ಹರಿಯಾಣಾದ ಶಾಸಕರಿಗೆ ಸುಲಿಗೆಗಾಗಿ ಬೆದರಿಕೆ ಒಡ್ಡಿದ ೬ ಅಪರಾಧಿಗಳ ಬಂಧನ

ಭೋಂಡಸಿ (ಹರಿಯಾಣಾ) – ಸುಲಿಗೆಗಾಗಿ ಶಾಸಕರಿಗೆ ಕೊಲೆ ಬೆದರಿಕೆ ನೀಡಿದ ಪ್ರಕಾರದಲ್ಲಿ ಹರಿಯಾಣಾದ ಪೊಲೀಸರ ವಿಶೇಷ ಕಾರ್ಯ ದಳದ ಪೊಲೀಸರು ೬ ಜನರನ್ನು ಬಂಧಿಸಿದ್ದಾರೆ. ರಾಜ್ಯದಲ್ಲಿ ೪ ಶಾಸಕರಿಗೆ ಜೂನ್ ೨೪ ರಿಂದ ೨೮ ರ ಕಾಲಾವಧಿಯಲ್ಲಿ ಸಂಚಾರಿವಾಣಿಯ ಮೂಲಕ ಬೆದರಿಕೆ ನೀಡಲಾಗಿದೆ. ಪಾಕಿಸ್ತಾನದ ೧೦ ಜನರಿಂದ ಬೆದರಿಕೆ ಕರೆಗಳು ಬಂದಿದ್ದವು. ಬಂಧಿತರಲ್ಲಿ ದುಲೇಶ ಆಲಂ ಮತ್ತು ಬದರೆ ಆಲಂ ಇವರನ್ನು ಮುಂಬೈಯಿಂದ, ಹಾಗೂ ಅಮಿತ ಯಾದವ, ಸಾದಿಕ ಅನ್ವರ್, ಸನೋಜ ಕುಮಾರ, ಮತ್ತು ಕಾಶ ಆಲಂ ಇವರನ್ನು ಬಿಹಾರದ ಮುಜಪ್ಫರನಗರದಿಂದ ಬಂಧಿಸಲಾಗಿದೆ. ಇವರಿಂದ ೫೫ ಎಟಿಎಂ ಕಾರ್ಡ್, ೨೪ ಸಂಚಾರಿವಾಣಿಗಳು, ೫೬ ಸಿಮ್ ಕಾರ್ಡ್, ೨೨ ಪಾಸ್ ಬುಕ್ ಮತ್ತು ಚೆಕ್ ಬುಕ್, ೩ ಲಕ್ಷ ೯೭ ಸಾವಿರ ನಗದು, ಒಂದು ನಾಲ್ಕು ಚಕ್ರಗಳ ವಾಹನ ಮುಂತಾದವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರು ಕುಶಲ ಅಪರಾಧಿಗಳು. ಆದರೆ ಅವರಿಗೆ ಭಯೋತ್ಪಾದಕ ಸಂಘಟನೆ ಜೊತೆ ಸಂಬಂಧವಿಲ್ಲ. ಭಾರತದ ಜೊತೆಗೆ ಪಾಕಿಸ್ತಾನ ಮತ್ತು ಪಶ್ಚಿಮ ಏಷಿಯಾದ ಕೆಲವು ದೇಶದಲ್ಲಿ ಅವರ ಸಹಚರರು ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ಪಾಕಿಸ್ತಾನದಲ್ಲಿಯೂ ಇದ್ದಾರೆ ಅಪರಾಧಿಗಳ ಸಹಚರರು !