ಗದ್ದಲದ ಕಾರಣದಿಂದ ಸಂಸತ್ತಿನ ಕಲಾಪ ದಿನವಿಡೀ ಮುಂದೂಡಿಕೆ

ನವದೆಹಲಿ – ಸಂಸತ್ತಿನ ಮುಂಗಾರು ಅಧಿವೇಶನವು ಜುಲೈ ೨೦ ರಂದು ಬೆಳಿಗ್ಗೆ ಪ್ರಾರಂಭವಾಗುತ್ತಿದ್ದಂತೆಯೇ, ಪ್ರತಿಪಕ್ಷಗಳು ‘ನೀಟ್’ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶ್ರೀರಾಮಮಂದಿರದಲ್ಲಿನ ದೇಣಿಗೆ ಕಳ್ಳತನ ಮುಂತಾದ ವಿಷಯಗಳ ಕುರಿತು ತೀವ್ರ ಗದ್ದಲ ಸೃಷ್ಟಿಸಿದವು. ಈ ಗದ್ದಲದಿಂದಾಗಿ ಸದನದ ಕಲಾಪವನ್ನು ಮೊದಲು ೧೨ ಗಂಟೆಯವರೆಗೆ ಮುಂದೂಡಲಾಗಿತ್ತು; ಆದರೆ ಕಲಾಪ ಪುನಃ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷಗಳು ಮತ್ತೆ ಗದ್ದಲ ಎಬ್ಬಿಸಿದ್ದರಿಂದ ಅದನ್ನು ಮಧ್ಯಾಹ್ನ ೧೨:೩೦ ರ ವರೆಗೆ ಮತ್ತು ನಂತರ ದಿನವಿಡೀ ಮುಂದೂಡಲಾಯಿತು.

ರಾಜ್ಯಸಭೆಯಲ್ಲೂ ಇದೇ ಪರಿಸ್ಥಿತಿ ಮುಂದುವರಿದಿದ್ದರಿಂದ ಆ ಸದನವನ್ನೂ ಸಹ ದಿನವಿಡೀ ಮುಂದೂಡಲಾಯಿತು.

ಸಂಪಾದಕೀಯ ನಿಲುವು

ಸಂಸತ್ತಿನ ಕಲಾಪ ಗದ್ದಲದಿಂದಾಗಿ ಮುಂದೂಡಲ್ಪಡಲು ಕಾರಣರಾದವರ ಸದಸ್ಯತ್ವ ರದ್ದುಗೊಳಿಸುವುದರ ಜೊತೆಗೆ, ಅವರಿಂದ ಕಲಾಪಕ್ಕಾಗಿ ತಗುಲುವ ವೆಚ್ಚವನ್ನು ವಸೂಲಿ ಮಾಡಬೇಕು !