ಗೋಹತ್ಯೆ ಮತ್ತು ಗೋವುಗಳ ಕಳ್ಳಸಾಗಾಣಿಕೆಯ ಸಂದರ್ಭದಲ್ಲಿ ಕೇಂದ್ರ ಸರಕಾರ ಕಠಿಣ ಕಾನೂನು ಜಾರಿ ಮಾಡಿದರೆ, ದೇಶದಲ್ಲಿನ ರಾಜ್ಯಗಳಿಗೆ ಬೇರೆಬೇರೆ ಕಾನೂನು ಮಾಡುವ ಅವಶ್ಯಕತೆ ಇರುವುದಿಲ್ಲ ! ಕೇಂದ್ರ ಸರಕಾರವು ಇಂತಹ ಕಾನೂನನ್ನು ಆದಷ್ಟು ಬೇಗನೆ ಜಾರಿ ಮಾಡಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !- ಸಂಪಾದಕರು
ಗೌಹಾಟಿ (ಅಸ್ಸಾಂ) – ಅಸ್ಸಾಂನ ಭಾಜಪ ಸರಕಾರವು ಪ್ರಾಣಿಗಳ ವಿಷಯದ ಒಂದು ಕಾನೂನಿನಲ್ಲಿ ಸುಧಾರಣೆ ಮಾಡುವ ಮಸೂದೆಯನ್ನು ಅಂಗೀಕರಿಸಿದೆ. ಈ ಮಸೂದೆಯಿಂದ ಈಗ ಗೋವುಗಳ ಕಳ್ಳಸಾಗಾಣಿಕೆ ಮಾಡುವವರ ಮನೆಗೆ ಹೋಗಿ ಹುಡುಕುವುದರೊಂದಿಗೆ ಕಳೆದ ಆರು ವರ್ಷಗಳಿಂದ ಆತ ಅಕ್ರಮ ಪಶು ವ್ಯಾಪಾರದಿಂದಗಳಿಸಿರುವ ಸಂಪತ್ತನ್ನು ವಶಪಡಿಸಿಕೊಳ್ಳುವ ಅಧಿಕಾರವನ್ನು ಪೊಲೀಸರಿಗೆ ನೀಡಲಾಗಿದೆ. ಹಾಗೂ ಗೋವುಗಳ ಕಳ್ಳ ಸಾಗಾಣಿಕೆದಾರರಿಂದ ವಶಪಡಿಸಿಕೊಂಡಿರುವ ವಾಹನಗಳನ್ನು ಇನ್ನು ಮುಂದೆ ಹರಾಜು ಮಾಡಲಾಗುವುದು. ಈ ಮೊದಲು ಆಗಸ್ಟ್ ತಿಂಗಳಿನಲ್ಲಿ ಈ ಕಾನೂನಿನಲ್ಲಿ ಸುಧಾರಣೆ ಮಾಡುವ ಮಸೂದೆಯನ್ನು ಅಂಗೀಕರಿಸಲಾಗಿತ್ತು, ಅದರಲ್ಲಿ ಹಿಂದೂ ಸಿಕ್ಖ ಮತ್ತು ಜೈನ ಧರ್ಮೀಯರ ಪ್ರಾರ್ಥನಾ ಸ್ಥಳದಿಂದ 5 ಕಿಲೋಮೀಟರ ಪರಿಸರದಲ್ಲಿ ಗೋಹತ್ಯೆ ಮತ್ತು ಗೋಮಾಂಸ ಮಾರಾಟ ನಿಷೇಧಿಸಲಾಗಿತ್ತು.
Assam govt passes amendments to Cattle Preservation Bill, 2021 to tackle cattle smuggling https://t.co/xX9pO0ZmLy
— Republic (@republic) December 24, 2021