ನೆಹರು – ಗಾಂಧಿ ಹೆಸರಿನ ಮೇಲೆ ನಾವು ‘೩ – ೪ ತಲೆಮಾರು ಕುಳಿತು ತಿನ್ನುವಷ್ಟು’ ಗಳಿಸಿದ್ದೇವೆ !

  • ‘ಈಡಿ’ಯಿಂದ ಸೋನಿಯಾ ಗಾಂಧಿ ಅವರ ವಿಚಾರಣೆಯ ವಿರುದ್ಧ ಬೆಂಗಳೂರಿನಲ್ಲಿ ಆಂದೋಲನ !

  • ಕರ್ನಾಟಕ ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಆರ್. ರಮೇಶ ಕುಮಾರ ಇವರ ಕಾಂಗ್ರೆಸ್‌ನ ಪಾಪಕ್ಕೆ ಬೆಂಬಲ !

ಬೆಂಗಳೂರು – ನಾವು ನೆಹರು, ಇಂದಿರಾ ಗಾಂಧಿ ಮತ್ತು ಸೋನಿಯಾ ಗಾಂಧಿ ಇವರ ಹೆಸರಿನಲ್ಲಿ ನಮ್ಮ ಮುಂದಿನ ೩ – ೪ ತಲೆಮಾರಿಗೆ ಸಾಕಾಗುವಷ್ಟು ಆಸ್ತಿಯನ್ನು ಗಳಿಸಿದ್ದೇವೆ ! ನಾವು ಅವರಿಂದಲೇ ಅಧಿಕಾರ ಅನುಭವಿಸಿದ್ದೇವೆ. ಇಂದು ನಾವು ಬಲಿದಾನ ನೀಡದಿದ್ದರೆ ಭವಿಷ್ಯದಲ್ಲಿ ನಾವು ಊಟ ಮಾಡುವುದರಲ್ಲಿ ಹುಳ ಬೀಳುತ್ತದೆ. ನಾವೆಲ್ಲರೂ ಈಗ ಗಾಂಧಿ ಕುಟುಂಬದ ಋಣ ತೀರಿಸುವುದಿದೆ, ಎಂದು ಕಾಂಗ್ರೆಸ್ ಶಾಸಕ ಮತ್ತು ಕರ್ನಾಟಕ ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಆರ್. ರಮೇಶ ಕುಮಾರ ಇವರು ಹೇಳಿದರು.

(ಸೌಜನ್ಯ : Public TV)

ಈಡಿಯಿಂದ ಕಾಂಗ್ರೆಸ್‌ನ ಅಧ್ಯಕ್ಷೆ ಸೋನಿಯಾ ಗಾಂಧಿ ಇವರ ವಿಚಾರಣೆ ನಡೆಯುವುದರ ವಿರುದ್ಧ ಕಾಂಗ್ರೆಸನಿಂದ ಜುಲೈ ೨೧ ರಂದು ನಡೆಸಿರುವ ಆಂದೋಲನದ ಸಮಯದಲ್ಲಿ ಕುಮಾರ ಮಾತನಾಡುತ್ತಿದ್ದರು. ಆ ಸಮಯದಲ್ಲಿ ಆಂದೋಲನದಲ್ಲಿ ಕರ್ನಾಟಕದ ಕಾಂಗ್ರೆಸ್‌ನ ಹಿರಿಯ ನಾಯಕ ಡಿ.ಕೆ. ಶಿವಕುಮಾರ, ವಿರೋಧಿ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರ ಜೊತೆ ಅನೇಕ ನಾಯಕರು ಭಾಗಿಯಾಗಿದ್ದರು.

೧. ಕುಮಾರ ಮಾತು ಮುಂದುವರಿಸುತ್ತಾ, ದೇಶ ಮತ್ತು ಕಾಂಗ್ರೆಸ್ ಉಳಿಸುವುದಕ್ಕಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಸೋನಿಯಾ ಗಾಂಧಿಯವರಿಗೆ ನೈತಿಕ ಬೆಂಬಲ ನೀಡಬೇಕು. ಹೀಗೆ ಮಾಡಿದರೆ ಮಾತ್ರ ನಾವು ಎರಡು ಸಲ ಸೇವಿಸುವ ಅನ್ನದ ಸಾರ್ಥಕತೆ ಆಗುವುದು.

೨. ಭಾಜಪದಿಂದ ಮೊದಲೇ ಕಾಂಗ್ರೆಸ್ ಮೇಲೆ ಭ್ರಷ್ಟಾಚಾರದ ಆರೋಪ ಮಾಡಲಾಗುತ್ತಿರುವಾಗ ಈಗ ಕುಮಾರ ಇವರ ಹೇಳಿಕೆಯಿಂದ ಕಾಂಗ್ರೆಸ್ ಮೇಲೆ ಬಹಳಷ್ಟು ಟೀಕೆ ಮಾಡಲಾಗುತ್ತಿದೆ. ಡಿಸೆಂಬರ್ ೨೦೨೧ ರಲ್ಲಿ ಒಂದು ಪ್ರಕರಣದ ಸಂಬಂಧಿಸಿದಂತೆ ರಮೇಶ ಕುಮಾರ ಇವರು, ‘ಒಂದು ಗಾದೆ ಇದೆ ಯಾವಾಗ ಬಲಾತ್ಕಾರ ನಡೆದೇ ನಡೆಯುತ್ತದೆ ಆಗ ಮಲಗಿ ಮತ್ತು ಅದರ ಆನಂದ ಪಡೆಯಿರಿ !’ (ಈ ರೀತಿ ಹೇಳಿಕೆ ನೀಡಿದ್ದರೂ ಕುಮಾರ ಅವರನ್ನು ಅಮಾನತುಗೊಳಿಸಲಿಲ್ಲ’, ಇದರಿಂದ ಕಾಂಗ್ರೆಸ್‌ನಿಂದ ಕುಮಾರ ಇವರ ಹೇಳಿಕೆಗೆ ಪರೋಕ್ಷವಾಗಿ ಬೆಂಬಲವೇ ಇದೆ, ಎಂದು ಯಾರಾದರೂ ಹೇಳಿದರೆ ಅದರಲ್ಲಿ ತಪ್ಪೇನು ? – ಸಂಪಾದಕರು) ಇದರಿಂದ ಅವರ ಮೇಲೆ ಬಹಳಷ್ಟು ಟೀಕೆಗಳು ನಡೆದಿದ್ದವು.

ಸಂಪಾದಕೀಯ ನಿಲುವು

ಇದರಿಂದ ಕಾಂಗ್ರೆಸ್ ನಾಯಕರು ಕಳೆದ ೭೫ ವರ್ಷದಿಂದ ದೇಶಕ್ಕೆ ಎಷ್ಟು ಪ್ರಮಾಣದಲ್ಲಿ ದೋಚಿದ್ದಾರೆ, ಎಂಬುದು ಗಮನಕ್ಕೆ ಬರುತ್ತದೆ ! ಈ ಪಾಪದಿಂದಾಗಿಯೇ ಕಾಂಗ್ರೆಸ್ ದೇಶದ ರಾಜಕಾರಣದಿಂದ ಆದಷ್ಟು ಬೇಗನೆ ಅಳಿಸಿ ಹೋಗುವುದು, ಇದು ನಿಶ್ಚಿತ !