ಉಚ್ಚ ನ್ಯಾಯಾಲಯಕ್ಕೆ ಹೀಗೆ ಹೇಳುವ ಅನಿವಾರ್ಯತೆ ಬರಬಾರದು ! ಸರಕಾರವು ಇದಕ್ಕಾಗಿ ಪ್ರಯತ್ನಿಸಬೇಕು ! ಕರ್ನಾಟಕದಲ್ಲಿ ಭಾಜಪದ ಸರಕಾರ ಇರುವಾಗ ಇಂತಹ ಸ್ಥಿತಿ ಇರಬಾರದು, ಎಂದು ಹಿಂದುಗಳಿಗೆ ಅನಿಸುತ್ತದೆ !
ಬೆಂಗಳೂರು – ಕರ್ನಾಟಕದ ಪ್ರತಿಯೊಂದು ಗ್ರಾಮದಲ್ಲಿ ‘ಗೋಶಾಲೆ’ ಪ್ರಾರಂಭಿಸಿ. ಪ್ರತಿಯೊಂದು ಜಿಲ್ಲೆಯಲ್ಲಿ ಗೋಶಾಲೆ ನಿರ್ಮಿಸಿದರೂ, ಸಾಕಾಗುವುದಿಲ್ಲ. ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಮಾತ್ರವಲ್ಲದೆ ಪ್ರತಿಯೊಂದು ಗ್ರಾಮದ ಮಟ್ಟದಲ್ಲಿಯೂ ಸಹ ಗೋಶಾಲೆ ನಿರ್ಮಾಣ ಮಾಡಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯವು ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ. ಮುಂದಿನ ವಿಚಾರಣೆಯ ಸಮಯದಲ್ಲಿ ರಾಜ್ಯದಲ್ಲಿ ಗೋಶಾಲೆ ನಿರ್ಮಿಸಲು ಮತ್ತು ಅದನ್ನು ನಡೆಸಲು ಯಾವ ಕ್ರಮ ತೆಗೆದುಕೊಳ್ಳಲಾಗಿದೆ ? ಇದರ ಸವಿಸ್ತಾರ ಮಾಹಿತಿಯನ್ನು ನೀಡಲು ನ್ಯಾಯಾಲಯವು ರಾಜ್ಯಸರಕಾರಕ್ಕೆ ಹೇಳಿದೆ.
ಕೇವಲ ಜಿಲ್ಲೆಯಲ್ಲಿ ಮಾತ್ರವಲ್ಲ, ಪ್ರತಿ ತಾಲೂಕು, ಪ್ರತಿ ಗ್ರಾಮದಲ್ಲಿ ಗೋಶಾಲೆಯನ್ನು ನಿರ್ಮಾಣ ಮಾಡಬೇಕು.
– ಮುಖ್ಯ ನ್ಯಾಯಮುರ್ತಿಗಳು, ಕರ್ನಾಟಕ ಉಚ್ಚ ನ್ಯಾಯಾಲಯ.ರಾಜ್ಯ ಸರ್ಕಾರ ಕೂಡಲೇ ನ್ಯಾಯಾಲಯದ ಆದೇಶವನ್ನು ಪಾಲಿಸಬೇಕು.https://t.co/iGyARboODi
— 🚩Mohan gowda🇮🇳 (@Mohan_HJS) January 29, 2022