ಆತ್ಮಹತ್ಯೆಯ ಶಂಕೆ ವ್ಯಕ್ತ

ಅಗರತಲಳಾ (ತ್ರಿಪುರಾ): ತ್ರಿಪುರಾದ ಪೋಲೀಸ್ ಮಹಾಸಂಚಾಲಕರಾದ ಅನುರಾಗ ಧನಖಡರವರ ಮೃತದೇಹವು ಅಗರ್ತಲಾದ ಪೊಲೀಸ್ ಮುಖ್ಯಾಲಯದಲ್ಲಿ ಪತ್ತೆಯಾಗಿದ್ದರಿಂದ ತೀವ್ರ ಸಂಚಲನ ಮೂಡಿಸಿದೆ. ಅನುರಾಗ ಧನಖಡರವರು ತಮ್ಮ ಕಚೇರಿಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಅವರ ಮೃತದೇಹವನ್ನು ಅಗರತಳಾದ ‘ಜಿಬಿ’ ಆಸ್ಪತ್ರೆಗೆ ಸಾಗಿಸಲಾಗಿದೆ. ಅವರ ಸಾವಿನ ಕಾರಣವು ಇನ್ನೂ ಸ್ಪಷ್ಟವಾಗಿಲ್ಲ. ಈ ಪ್ರಕರಣದಲ್ಲಿ ಆತ್ಮಹತ್ಯೆಯ ಶಂಕೆಯನ್ನು ವ್ಯಕ್ತಪಡಿಸಲಾಗುತ್ತಿದೆ.
೧. ಈ ಘಟನೆಯ ಮಾಹಿತಿ ದೊರೆಯುತ್ತಲೇ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಅವರು ಕಚೇರಿಯ ಆವರಣದ ಪ್ರವೇಶವನ್ನು ತಡೆದು ತನಿಖೆಯನ್ನು ಪ್ರಾರಂಭಿಸಿದರು.
೨. ಘಟನೆಯ ಮಾಹಿತಿ ತಿಳಿಯುತ್ತಲೇ ತ್ರಿಪುರಾದ ಮುಖ್ಯಮಂತ್ರಿ ಪ್ರೊ. (ಡಾ.) ಮಾಣಿಕ ಸಾಹಾ ರವರು ತಕ್ಷಣವೇ ಪೊಲೀಸ್ ಕೇಂದ್ರ ಕಚೇರಿಗೆ ಆಗಮಿಸಿದರು.
೩. ಮುಖ್ಯ ಕಾರ್ಯದರ್ಶಿ ಜೆ.ಕೆ. ಸಿನ್ಹಾ ರವರೊಂದಿಗೆ ಗೃಹ ಇಲಾಖೆಯ ಹಲವು ಹಿರಿಯ ಅಧಿಕಾರಿಗಳು ಬೃಹತ್ ಪೊಲೀಸ್ ಭದ್ರತೆಯೊಂದಿಗೆ ‘ಜಿಬಿ’ ಆಸ್ಪತ್ರೆಗೆ ತಲುಪಿದರು.
ಅನುರಾಗ ಧನಖಡ ಯಾರು?
ಅನುರಾಗ ಧನಖಡರವರು ೧೯೯೪ ರ ಬ್ಯಾಚ್‌ನ ‘ಐ.ಪಿ.ಎಸ್.’ ಅಧಿಕಾರಿಯಾಗಿದ್ದರು. ಅವರು ೨೦೨೫ ರಲ್ಲಿ ತ್ರಿಪುರಾದ ಪೋಲೀಸ್ ಮಹಾಸಂಚಾಲಕರಾಗಿ ಅಧಿಕಾರ ವಹಿಸಿದ್ದರು. ಅನುರಾಗ ಧನಖಡರವರು ‘ಸಿಬಿಐ’ (ಕೇಂದ್ರೀಯ ತನಿಖಾ ದಳ) ನಲ್ಲಿದ್ದಾಗ ಪರಾರಿಯಾಗಿದ್ದ ಉದ್ಯಮಿ ನೀರವ ಮೋದಿ ಪ್ರಕರಣದ ತನಿಖೆಯ ನೇತೃತ್ವವನ್ನು ವಹಿಸಿದ್ದರು. ಅಲ್ಲದೆ, ಅವರು ೧೯೮೪ ರ ಸಿಖ್ ವಿರೋಧಿ ದಂಗೆಗಳ ತನಿಖೆಗಾಗಿ ರಚಿಸಲಾಗಿದ್ದ ‘ಎಸ್.ಐ.ಟಿ.’ ಯ (ವಿಶೇಷ ತನಿಖಾ ತಂಡ) ನೇತೃತ್ವವನ್ನೂ ವಹಿಸಿದ್ದರು.
ತಮಿಳುನಾಡು – ಗೋಹತ್ಯೆ ಮಾಡುವವರನ್ನು ಬೆಂಬಲಿಸುವ ಮುಸ್ಲಿಂ ಸಂಘಟನೆಗಳ ವಿರುದ್ಧ ಹಿಂದುತ್ವನಿಷ್ಠರ ಆಕ್ರೋಶ!
ಜಂತರ್ ಮಂತರ್: ೨೩ ದಿನಗಳಿಂದ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಅಂತ್ಯ
ಮಧ್ಯಪ್ರದೇಶದ ಸಚಿವ ಸಂಪುಟದಿಂದ ಸಮಾನ ನಾಗರಿಕ ಸಂಹಿತೆಗೆ ಅನುಮೋದನೆ
ಆಗಿನ ಧಾರ್ಮಿಕ ದತ್ತಿ ಇಲಾಖೆಯ ನಿರೀಕ್ಷಕಿ ರಾಗಿಣಿ ಖಡ್ಕೆ ಸೇರಿದಂತೆ ಗುತ್ತಿಗೆದಾರನ ವಿರುದ್ಧ ದೂರು ದಾಖಲು !
ಗದ್ದಲದ ಕಾರಣದಿಂದ ಸಂಸತ್ತಿನ ಕಲಾಪ ದಿನವಿಡೀ ಮುಂದೂಡಿಕೆ
ಮೂರು ಷರತ್ತುಗಳನ್ನು ಒಪ್ಪಿದರೆ ಉಪವಾಸ ಸತ್ಯಾಗ್ರಹ ಅಂತ್ಯ ! – ಸೋನಮ್ ವಾಂಗ್ಚುಕ್