ಸಮಾಜವಾದಿ-ಕಾಂಗ್ರೆಸ್ ಸರ್ಕಾರಗಳ ವಿರುದ್ಧ ಮೋದಿ ವಾಗ್ದಾಳಿ : Yogi Adityanath

ಯೋಗಿ ಆದಿತ್ಯನಾಥ್ ಅವರ ವಾಗ್ದಾಳಿ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ‘ಅಂದಿನ ಸಮಾಜವಾದಿ ಪಾರ್ಟಿ ಮತ್ತು ಕಾಂಗ್ರೆಸ್ ಪಕ್ಷಗಳ ಸರಕಾರಗಳು ದೇವಾಲಯಗಳು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ನಿರ್ಲಕ್ಷಿಸಿದವು. ಸಾರ್ವಜನಿಕರ ಹಣವನ್ನು ಗೋರಿಗಳ ಗೋಡೆಗಳ ನಿರ್ಮಾಣಕ್ಕೆ ವೆಚ್ಚ ಮಾಡುವುದನ್ನೇ ‘ಜಾತ್ಯತೀತತೆ’ ಎಂದು ಹೇಳಿದ್ದರು, ಆದರೆ ಹಿಂದೂಗಳ ಧಾರ್ಮಿಕ ಸ್ಥಳಗಳಿಗೆ ಸಂಬಂಧಿಸಿದ ಯೋಜನೆಗಳನ್ನು ‘ಕೋಮುವಾದಿ’ ಎಂದು ಕರೆದಿದ್ದರು’ ಎಂದು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ. ಬಾರಾಬಂಕಿಯಲ್ಲಿ ೫೪೨ ಕೋಟಿ ರೂಪಾಯಿ ವೆಚ್ಚದ ೮೨ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಸಾರ್ವಜನಿಕ ಸಮಾರಂಭವನ್ನುದ್ದೇಶಿಸಿ ಮಾತನಾಡುವಾಗ ಆದಿತ್ಯನಾಥ್ ಅವರು ಈ ಟೀಕೆ ಮಾಡಿದರು.

ಆದಿತ್ಯನಾಥ್ ಅವರು ಮಾತು ಮುಂದುವರೆಸುತ್ತಾ,

೧. ಗೋರಿಗಳಿಗೆ ರಕ್ಷಣಾತ್ಮಕ ತಡೆಗೋಡೆಗಳನ್ನು ನಿರ್ಮಿಸುವುದೇ ಜಾತ್ಯತೀತತೆಯ ಮಾನದಂಡವಾಗಿತ್ತು. ಬಾರಾಬಂಕಿಯ ಮಹಾದೇವ ಮಂದಿರ, ಅಯೋಧ್ಯೆಯ ಶ್ರೀರಾಮ ಮಂದಿರ ಮತ್ತು ಕಾಶಿ ವಿಶ್ವನಾಥ ಮಂದಿರಗಳಿಗೆ ಸಂಬಂಧಿಸಿದ ಯೋಜನೆಗಳಿಗೆ ಸಹಾಯ ನಿರಾಕರಿಸಲಾಗಿತ್ತು; ಏಕೆಂದರೆ ಮಂದಿರಗಳಿಗೆ ಸಹಾಯ ಮಾಡುವುದು ‘ಕೋಮುವಾದ’ ಎಂದು ಪರಿಗಣಿತವಾಗಿತ್ತು.

೨. ಸನಾತನ ಧರ್ಮದ ಸಂರಕ್ಷಣೆಯೊಂದಿಗೆ ಭಾರತದ ಭವಿಷ್ಯ ಅವಿಭಾಜ್ಯವಾಗಿ ಬೆಸೆದುಕೊಂಡಿದೆ. ನಮ್ಮ ಉಜ್ವಲ ಭವಿಷ್ಯವು ಸನಾತನದ ಭದ್ರ ಬುನಾದಿಯ ಮೇಲೆ ನಿಂತಿದೆ. ಸನಾತನ ಧರ್ಮ ಸುರಕ್ಷಿತವಾಗಿದ್ದರೆ ನಾವೆಲ್ಲರೂ ಸುರಕ್ಷಿತ. ಸನಾತನಕ್ಕೆ ಅಪಾಯ ಎದುರಾದರೆ ಯಾರೂ ಸುರಕ್ಷಿತವಾಗಿರಲು ಸಾಧ್ಯವಿಲ್ಲ.

೩. ಹಿಂದೆ ರಾಜ್ಯದಲ್ಲಿ ಅಪರಾಧಿಗಳು ನಾಟಿ ಬಂದೂಕುಗಳ (ಸ್ಥಳೀಯ ಶಸ್ತ್ರಾಸ್ತ್ರ) ಬಲದಿಂದ ವ್ಯಾಪಾರಿಗಳಲ್ಲಿ ಭಯದ ವಾತಾವರಣ ನಿರ್ಮಿಸುತ್ತಿದ್ದರು. ಆದರೆ ಈಗ ಲಕ್ಷ್ಮಣಪುರಿಯಲ್ಲಿ ಅತ್ಯಾಧುನಿಕ ಬ್ರಹ್ಮೋಸ್ ಕ್ಷಿಪಣಿಗಳನ್ನು ತಯಾರಿಸಲಾಗುತ್ತಿದೆ.

ಜಾತ್ಯತೀತತೆಯ ವಿಕೃತ ರೂಪವನ್ನು ಬೇರುಸಮೇತ ಕಿತ್ತೊಗೆಯಿರಿ! – ಮುಖ್ಯಮಂತ್ರಿ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತನಾಡಿ, ‘‘ಹಿಂದಿನ ಸರಕಾರಗಳು ಕಾವಡ ಯಾತ್ರೆ, ಶ್ರೀರಾಮನವಮಿ ಮೆರವಣಿಗೆಗಳು, ಜನ್ಮಾಷ್ಟಮಿ ಆಚರಣೆಗಳು ಮತ್ತು ದುರ್ಗಾಪೂಜೆಯ ಮಂಟಪಗಳ ಮೇಲೆ ನಿರ್ಬಂಧ ಹೇರುವುದನ್ನು ಜಾತ್ಯತೀತತೆಯ ಸಂಕೇತವೆಂದು ಭಾವಿಸಿದ್ದವು. ಭಾರತ ಸುರಕ್ಷಿತವಾಗಿರಬೇಕಾದರೆ, ಜಾತ್ಯತೀತತೆಯ ಈ ವಿಕೃತ ಸ್ವರೂಪವನ್ನು ಬೇರುಸಮೇತ ಕಿತ್ತೊಗೆಯಲೇಬೇಕು’’ ಎಂದು ಕರೆ ನೀಡಿದರು.