ಹಿಂದು ಹೆಸರು ಇಟ್ಟುಕೊಂಡು ಹಿಂದೂ ಹುಡುಗಿಯರ ಕಳ್ಳಸಾಗಾಣಿಕೆ ಮಾಡುವ ಮುಸಲ್ಮಾನರ ಗುಂಪಿನ ಬಂಧನ !

ಅಲಿಗಡ್ (ಉತ್ತರಪ್ರದೇಶ) ಇಲ್ಲಿ ಘಟನೆ

ಆಲಿಗಡ (ಉತ್ತರಪ್ರದೇಶ) – ಹಿಂದೂ ಹುಡುಗಿಯರ ಕಳ್ಳ ಸಾಗಾಣಿಕೆ ಮಾಡುವ ೫ ಜನರ ಒಂದು ಗುಂಪನ್ನು ಪೊಲೀಸರು ಜುಲೈ ೨೬ ರಂದು ಬಂಧಿಸಿದ್ದಾರೆ. ಈ ಗುಂಪಿನ ಎಲ್ಲಾ ಜನರು ಮುಸಲ್ಮಾನರಾಗಿದ್ದಾರೆ. ಈ ಸಮಯದಲ್ಲಿ ಅವರು ಹಿಂದೂ ಹೆಸರುಗಳನ್ನು ಇಟ್ಟುಕೊಂಡಿರುವ ಆಧಾರ ಕಾರ್ಡ್ ವಶಪಡಿಸಿಕೊಳ್ಳಲಾಗಿದೆ. ಕೆಲಸದ ಆಮಿಷ ಒಡ್ಡಿ ಜಾರ್ಖಂಡ್ ರಾಜ್ಯದಿಂದ ಕರೆತಂದಿರುವ ೩ ಹಿಂದೂ ಹುಡುಗಿಯರನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಇತರ ಪುರುಷರಿಗೆ ಮದುವೆಯ ಆಮಿಷ ಒಡ್ಡಿ ಅವರಿಂದ ಹಣ ಕಿತ್ತುಕೊಂಡು ಈ ಸಂತ್ರಸ್ತ ಹುಡುಗಿಯರನ್ನು ಮಾರಾಟ ಮಾಡುವ ಆರೋಪ ಈ ಗುಂಪಿನ ಮೇಲೆ ಇದೆ.

ಸೈದ್ ಅನ್ಸಾರಿ ಈ ಗುಂಪಿನ ಪ್ರಮುಖನಾಗಿದ್ದು, ಅವನಿಂದ ರಾಹುಲ್ ಗುಪ್ತಾ ಎಂಬ ಹೆಸರಿನ ಆಧಾರ ಕಾರ್ಡ ವಶಪಡಿಸಿಕೊಳ್ಳಲಾಗಿದೆ. ಅವನ ಜೊತೆಗೆ ನಫೀಸಾ ಬೀಬಿ, ರಹೀಮ್ ಅನ್ಸಾರಿ, ಕಲಾಮ್ ಖಾನ್ ಮತ್ತು ಮತ್ತೊಬ್ಬನ ಸಮಾವೇಶ ಇದೆ. ಒಬ್ಬ ವ್ಯಕ್ತಿಯ ಸೂಚನೆ ಮೇರೆಗೆ ಹಿಂದುತ್ವ ನಿಷ್ಠ ಸಂಘಟನೆಯ ಸಹಾಯದಿಂದ ಆಲಿಗಡ ಪೊಲೀಸರು ಇಲ್ಲಿಯ ಗಾಂಧಿ ಪಾರ್ಕ್ ಬಸ್ ನಿಲ್ದಾಭದಿಂದ ಎಲ್ಲರನ್ನೂ ಬಂದಿಸಲಾಗಿದೆ.

ಸಂಪಾದಕೀಯ ನಿಲುವು

ಇಂತಹವರ ಮೇಲೆ ಉತ್ತರ ಪ್ರದೇಶ ಪೋಲಿಸರು ಕಠಿಣ ಕ್ರಮ ಕೈಗೊಳ್ಳುವುದು ಅಪೇಕ್ಷಿತವಾಗಿದೆ !