ಪಾಕ್ ಸೈನ್ಯವು ಕಾರ್ಗಿಲ ಯುದ್ಧದಲ್ಲಿ ಹುತಾತ್ಮರಾದ ಸೈನಿಕರ ಮೃತದೇಹಗಳನ್ನು ಹಿಂದೂಗಳ ವಶಕ್ಕೆ ನೀಡಿತು !

ಪಾಕ್ ಸೇನೆಯ ಮೇಲೆ ‘ಜಮಿಯತ ಉಲೇಮಾ-ಎ-ಇಸ್ಲಾಮ-ಫಜಲ’ ಪಕ್ಷದ ಮುಖ್ಯಸ್ಥ ಮೌಲಾನಾ ಫಜಲುರ ರೆಹಮಾನರವರ ಕಠೋರ ಟೀಕೆ

ಮೌಲಾನಾ ಫಜ್ಲುರ್ ರೆಹಮಾನ್

ಇಸ್ಲಾಮಾಬಾದ (ಪಾಕಿಸ್ತಾನ) – ನಿಮ್ಮ ದೃಷ್ಟಿಯಲ್ಲಿ ಹುತಾತ್ಮರ ಬೆಲೆ ಏನು ಎಂದು ಹೇಳಬಲ್ಲಿರಾ ? ಕಾರ್ಗಿಲ‌ನಲ್ಲಿ ಎಷ್ಟು ಸೈನಿಕರು ಹುತಾತ್ಮರಾದರು ಮತ್ತು ನೀವು ಅಲ್ಲಿಂದ ಎಷ್ಟು ಸೈನಿಕರ ಮೃತದೇಹಗಳನ್ನು ಮರಳಿ ತಂದಿರುವಿರಿ ಎಂಬುದನ್ನು ಜನರಿಗೆ ಹೇಳಬಲ್ಲಿರಾ ? ನೀವು ನಿಮ್ಮ ಹುತಾತ್ಮ ಸೈನಿಕರ ಮೃತದೇಹಗಳನ್ನು ಹಿಂದೂಗಳಿಗೆ ಒಪ್ಪಿಸಿದಿರಿ ಮತ್ತು ಭಾರತದಿಂದ ‘ನಾವು ಅವರಿಗೆ ಇಸ್ಲಾಮಿಕ್ ಪದ್ಧತಿಯಲ್ಲಿ ಅಂತ್ಯಸಂಸ್ಕಾರ ಮಾಡಿದ್ದೇವೆ’ ಎಂಬ ಹೇಳಿಕೆ ಬಂದಿತ್ತು. ಅವರ ಸಂಖ್ಯೆಯನ್ನು ಬೇರೆ ಬೇರೆಯಾಗಿ ಹೇಳಲಾಗುತ್ತಿದೆ; ಆದರೆ ಅದು ನೂರಾರು ಸಂಖ್ಯೆಯಲ್ಲಿದೆ. ನೀವು ನಿಮ್ಮ ಸೈನಿಕರ ಮೃತದೇಹಗಳನ್ನು ಹಿಂದೂಗಳ ವಶಕ್ಕೆ ನೀಡಿದಿರಿ. ಕರ್ನಲ್ ಶೇರ ಖಾನ ರವರ ಶವ ನಮಗೆ ಸಿಕ್ಕಿತು. ಆದರೆ ಭಾರತವು ಒತ್ತಾಯಿಸಿ ಹೇಳಿದ ನಂತರವೇ ನೀವು ಅವರ ಮೃತದೇಹವನ್ನು ಸ್ವೀಕರಿಸಿದಿರಿ. ನಿಮ್ಮದೇ ಹುತಾತ್ಮ ಸೈನಿಕರ  ಅವಮಾನ ನೀವೇ ಮಾಡಿದಿರಿ ಮತ್ತು ನಿಮ್ಮ ಸ್ವಂತದ  ಅಪರಾಧಗಳನ್ನು ಮುಚ್ಚಿಡಲು ಅವರ ಬೆನ್ನ ಹಿಂದೆ ಅಡಗಿಕೊಳ್ಳಲು ಯತ್ನಿಸುತ್ತಿದ್ದೀರಿ ಎಂದು ಪಾಕಿಸ್ತಾನದ ಜಮಿಯತ್ ಉಲೇಮಾ-ಎ-ಇಸ್ಲಾಮ-ಫಜಲ ಪಕ್ಷದ ಮುಖ್ಯಸ್ಥರಾದ ಮೌಲಾನಾ ಫಜಲುರ ರೆಹಮಾನ ರವರು ಪಾಕ್ ಸೇನೆಯ ವಿರುದ್ಧ ಕಠಿಣ ಹಾಗೂ ನೇರ ಮಾತುಗಳಿಂದ ವಾಗ್ದಾಳಿ ನಡೆಸಿದರು.

​ಅವರು ಮುಂದುವರಿದು, ಎಲ್ಲಾ ಶಕ್ತಿಯನ್ನು ಕೇವಲ ರಾಜಕೀಯ ಹಿಡಿತವನ್ನು ಬಲಪಡಿಸಲು ಬಳಸಲಾಗುತ್ತಿದೆ. ಪಾಕಿಸ್ತಾನವು ಒಂದು ಸಂಸ್ಥೆಗಳನ್ನೊಳಗೊಂಡ ದೇಶವಾಗಿದ್ದು, ಅಲ್ಲಿ ಪ್ರತಿಯೊಂದು ಸಂಸ್ಥೆಯ ಅಧಿಕಾರ ವ್ಯಾಪ್ತಿಯನ್ನು ಸ್ಪಷ್ಟವಾಗಿ ನಿರ್ಧರಿಸಲಾಗಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಮೌಲಾನಾ ರೆಹಮಾನ ರವರು ಸತ್ಯವನ್ನೇ ಹೇಳಿದ್ದಾರೆ. ಭಯೋತ್ಪಾದಕರ ರೂಪದಲ್ಲಿ ಪಾಕಿಸ್ತಾನದ ಸೈನಿಕರು ಕಾರ್ಗಿಲನಲ್ಲಿ ನುಸುಳುವಿಕೆ ನಡೆಸಿದ್ದರು ಮತ್ತು ಭಾರತೀಯ ಸೇನೆಯು ಅವರ ಹತ್ಯೆ ಮಾಡಿತ್ತು; ಆದರೆ ‘ಅವರು ನಮ್ಮ ಸೈನಿಕರಲ್ಲ,’ ಎಂದು ಹೇಳಿ ಪಾಕಿಸ್ತಾನವು ಅವರ ಮೃತದೇಹಗಳನ್ನು ಸ್ವೀಕರಿಸಲಿಲ್ಲ ಮತ್ತು ಆ ಬಳಿಕ ಭಾರತೀಯ ಸೇನೆಯೇ ಆ ಮೃತದೇಹಗಳನ್ನು ಇಸ್ಲಾಮಿಕ್ ವಿಧಾನದಂತೆ ಅಂತ್ಯಸಂಸ್ಕಾರ ನಡೆಸಿತ್ತು !