲ್ಲಿ ಭ್ರಷ್ಟಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ಆದ್ದರಿಂದ ಸರಕಾರವು ದೇವಸ್ಥಾನಗಳನ್ನು ಆಡಳಿತಾಧಿಕಾರಿಗಳ ವಶಕ್ಕೆ ನೀಡದೆ, ಭಕ್ತರ ವಶದಲ್ಲೇ ನೀಡಬೇಕು ! – ಸಂಪಾದಕರು)
ಪ್ರಾಥಮಿಕ ಮಾಹಿತಿಯ ಪ್ರಕಾರ, ದೇವಸ್ಥಾನದ ಆಡಳಿತಾಧಿಕಾರಿಗಳ ಅವಧಿಯಲ್ಲಿ (ನವೆಂಬರ್ ೨೦೨೩ ರಿಂದ ಜುಲೈ ೨೦೨೫ರ ಅವಧಿಯಲ್ಲಿ) ದೇವಸ್ಥಾನದ ನಿಧಿಯಿಂದ ೫೫ ಲಕ್ಷ ರೂಪಾಯಿಗಳ ಚೆಕ್ ಅನ್ನು ಯಾವುದೇ ಕಾನೂನು ಸಮ್ಮತಿಯಿಲ್ಲದೆ, ನಿಯಮಗಳನ್ನು ಉಲ್ಲಂಘಿಸಿ ಗುತ್ತಿಗೆದಾರನಿಗೆ ನೀಡಲಾಗಿದೆ. ದೇವಸ್ಥಾನಕ್ಕೆ ದಾನವಾಗಿ ನೀಡಲಾದ ವಿವಿಧ ಭೂಮಿಗಳಿಗೆ ಸಂಬಂಧಿಸಿದಂತೆಯೂ ದೊಡ್ಡ ಮಟ್ಟದ ದುರ್ಬಳಕೆ ನಡೆದಿದೆ ಎಂದು ಆರೋಪಿಸಲಾಗಿದೆ.
ತಮಿಳುನಾಡು – ಗೋಹತ್ಯೆ ಮಾಡುವವರನ್ನು ಬೆಂಬಲಿಸುವ ಮುಸ್ಲಿಂ ಸಂಘಟನೆಗಳ ವಿರುದ್ಧ ಹಿಂದುತ್ವನಿಷ್ಠರ ಆಕ್ರೋಶ!
ಜಂತರ್ ಮಂತರ್: ೨೩ ದಿನಗಳಿಂದ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಅಂತ್ಯ
ಮಧ್ಯಪ್ರದೇಶದ ಸಚಿವ ಸಂಪುಟದಿಂದ ಸಮಾನ ನಾಗರಿಕ ಸಂಹಿತೆಗೆ ಅನುಮೋದನೆ
ತ್ರಿಪುರಾ ಡಿಜಿಪಿ ಅನುರಾಗ್ ಧನಖಡ್ ಮೃತದೇಹ ಪತ್ತೆ : Anurag Dhankar Death
ಗದ್ದಲದ ಕಾರಣದಿಂದ ಸಂಸತ್ತಿನ ಕಲಾಪ ದಿನವಿಡೀ ಮುಂದೂಡಿಕೆ
ಮೂರು ಷರತ್ತುಗಳನ್ನು ಒಪ್ಪಿದರೆ ಉಪವಾಸ ಸತ್ಯಾಗ್ರಹ ಅಂತ್ಯ ! – ಸೋನಮ್ ವಾಂಗ್ಚುಕ್