ರಷ್ಯಾ ದಾಳಿಯಲ್ಲಿ ೪ ಭಾರತೀಯ ನಾವಿಕರು ಸಾವು

ನವದೆಹಲಿ – ಉಕ್ರೇನ್ ನ ಕರಾವಳಿಯ ಸಮೀಪ ‘ಎಮ್‌ವಿ ಗೋಲ್ಡನ್ ಲಿಯೋ’ ವಾಣಿಜ್ಯ ಸರಕು ಸಾಗಣೆ ಹಡಗಿನ ಮೇಲೆ ಜುಲೈ ೨೧ ರಂದು ರಷ್ಯಾ ಕ್ಷಿಪಣಿ ದಾಳಿ ನಡೆಸಿತು. ಈ ದಾಳಿಯಲ್ಲಿ ನಾಲ್ವರು ಭಾರತೀಯ ನಾವಿಕರು ಮೃತಪಟ್ಟಿದ್ದಾರೆ. ಈ ಘಟನೆಯ ನಂತರ ಭಾರತವು ರಷ್ಯಾದ ಉಸ್ತುವಾರಿ ರಾಯಭಾರಿ ವ್ಲಾಡಿಮಿರ್ ಲಾದಾನೋವ್ ಅವರನ್ನು ಕರೆಸಿ ತೀವ್ರ ಪ್ರತಿಭಟನೆ ದಾಖಲಿಸುತ್ತಾ ರಷ್ಯಾದಿಂದ ಸ್ಪಷ್ಟೀಕರಣ ಕೇಳಿದೆ.
೧. ಗಿನಿಯಾ-ಬಿಸ್ಸೌ (ಪಶ್ಚಿಮ ಆಫ್ರಿಕಾದ ಒಂದು ಸಣ್ಣ ದೇಶ) ಧ್ವಜವನ್ನು ಹೊಂದಿದ್ದ ‘ಎಮ್‌ವಿ ಗೋಲ್ಡನ್ ಲಿಯೋ’ ಎಂಬ ಸರಕು ಸಾಗಾಣೆ ಹಡಗು ಜುಲೈ ೧೯ ರಂದು ಧಾನ್ಯವನ್ನು ತೆಗೆದುಕೊಂಡು ಉಕ್ರೇನ್‌ನ ಒಡೆಸಾ ಬಂದರಿನಿಂದ ಹೊರಟಿತ್ತು.
೨. ವಿದೇಶಾಂಗ ಸಚಿವಾಲಯದ ಮಾಹಿತಿಯ ಪ್ರಕಾರ, ಈ ಸರಕು ಸಾಗಾಣೆ ಹಡಗಿನಲ್ಲಿ ೧೭ ಸಿಬ್ಬಂದಿಗಳಿದ್ದರು, ಮತ್ತು ೫ ಭಾರತೀಯರು ಕೂಡ ಕೆಲಸ ಮಾಡುತ್ತಿದ್ದರು. ಕ್ಷಿಪಣಿ ದಾಳಿಯಲ್ಲಿ ನಾಲ್ವರು ಭಾರತೀಯ ನಾವಿಕರು ಮೃತಪಟ್ಟರೆ, ಇನ್ನೊಬ್ಬ ನಾವಿಕ ಗಂಭೀರವಾಗಿ ಗಾಯಗೊಂಡಿದ್ದಾರೆ.
೩. ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸಂತ್ರಸ್ತ ವ್ಯಕ್ತಿಗೆ ಎಲ್ಲಾ ರೀತಿಯ ನೆರವು ನೀಡುತ್ತಿದೆ.
೪. ಉಕ್ರೇನ್‌ನ ಅಧಿಕಾರಿಗಳು ಈ ದಾಳಿಗೆ ರಷ್ಯಾ ಕಾರಣ ಎಂದು ಹೇಳಿದೆ. ಜೋಳ ತೆಗೆದುಕೊಂಡು ಹೋಗುತ್ತಿದ್ದ ‘ಎಮ್‌ವಿ ಗೋಲ್ಡನ್ ಲಿಯೋ’ ಹಡಗು ಒಡೆಸಾದಿಂದ ಹೊರಟ ಕೆಲವೇ ಸಮಯದಲ್ಲಿ ರಷ್ಯಾ ಅದರ ಮೇಲೆ ಮೂರು ‘ಕ್ರೂಸ್’ ಕ್ಷಿಪಣಿಗಳನ್ನು ಹಾರಿಸಿತು ಎಂದು ಉಕ್ರೇನ್ ನೌಕಾಪಡೆ ತಿಳಿಸಿದೆ. ಈ ದಾಳಿಯ ಪರಿಣಾಮವಾಗಿ ಹಡಗಿಗೆ ಬೆಂಕಿ ಹೊತ್ತಿಕೊಂಡಿತು.
ಅಮೆರಿಕ: ಧರ್ಮದತ್ತ ಒಲವು ತೋರುತ್ತಿರುವ ಜೆನ್-ಜ಼ಿ ಹುಡುಗರು!
ಬ್ರಿಟನ್ ಸಚಿವ ಸಂಪುಟದಲ್ಲಿ ಭಾರತೀಯ ಮೂಲದ ಕನಿಷ್ಕ ನಾರಾಯಣ ಮತ್ತು ಲಿಜಾ ನಂದಿ ಅವರಿಗೆ ಸ್ಥಾನ
ಅಮೆರಿಕದಲ್ಲಿ ಭಾರತ ವಿರೋಧಿ ಖಾಲಿಸ್ತಾನಿಗಳನ್ನು ಕೆಣಕಿದರೆ ಶಿಕ್ಷೆ!
ಜೆನೆರಿಕ್ ಔಷಧಗಳ ಮೇಲೆ ಶೇ.೨೦೦ ರಷ್ಟು ಆಮದು ಸುಂಕ ! – ಟ್ರಂಪ್ ಅವರ ಘೋಷಣೆ : Tax on Indian Drugs
ನೇಪಾಳದ ಹೊಸ ₹1 ನಾಣ್ಯದಿಂದ ವಿವಾದಿತ ನಕ್ಷೆ ತೆರವು : Nepal New Coin Map
ಭಾರತದ ಬಾಂಗ್ಲಾದೇಶ ಗಡಿಯ ಸಮೀಪ ಅಮೆರಿಕದ ಸೈನಿಕರೊಂದಿಗೆ ಬಾಂಗ್ಲಾದೇಶ ಸೇನೆಯ ಜಂಟೀ ಸಮರಾಭ್ಯಾಸ