ಫತೇಹಪುರದಲ್ಲಿ ಹಿಂದೂ ಧರ್ಮದ ಸ್ವೀಕರಿಸಿದ ನಿವೃತ್ತ ಸರಕಾರಿ ಸಿಬ್ಬಂದಿ ಅಬ್ದುಲ ಜಮೀಲ

ಫತೇಹಪುರ (ಉತ್ತರಪ್ರದೇಶ) – ಇಲ್ಲಿಯ ಸಂಕಟಮೋಚನನ ಮಂದಿರದಲ್ಲಿ ೬೬ ವರ್ಷದ ಅಬ್ದುಲ ಜಮೀಲ ಇವರು ಇಸ್ಲಾಂ ತ್ಯಜಿಸಿ ಹಿಂದೂ ಧರ್ಮವನ್ನು ಸ್ವೀಕರಿಸಿದರು. ಈ ವೇಳೆ ಸಂಬಂಧಿತ ಧಾರ್ಮಿಕ ವಿಧಿ ವಿಧಾನಗಳನ್ನು ನರೆವೇರಿಸಲಾಯಿತು. ಇದಾದ ನಂತರ ಅವರಿಗೆ ಶ್ರವಣಕುಮಾರ ಎಂದು ಮರು ನಾಮಕರಣ ಮಾಡಲಾಯಿತು. ಅವರು ನಿವೃತ್ತ ಸರಕಾರಿ ಸಿಬ್ಬಂದಿಯಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅವರು ಸನಾತನ ಧರ್ಮದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ೨ ವರ್ಷಗಳ ಹಿಂದೆ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವ ಇಚ್ಛೆ ವ್ಯಕ್ತಪಡಿಸಿದ್ದರು. ಕೆಲವು ದಿನಗಳ ಹಿಂದೆ ಅಖಿಲ ಭಾರತ ಹಿಂದೂ ಮಹಾಸಭಾದ ಪ್ರಾಂತೀಯ ಪ್ರಧಾನ ಮಂತ್ರಿಯೊಂದಿಗೆ ಅವರ ಪರಿಚಯವಾಯಿತು. ಅದರ ನಂತರ ಅವರು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ನಿರ್ಧರಿಸಿದರು.

ಇಸ್ಲಾಂನಲ್ಲಿ ಬಹಳ ತಾರತಮ್ಯ!

ಶ್ರವಣಕುಮಾರ ಮಾತನಾಡಿ ಇಸ್ಲಾಂ ಧರ್ಮದಲ್ಲಿ ತುಂಬಾ ತಾರತಮ್ಯವಿದೆ. ಒಡಹುಟ್ಟಿದವರೂ ಕೈಕೊಡುತ್ತಾರೆ. ಜನರು ಸ್ವಾರ್ಥಕ್ಕಾಗಿ ಮತ್ತು ಸಂಪತ್ತಿಗಾಗಿ ಕೊಲ್ಲುತ್ತಾರೆ. ಇದರಿಂದ ಬಳಲುತ್ತಿದ್ದೆ. ನಾನು ಹಿಂದೂ ಧರ್ಮವನ್ನು ಸ್ವಿಕರಿಸುತ್ತೇನೆ ಎಂದು ನಿರ್ಧರಿಸಿದೆ. ನಾನು ಭಗವಾನ ಶ್ರೀರಾಮನನ್ನು ಆರಾಧಿಸುತ್ತೇನೆ ಮತ್ತು ಅವನು ನನ್ನ ಆರಾಧ್ಯ ದೇವತೆ. ನಾನು ಮೊದಲ ಬಾರಿಗೆ ‘ವಿಷ್ಣು ವಿಷ್ಣು’ ಎನ್ನುತ್ತ ಹವನ ಮಾಡಲು ಪ್ರಾರಂಭಿಸಿದೆ ಆಗ ನನಗೆ ತುಂಬಾ ಒಳ್ಳೆಯದನಿಸಿತು. ನಾನು ಮತಾಂತರಗೊಳ್ಳದೆ ನನ್ನ ಮೂಲ ಸನಾತನ ಧರ್ಮಕ್ಕೆ ಮರಳಿದ್ದೇನೆ. ಶ್ರೀರಾಮನು ಆಖಿಲ ಭಾರತಕ್ಕೆ ಮೂಲಪುರುಷನಾಗಿದ್ದಾನೆ. ಅದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು. ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವಂತೆ ನನ್ನ ಮೇಲೆ ಯಾವುದೇ ಒತ್ತಡ ಇರಲಿಲ್ಲ. ನಮ್ಮ ಪೂರ್ವಜರು ಕ್ಷತ್ರಿಯರು. ನನ್ನ ಮುತ್ತಜನ ಹೆಸರು ಪುಟ್ಟುಸಿಂಗ. ನಮ್ಮ ಕುಟುಂಬ ಮೊದಲು ರಜಪೂತರೊಂದಿಗೆ ಸಂಬಂಧ ಹೊಂದಿತ್ತು.

ಸೋದರಭಾವನಿಂದ ಹಲ್ಲೆ

ಶ್ರವಣಕುಮಾರ ಮಾತನಾಡಿ ‘೨ ತಿಂಗಳ ಹಿಂದೆ ನಾನು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವ ಬಗೆ ನನ್ನ ಕುಟುಂಬಕ್ಕೆ ಮೊದಲು ಹೆಳಿದಾಗ ನನ್ನ ಸೋದರಭಾವ ಬಾಬರ ನನಗೆ ತಿಳಿಸುವ ಪ್ರಯತ್ನ ಮಾಡಿದನು. ‘ನಾನು ಕೇಳುತ್ತಿಲ್ಲ’ ಎಂದು ಕಂಡಕೂಡಲೇ ಅವನು ನನ್ನನ್ನು ಹೊಡೆದ. ನನ್ನ ಸ್ವಂತ ಮನೆಯಲ್ಲಿ ನನ್ನನ್ನು ಬಂಧಿಸಲಾಯಿತು; ಅದರೆ ಶ್ರೀರಾಮನ ಮೇಲೆ ನನಗೆ ನಂಬಿಕೆ ಇತ್ತು. ಮನೆಯಲ್ಲಿಯೇ ಅವರ ಪೂಜೆ ಮಾಡುತ್ತಿದ್ದೆ. ಈಗ ನನಗೆ ಯಾರ ಅಂಜಿಕೆಯೂ ಆಗುವದಿಲ್ಲ. ನನಗೆ ಯಾರಾದರೂ ಬೆದರಿಕೆ ಹಾಕಿದರೆ ನಾನು ಪೊಲೀಸರಿಗೆ ದೂರು ನೀಡುತ್ತೇನೆ. ಹಾಗೆಯೇ ಜಿಲ್ಲಾಧಿಕಾರಿಯವರಲ್ಲಿ ರಕ್ಷಣೆ ನೀಡುವಂತೆ ವಿನಂತಿಸುತ್ತೇನೆ’ ಎಂದು ಹೇಳಿದರು.