ಗ್ರಾಹಕ ರಕ್ಷಣಾ ವೇದಿಕೆಯಿಂದ ಛಡಿಯೇಟು

ನೋಯ್ಡಾ (ಉತ್ತರ ಪ್ರದೇಶ) – ರಾಜ್ಯದ ಗೌತಮ ಬುದ್ಧ ನಗರ ಜಿಲ್ಲಾ ಗ್ರಾಹಕ ರಕ್ಷಣಾ ವೇದಿಕೆಯು ೪ ವರ್ಷದ ಬಾಲಕಿಯ ಮೇಲೆ ಬೀದಿ ನಾಯಿಯೊಂದು ದಾಳಿ ನಡೆಸಿದ ಪ್ರಕರಣದಲ್ಲಿ, ಇಲ್ಲಿನ ಕೇಂದ್ರಿಯ ವಿಹಾರ ೨ರ ‘ರೆಸಿಡೆಂಟ್ ವೆಲಫೇರ್ ಅಸೋಸಿಯೇಷನ್’ಗೆ ೧ ಲಕ್ಷ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶಿಸಿದೆ. ಬಾಲಕಿಗೆ ಆದ ಗಾಯಗಳು ಮತ್ತು ಈ ದಾಳಿಯಿಂದ ಆಕೆಗೆ ಉಂಟಾದ ಮಾನಸಿಕ ಕಿರುಕುಳವನ್ನು ಪರಿಗಣಿಸಿ ಆಯೋಗ ಈ ಆದೇಶ ನೀಡಿದೆ. ಜೊತೆಗೆ ಕಾನೂನು ವೆಚ್ಚದ ಪರಿಹಾರವಾಗಿ ಹೆಚ್ಚುವರಿ ೫,೦೦೦ ರೂಪಾಯಿಗಳನ್ನು ನೀಡುವಂತೆಯೂ ಆದೇಶಿಸಲಾಗಿದೆ.
ದೂರುದಾರರ ಪ್ರಕಾರ, ಅವರ ೪ ವರ್ಷದ ಮಗಳ ಮೇಲೆ ರೆಸಿಡೆಂಟ್ ವೆಲಫೇರ್ ಅಸೋಸಿಯೇಷನ್ ಕಚೇರಿಯ ಹಿಂಭಾಗದಲ್ಲಿರುವ ಉದ್ಯಾನವನದಲ್ಲಿ ಬೀದಿ ನಾಯಿಗಳು ದಾಳಿ ನಡೆಸಿದ್ದವು. ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಬಾಲಕಿಯನ್ನು ರಕ್ಷಿಸಿದರು; ಆದರೆ ಈ ದಾಳಿಯಲ್ಲಿ ಬಾಲಕಿಯ ಬೆನ್ನಿಗೆ ಗಂಭೀರ ಗಾಯಗಳಾಗಿದ್ದವು. ದೂರುದಾರರು ತಮ್ಮ ಹೇಳಿಕೆಯಲ್ಲಿ,ಇದು ಮೊದಲ ದಾಳಿಯಲ್ಲ; ಈ ಮುಂಚೆಯೂ ಈ ಪ್ರದೇಶದಲ್ಲಿ ಹಿರಿಯ ನಾಗರಿಕರು, ಮನೆಗೆಲಸ ಮಾಡುವ ಮಹಿಳೆಯರು, ಉದ್ಯೋಗಸ್ಥರು ಹಾಗೂ ಯುವಕರ ಮೇಲೆಯೂ ಬೀದಿ ನಾಯಿಗಳು ದಾಳಿ ಮಾಡಿವೆ ಎಂದು ತಿಳಿಸಿದ್ದಾರೆ.
ಶ್ರೀರಾಮ ಮಂದಿರದಲ್ಲಿ ದೇಣಿಗೆ ಕಳುವಾಗುವುದು, ಸಮಾಜದ ನೈತಿಕ ಅಧಃಪತನದ ಪರಾಕಾಷ್ಠೆ! – ನ್ಯಾಯಮೂರ್ತಿ ಅತುಲ್ ಶ್ರೀಧರನ್, ಅಲಹಾಬಾದ್ ಹೈಕೋರ್ಟ್
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.
ಲಾಠಿಚಾರ್ಜ್ನ ವೀಡಿಯೊಗಳನ್ನು ನೋಡಲು ನಮ್ಮ ಬಳಿ ಸಮಯವಿಲ್ಲ!
ರಾಜಸ್ಥಾನದಲ್ಲಿ ೧೯೯೬ ರಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದ ತೀರ್ಪನ್ನು ರದ್ದುಗೊಳಿಸಿದ ಸರ್ವೋಚ್ಛ ನ್ಯಾಯಾಲಯ
ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಂದ ಗಲಾಟೆ : ಎರಡೂ ಸದನಗಳ ಕಲಾಪ ಕೆಲವು ಗಂಟೆಗಳ ಕಾಲ ಮುಂದೂಡಿಕೆ : Adjournment of both houses
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation