ಜಂಜೀರಾ ಕೋಟೆಯ ಮೇಲೆ ಶಾಶ್ವತವಾಗಿ ಕೇಸರಿ ಧ್ವಜ ಹಾರಿಸಿ, ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು! : Sahyadri Foundation Hindustan Alert!

ಜಂಜೀರಾ ಕೋಟೆಯ ಮೇಲೆ ಸ್ಥಳೀಯ ಮತಾಂಧ ಮುಸ್ಲಿಮರಿಂದ ಧ್ವಜ ಹಾರಿಸಲು ವಿರೋಧ!

ಸಹ್ಯಾದ್ರಿ ಪ್ರತಿಷ್ಠಾನ ಹಿಂದೂಸ್ತಾನ್’ನ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ.

ಪಿಂಪರಿ (ಪುಣೆ ಜಿಲ್ಲೆ) – ಐತಿಹಾಸಿಕ ಜಂಜೀರಾ ಕೋಟೆಯ ಮೇಲೆ ಸ್ಥಳೀಯ ಮತಾಂಧ ಮುಸ್ಲಿಮರು ಕೇಸರಿ ಧ್ವಜ ಹಾರಿಸಲು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸರಕಾರ ಮುಂದಿನ 3 ತಿಂಗಳಲ್ಲಿ ಗೌರವಯುತವಾಗಿ ಶಾಶ್ವತವಾಗಿ ಕೇಸರಿ ಧ್ವಜ ಹಾರಿಸಬೇಕು; ಇಲ್ಲದಿದ್ದರೆ ಕೇಂದ್ರ ಪುರಾತತ್ವ ಇಲಾಖೆಯ ಕಚೇರಿಯ ಮುಂದೆ ಮತ್ತೆ ತೀವ್ರ ಆಂದೋಲನ ಹೂಡಲಾಗುವುದು ಎಂದು ‘ಸಹ್ಯಾದ್ರಿ ಪ್ರತಿಷ್ಠಾನ ಹಿಂದುಸ್ತಾನ್’ ಸಂಸ್ಥಾಪಕ ಡಾ. ಶ್ರಮಿಕ್ ಗೋಜಮಗುಂಡೆ ಪಿಂಪರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು. ಕೋಟೆಯ ಮೇಲಿನ ಕೇಸರಿ ಧ್ವಜದ ಶಾಶ್ವತ ರಕ್ಷಣೆ ಮತ್ತು ನಿರ್ವಹಣೆಯ ಸಂಪೂರ್ಣ ಜವಾಬ್ದರಿಯನ್ನು ವಹಿಸಿಕೊಳ್ಳಲು ಪ್ರತಿಷ್ಠಾನ ಸಿದ್ಧವಿದೆ ಎಂದೂ ಅವರು ಸ್ಪಷ್ಟಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರತಿಷ್ಠಾನದ ರಾಜ್ಯ ಸಂಪರ್ಕ ಪ್ರಮುಖ ಗೌರವ್ ಶೇವಳೆ, ಗಣೇಶ್ ರಜ್ಪೂತ್ ಮುಂತಾದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜಂಜೀರಾ ಕೋಟೆಯ ಮೇಲೆ ಸ್ಥಳೀಯ ಮತಾಂಧ ಮುಸ್ಲಿಮರಿಂದ ಧ್ವಜ ಹಚ್ಚಲು 2016 ನೇ ಇಸವಿಯಲ್ಲಿ ದೊಡ್ಡ ವಿರೋಧವಿತ್ತು ಮತ್ತು ಇತರ ಸಮಯಗಳಲ್ಲೂ ವಿರೋಧಿಸಲಾಗುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಯಿತು.

ಗಡಿಯಲ್ಲಿ ಘೋಷಣೆ ಕೂಗುವುದು, ಕೇಸರಿ ಧ್ವಜ ಹಚ್ಚುವುದಕ್ಕೆ ಯಾವಾಗಲೂ ವಿರೋಧ

ಮಹಾರಾಷ್ಟ್ರ ರಾಜ್ಯ ಸಂಪರ್ಕ ಪ್ರಮುಖ ಶ್ರೀ. ಗೌರವ್ ಶೇವಳೆ ಅವರು ‘ಸನಾತನ ಪ್ರಭಾತ’ಗೆ ಈ ಕುರಿತು ಮಾಹಿತಿ ನೀಡುತ್ತಾ, ಜಂಜೀರಾ ಕೋಟೆಗೆ ಮುರುಡಿನಿಂದ ದೋಣಿಯ ಮೂಲಕ ಹೋಗಬೇಕಾಗುತ್ತದೆ. ದೋಣಿ ಚಾಲಕ ಮತ್ತು ಗೈಡ್ (ಮಾರ್ಗದರ್ಶಕ) ಸ್ಥಳೀಯ ಮುಸ್ಲಿಮರಾಗಿದ್ದಾರೆ. ಈ ಕೋಟೆಯ ಮೇಲೆ ಘೋಷಣೆ ಕೂಗುವುದು, ಕೇಸರಿ ಧ್ವಜ ಹಾರಿಸುವುದಕ್ಕಾಗಿ ಛತ್ರಪತಿ ಶಿವಾಜಿ ಮಹಾರಾಜ ಪ್ರೇಮಿಗಳಿಗೆ ಈ ಮುಸ್ಲಿಮರಿಂದ ವಿರೋಧ ವ್ಯಕ್ತವಾಗುತ್ತದೆ. ಈ ಕೋಟೆಯು ವಾಸ್ತವವಾಗಿ ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಈ ಗಡಿಯಲ್ಲಿ ಶಾಶ್ವತವಾಗಿ ಕೇಸರಿ ಧ್ವಜವನ್ನು ಹಾರಿಸಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ. ಇದಕ್ಕಾಗಿ ನಾವು ಈ ಜುಲೈ 9 ರಂದು ಆಂದೋಲನವನ್ನೂ ಮಾಡಿದ್ದೇವೆ. ಪ್ರಸ್ತುತ 3 ತಿಂಗಳು ಮಳೆಗಾಲವಿರುವುದರಿಂದ ಗಡಿಗೆ ಹೋಗಲು ಸಾಧ್ಯವಿಲ್ಲ, ಅಲ್ಲಿಯವರೆಗೆ ನಾವು ಜನಜಾಗೃತಿ ಮೂಡಿಸಲಿದ್ದೇವೆ.

ಸಂಪಾದಕೀಯ ನಿಲುವು

ಇಂತಹ ಎಚ್ಚರಿಕೆಯನ್ನು ಯಾಕೆ ನೀಡಬೇಕಾಗುತ್ತದೆ? ಪೊಲೀಸರು ನಿದ್ದೆ ಮಾಡುತ್ತಿದ್ದಾರೆಯೇ?