ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಗೋ ಪೂಜೆ !

ಗೋಗ್ರಾಸ ನೀಡುತ್ತಿರುವ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಗುರುರಾಜ ಶರ್ಮಾ

ಬೆಂಗಳೂರು – ನವೆಂಬರ್ ೫ ರಂದು ದೀಪಾವಳಿಯ ನಿಮಿತ್ತ ಇಲ್ಲಿನ ಯಲಹಂಕ ಮೈಲಪನಹಳ್ಳಿ ಶ್ರೀ ವೇಣುಗೋಪಾಲ ಸ್ವಾಮಿ ಗೋಸಂರಕ್ಷಣಾ ಸೇವಾ ಟ್ರಸ್ಟ್ ಗೋಶಾಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಗೋ ಮಾತೆಗೆ ಪೂಜೆ ಸಲ್ಲಿಸಿ ಗೋಗ್ರಾಸ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಗುರುರಾಜ ಶರ್ಮಾ, ಶ್ರೀ. ನೀಲೇಶ್ವರ ಮತ್ತು ಸೌ. ಸೌಮ್ಯ ದಂಪತಿಗಳು, ಶ್ರೀ. ಜಯಂತ ಹಾಗೂ ಬಾಲಸಾಧಕರಾದ ಮಯೂರ, ಚಿರಾಗ ಮತ್ತು ಧರ್ಮಪ್ರೇಮಿಗಳಾದ ಶ್ರೀ. ಮಂಜುನಾಥ ಗೌಡ, ಶ್ರೀ. ವೆಂಕಟೇಶ, ಸೌ. ಜಾನಕಿ, ಸೌ. ಶಾಂತಾಬಾಯಿ ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ರಾಮ ಸೇನೆಯಿಂದ ಗೋ ಪೂಜೆ

ಮಂಗಳೂರು : ನವೆಂಬರ್ ೫ ರಂದು ದೀಪಾವಳಿ ನಿಮಿತ್ತ ರಾಮ ಸೇನೆ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ೮ ಸ್ಥಳಗಳಲ್ಲಿ ಸಾಮೂಹಿಕ ಗೋಪೂಜೆಯನ್ನು ಆಯೋಜಿಸಲಾಗಿತ್ತು. ಇದರಲ್ಲಿ ಗೋಪೂಜೆ, ಭಜನೆ ಮತ್ತು ಸಭೆಯ ಕಾರ್ಯಕ್ರಮವಿತ್ತು. ಇದರಲ್ಲಿ ರಾಮ ಸೇನೆಯ ಜಿಲ್ಲಾಧ್ಯಕ್ಷ ಶ್ರೀ. ಕಿರಣ ಅಮೀನ್, ಶ್ರೀ. ಸುಶಿತ ಸಾಲಿಯಾನ್, ಶ್ರೀ. ಸಂದೇಶ ಶೆಟ್ಟಿ, ಶ್ರೀ. ಮನವಿತ ರಾಜ, ತಾಲೂಕು ಅಧ್ಯಕ್ಷರಾದ ಶ್ರೀ. ದೀಪಕ ಕುಲಾಲ್ ಮತ್ತು ಘಟಕದ ಎಲ್ಲ ಕಾರ್ಯರ್ತರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕನ್ನಡದ ಜಿಲ್ಲಾ ಸಮನ್ವಯಕರಾದ ಶ್ರೀ. ಚಂದ್ರ ಮೊಗೇರ್ ಉಪಸ್ಥಿತರಿದ್ದರು.