ಜಾರ್ಖಂಡನ ನ್ಯಾಯಾಧೀಶ ಉತ್ತಮ ಆನಂದ ಇವರ ಹತ್ಯೆಯ ಪ್ರಕರಣದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ನ್ಯಾಯಾಧೀಶ ಉತ್ತಮ ಆನಂದ (ಎಡದಲ್ಲಿ)

ಧನಬಾದ (ಜಾರ್ಖಂಡ್) – ಇಲ್ಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಉತ್ತಮ ಆನಂದ ಇವರ ಹತ್ಯೆಯ ಪ್ರಕರಣ ಕಳೆದ ತಿಂಗಳು ವಿಶೇಷ ಸಿ.ಬಿ.ಐ. ನ್ಯಾಯಾಲಯ ಲಖನ ವರ್ಮಾ ಮತ್ತು ರಾಹುಲ ವರ್ಮಾ ಇವರಿಗೆ ತಪ್ಪಿತಸ್ಥರೆಂದು ತೀರ್ಮಾನಿಸಿತ್ತು. ಅವರಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು ೩೦ ಸಾವಿರ ರೂಪಾಯಿ ದಂಡ ವಿಧಿಸಿದೆ.

ಉತ್ತಮ ಆನಂದ ಇವರು ಬೆಳಿಗ್ಗೆ ವಿಹಾರ ಮಾಡುವಾಗ ಅವರಿಗೆ ಆರೋಪಿಗಳು ರಿಕ್ಷಾದ ಮೂಲಕ ಡಿಕ್ಕಿ ಹೊಡೆದಿದ್ದರು. ಅವರ ಸಂಚಾರವಾಣಿಯನ್ನು ಕಸಿದುಕೊಳ್ಳುವುದಕ್ಕಾಗಿ ರಿಕ್ಷಾದಿಂದ ಡಿಕ್ಕಿ ಹೊಡೆಯಲಾಯಿತು ಎಂದು ವಿಚಾರಣೆಯಲ್ಲಿ ಸ್ಪಷ್ಟವಾಗಿತ್ತು. ಈ ಅಪಘಾತದಿಂದ ಉತ್ತಮ ಆನಂದ ಇವರ ತಲೆಗೆ ಗಂಭೀರ ಪೆಟ್ಟಾಗಿ ಅವರು ಸಾವನ್ನಪ್ಪಿದ್ದರು. ಕಳೆದ ವರ್ಷ ಜುಲೈ ೨೮, ೨೦೨೧ ರಂದು ಈ ಘಟನೆ ನಡೆದಿತ್ತು.