ಭೋಪಾಲ (ಮಧ್ಯಪ್ರದೇಶ)ದಲ್ಲಿ ಗೋಶಾಲೆಯ ಬಳಿ ೧೦೦ ಕ್ಕಿಂತ ಹೆಚ್ಚು ಹಸುವಿನ ಮೃತದೇಹ ಪತ್ತೆ

ಗೋಶಾಲೆಯಿಂದ ಹಸುವಿನ ಬಗ್ಗೆ ಈ ರೀತಿಯ ನಿರ್ಲಕ್ಷ್ಯ ಆಗುತ್ತಿದ್ದರೆ ಸಂಚಾಲಕೀಯ ಮೇಲೆ ದೂರು ದಾಖಲಿಸಿ ಅವರನ್ನು ಸೆರೆಮನೆಗೆ ಅಟ್ಟಬೇಕು ! ಅದೇ ರೀತಿ ಮಧ್ಯಪ್ರದೇಶದಲ್ಲಿನ ಇತರ ಗೋಶಾಲೆಗಳಲ್ಲಿ ಈ ರೀತಿ ನಡೆಯುತ್ತಿಲ್ಲ ತಾನೆ ? ಎಂಬ ಬಗ್ಗೆ ಪರಿಶೀಲನೆ ಮಾಡಬೇಕು !

ಭೋಪಾಲ (ಮಧ್ಯಪ್ರದೇಶ) – ಭೋಪಾಲ ಜಿಲ್ಲೆಯಲ್ಲಿ ಬೈರಸಿಯಾ ಗ್ರಾಮದಲ್ಲಿ ಒಂದು ಗೋಶಾಲೆಯ ಬಳಿ ಹಸುಗಳ ಮೃತದೇಹ ಹಾಗೂ ಎಲುಬುಗಳು ಪತ್ತೆಯಾಗಿವೆ. ಆ ಸಂಖ್ಯೆಯು ೧೦೦ ಕ್ಕಿಂತ ಹೆಚ್ಚಾಗಿರುವುದಾಗಿ ಹೇಳಲಾಗುತ್ತಿದೆ. ಇದರ ಬಗ್ಗೆ ಮಾಹಿತಿ ಸಿಕ್ಕಿದ ನಂತರ ಗೋಶಾಲೆಯ ಬಳಿ ಕೆಲವು ಹಿಂದು ಸಂಘಟನೆಗಳು ಪ್ರತಿಭಟನೆ ನಡೆಸಿ ಗೋಶಾಲೆಯ ಸಂಚಾಲಕೀಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಗೋಶಾಲೆಯ ಸಂಚಾಲಕೀಯ ವಿರುದ್ಧ ದೂರಿಗೆ ಆದೇಶ !

ಭೋಪಾಲದ ಜಿಲ್ಲಾಧಿಕಾರಿ ಅವಿನಾಶ ಲವಾನಿಯಾರವರು ಬೈರಸಿಯಾದಲ್ಲಿನ ಘಟನಾಸ್ಥಳಕ್ಕೆ ಆಗಮಿಸಿ ತಪಾಸಣೆ ನಡೆಸಿದರು ಹಾಗೂ ಗೋಶಾಲೆಯ ಸಂಚಾಲಕಿ ನಿರ್ಮಲಾ ಶಾಂಡಿಲ್ಯರವರ ವಿರುದ್ಧ ದೂರು ನೋಂದಿಸಲು ಆದೇಶ ನೀಡಿದರು. ಅದೇ ರೀತಿ ಈಗ ಜಿಲ್ಲೆಯ ಕಾರ್ಯಕಾರಿ ಅಧಿಕಾರಿಗಳಿಗೆ ಗೋಶಾಲೆಯ ಆಡಳಿತವನ್ನು ಒಪ್ಪಿಸಲಾಗಿದೆ.

ಲವಾನಿಯಾರವರು, ಹಸುಗಳ ಮೃತದೇಹಗಳ ವಿಲೇವಾರಿಯಲ್ಲಿ ನಿರ್ಲಕ್ಷ್ಯ ಮಾಡಿರುವುದು ಕಂಡು ಬರುತ್ತದೆ. ಹಸುವಿನ ಮೃತದೇಹಗಳ ವಿಲೇವಾರಿ ಶಾಸ್ತ್ರೀಯ ಪದ್ಧತಿಯಂತೆ ಮಾಡಬೇಕಾಗುತ್ತದೆ; ಆದರೆ ಇಲ್ಲಿ ಹಾಗೆ ಮಾಡದೆ ಬಯಲಿನಲ್ಲಿ ಎಸೆಯಲಾಗಿದೆ. ಅದು ಅತ್ಯಂತ ಅಸಭ್ಯವಾಗಿದೆ. ಆಗಷ್ಟೇ ಮೃತಪಟ್ಟ ಹಸುಗಳ ಶವ ಪರೀಕ್ಷೆ ನಡೆಯುತ್ತಿದೆ ಎಂದು ಹೇಳಿದರು.

ಕಾಂಗ್ರೆಸನಿಂದ ಭಾಜಪದ ಮೇಲೆ ಟೀಕೆ

ಕಾಂಗ್ರೆಸನ ಮುಖಂಡ ದಗ್ವಿಜಯ ಸಿಂಹರವರು, ಗೋಶಾಲೆಯ ಸಂಚಾಲಕಿ ನಿರ್ಮಲಾ ಶಾಂಡಿಲ್ಯರವರು ಭಾಜಪದ ಮುಖಂಡರಾಗಿದ್ದಾರೆ. ಭೋಪಾಲ ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ಶಾಂಡಿಲ್ಯರವರ ಕೊಟ್ಟಿಗೆಯಲ್ಲಿ ಹಸುವಿನ ಮೂಳೆಗಳು ಹಾಗೂ ಚರ್ಮದ ವ್ಯಾಪಾರ ನಡೆಯುತ್ತಿತ್ತು. ಆದ್ದರಿಂದ ಅವರ ವಿರುದ್ಧ ಗೋಹತ್ಯೆಯ ದೂರು ದಾಖಲಿಸಬೇಕು, ಹಸುವಿನ ಮೂಳೆಗಳ ವ್ಯಾಪಾರದ ಬಗ್ಗೆ ವಿಚಾರಣೆ ನಡೆಸಬೇಕು ಹಾಗೂ ಕಳೆದ ಹಲವು ವರ್ಷಗಳಿಂದ ಗೋಶಾಲೆಗೆ ಸಿಕ್ಕಿರುವ ಅನುದಾನದ ಬಗ್ಗೆ ಕೂಡ ತಪಾಸಣೆ ನಡೆಸಬೇಕು, ಎಂದು ಸಿಂಹರವರು ಸರಕಾರದ ಕಡೆ ಒತ್ತಾಯಿಸಿದ್ದಾರೆ.