ಗೋವಂಶದ ಸಾಗಾಟ ಮಾಡುವ ಮೂವರು ಮತಾಂಧರ ಬಂಧನ

* ಇಂತಹ ಸಂಗತಿಗಳನ್ನು ತಡೆಯಲು ರಾಷ್ಟ್ರಮಟ್ಟದಲ್ಲಿ ಗೋಹತ್ಯಾ ನಿರ್ಬಂಧ ಕಾನೂನು ರಚಿಸುವುದು ಆವಶ್ಯಕವಾಗಿದೆ. ಕೇಂದ್ರ ಸರಕಾರವು ಇದಕ್ಕಾಗಿ ಹೆಜ್ಜೆಯಿಡುವುದೇ ? – ಸಂಪಾದಕರು 

ಪ್ರತಿನಿಧಿಕ ಛಾಯಾಚಿತ್ರ

ಕಠೂಮರ (ರಾಜಸ್ತಾನ) – ಮೂರು ವಾಹನಗಳಲ್ಲಿ ೫೩ ಗೋವಂಶವನ್ನು ಕ್ರೂರವಾಗಿ ತುಂಬಿಸಿ ಅವುಗಳ ಸಾಗಾಟ ಮಾಡುತ್ತಿದ್ದ ಮೂವರು ಮತಾಂಧರನ್ನು ಖೇಡಲಿ ಕಸ್ಬಾ ಪೊಲೀಸರು ಬಂಧಿಸಿದ್ದಾರೆ. ಪೊಲೀಸ ನಿರೀಕ್ಷಕರಾದ ರಾಮಕಿಶನ ಬೇರವಾರವರು ‘ಅವರಿಂದ ೨ ಪಿಕಅಪ್‌ ವಾಹನಗಳು ಮತ್ತು ಒಂದು ಟ್ರಕ್‌ನ್ನು ಸ್ವಾಧೀನಕ್ಕೆ ಪಡೆಯಲಾಗಿದೆ’, ಎಂಬ ಮಾಹಿತಿಯನ್ನು ನೀಡಿದರು. ಈ ಗೋವಂಶದಲ್ಲಿ ಹಸು, ಎಮ್ಮೆ ಇತ್ಯಾದಿಗಳು ಸೇರಿದ್ದವು. ಪೊಲೀಸರು ರಸ್ತೆಯಲ್ಲಿ ತಪಾಸಣೆಗಾಗಿ ಈ ವಾಹನಗಳನ್ನು ನಿಲ್ಲಿಸಿದಾಗ ಈ ಘಟನೆ ನಡೆದಿದೆ. ಗೋವಂಶವನ್ನು ಮುಕ್ತಗೊಳಿಸಲಾಗಿರುವುದಾಗಿಯೂ ಬೇರವಾರವರು ಹೇಳಿದ್ದಾರೆ.