ಕಿರಿಯ ವಿದ್ಯಾರ್ಥಿಗಳಿಗೆ ಕಪಾಳಕ್ಕೆ ಹೊಡೆಯುತ್ತಿದ್ದ ಹಿರಿಯ ವಿದ್ಯಾರ್ಥಿಗಳು!

  • ರತಲಾಮ (ಮಧ್ಯಪ್ರದೇಶ) ವೈದ್ಯಕೀಯ ಮಹಾವಿದ್ಯಾಲಯದಲ್ಲಿ ರಾಗಿಂಗ್ (ಚಿತ್ರಹಿಂಸೆ)

  • ವಸತಿಗೃಹದಲ್ಲಿ ವಾರ್ಡನ್ ಮೇಲೆ ಮದ್ಯದ ಬಾಟಲುಗಳ ಮೂಲಕ ದಾಳಿಯ ಪ್ರಯತ್ನ !

(ವಾರ್ಡನ್ ಎಂದರೆ ವ್ಯವಸ್ಥೆ ನೋಡಿಕೊಳ್ಳುವವರು ಮತ್ತು ಶಿಸ್ತು ಪಾಲಿಸುವ ಅಧಿಕಾರಿ.)

ರತಲಾಮ (ಮಧ್ಯಪ್ರದೇಶ) – ಇಲ್ಲಿಯ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯದ ವಸತಿಗೃಹದಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ರಾಗಿಂಗ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಇದರಲ್ಲಿ ಹಿರಿಯ ವಿದ್ಯಾರ್ಥಿಗಳ ಕಿರಿಯ ವಿದ್ಯಾರ್ಥಿಗಳ ಕಪಾಳಕ್ಕೆ ಹೊಡೆಯುತ್ತಿರುವುದು ಕಾಣುತ್ತದೆ. ಈ ಘಟನೆ ಎರಡು ದಿನಗಳ ಹಿಂದಿನದ್ದು ಎಂದು ಹೇಳಲಾಗುತ್ತಿದೆ. ಈ ಮಾಹಿತಿ ಸಿಕ್ಕಿದ ತಕ್ಷಣ ವಸತಿಗೃಹದ ವಾರ್ಡನ್ ಡಾ. ಅನುರಾಗ ಜೈನ್ ಇವರು ಅಲ್ಲಿ ತಲುಪಿದರು, ಆದರೆ ಕೆಲವು ವಿದ್ಯಾರ್ಥಿಗಳು ಜೈನ್ ಇವರ ಮೇಲೆ ಮದ್ಯದ ಬಾಟಲಿಗಳನ್ನು ಎಸೆದು ದಾಳಿ ನಡೆಸಿದರು, ಅವರು ಸ್ವಲ್ಪದರಲ್ಲಿ ಬಚಾವಾದರು. ಇದರ ನಂತರ ಮಹಾವಿದ್ಯಾಲಯದ ಶಿಸ್ತು ಸಮಿತಿಯಿಂದ ಕ್ರಮಕೈಗೊಳ್ಳಲಾಯಿತು. ಈ ವಿಷಯವಾಗಿ ಮಹಾವಿದ್ಯಾಲಯದ ವ್ಯವಸ್ಥಾಪಕರಿಂದ ಯಾವುದೇ ಮಾಹಿತಿ ನೀಡಲಾಗಿಲ್ಲ.

ಈ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಈ ಮೊದಲು ಸಹ ರಾಗಿಂಗ್ ಪ್ರಕರಣ ನಡೆದಿರುವುದು ತಿಳಿದು ಬಂದಿದೆ. ಈ ಪ್ರಕರಣದಲ್ಲಿ ಕೆಲವು ವಿದ್ಯಾರ್ಥಿಗಳನ್ನು ಏಳು ದಿನಕ್ಕಾಗಿ ಅಮಾನತುಗೊಳಿಸಲಾಗಿದೆ, ಆದರೆ ಅದರ ನಂತರ ಕೂಡ ಇಲ್ಲಿಯ ವಿದ್ಯಾರ್ಥಿಗಳಿಗೆ ಶಿಸ್ತು ಬಂದಿಲ್ಲ, ಎಂದು ಈ ಘಟನೆಯಿಂದ ತಿಳಿಯುತ್ತದೆ.

ಸಂಪಾದಕೀಯ ನಿಲುವು

ವೈದ್ಯಕೀಯ ಶಿಕ್ಷಣ ಪಡೆಯುವ ವಿದ್ಯಾರ್ಥಿ ಮುಂದೆ ಡಾಕ್ಟರ್ ಆಗಿ ಜನರಿಗೆ ವೈದ್ಯಕೀಯ ಸೇವೆ ನೀಡುವವರಿದ್ದಾರೆ, ಆದರೆ ಅವರ ಮೇಲೆ ಎಂತಹ ಸಂಸ್ಕಾರ ಆಗಿದೆ? ಎಂದು ಈ ಘಟನೆಯಿಂದ ತಿಳಿದು ಬರುತ್ತದೆ. ಕೇವಲ ಪುಸ್ತಕದ ಶಿಕ್ಷಣ ನೀಡುವುದಲ್ಲ, ಅವರಿಗೆ ಸಂಸ್ಕಾರದ ಶಿಕ್ಷಣ ಬೇಕಾಗಿದೆ.