ಪಾಕಿಸ್ತಾನದಿಂದ ಸ್ಥಳಾಂತರಗೊಂಡ ಹಿಂದೂಗಳು, ಸಿಖ್ಖರು ಮೊದಲಾದವರಿಗೆ ಲಸಿಕೆ ನೀಡದಿರುವ ರಾಜಸ್ಥಾನದ ಕಾಂಗ್ರೆಸ್ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಉಚ್ಚ ನ್ಯಾಯಾಲಯ !

ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದ ಹಿಂದೂಗಳು ಮತ್ತು ಸಿಖ್ಖರಂತಹ ಅಲ್ಪಸಂಖ್ಯಾತರಿಗೆ ರಾಜಸ್ಥಾನ ಸರಕಾರವು ಲಸಿಕೆ ನೀಡದಿರುವುದು ಗಮನಕ್ಕೆ ಬಂದನಂತರ ರಾಜಸ್ಥಾನ ಉಚ್ಚ ನ್ಯಾಯಾಲಯದ ಜೋಧಪುರ ನ್ಯಾಯಪೀಠವು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ರಾಜಸ್ಥಾನದಲ್ಲಿ ೧೧ ಲಕ್ಷ ೫೦ ಸಾವಿರ ಡೋಸ್ ಕೊರೊನಾ ಲಸಿಕೆ ವ್ಯರ್ಥವಾಯಿತು ! – ಕೇಂದ್ರ ಸಚಿವ ಗಜೇಂದ್ರಸಿಂಹ ಶೇಖಾವತ ಅವರ ಹೇಳಿಕೆ

ಕೇಂದ್ರ ಸಚಿವ ಗಜೆಂದ್ರ ಸಿಂಹ ಶೇಖಾವತ ಇವರು ರಾಜಸ್ಥಾನದಲ್ಲಿ ಕೊರೊನಾದ ೧೧ ಲಕ್ಷ ೫೦ ಸಾವಿರ ಡೋಸ್ ಲಸಿಕೆಗಳು ವ್ಯರ್ಥವಾಗಿವೆ ಎಂದು ಹೇಳಿದ್ದಾರೆ. ಲಸಿಕೆಯ ಒಂದು ಬಾಟಲಿಯಲ್ಲಿ ೧೦ ಡೋಸ್ ಇರುತ್ತದೆ. ಈ ೧೦ ರಲ್ಲಿ ಕೆಲವು ವ್ಯಕ್ತಿಗಳು ಲಸಿಕೆ ನೀಡಲು ಉಪಸ್ಥಿತರಿರಲಿಲ್ಲದ್ದರೆ, ಉಳಿದಿದ್ದು ಎಸೆಯ ಬೇಕಾಗುತ್ತದೆ.

ಶೇ. ೯೮ ರಷ್ಟು ಮುಸಲ್ಮಾನರಿರುವ ಲಕ್ಷದ್ವೀಪದಲ್ಲಿ ೧೧ ವರ್ಷಗಳಿಂದ ಮ. ಗಾಂಧಿ ಪ್ರತಿಮೆಯನ್ನು ಸ್ಥಾಪಿಸುವ ಕೆಲಸ ಬಾಕಿ ಇದೆ !

ಮ. ಗಾಂಧಿಯವರು ತಮ್ಮ ಜೀವನದುದ್ದಕ್ಕೂ ಮುಸಲ್ಮಾನರ ಓಲೈಕೆ ಮಾಡಿದ್ದಾರೆ. ಅವರಿಗಾಗಿ ಭಾರತದ ವಿಭಜನೆಗೆ ಒಪ್ಪಿಗೆ ನೀಡಿ ಸ್ವತಂತ್ರ ಪಾಕಿಸ್ತಾನ ದೇಶವನ್ನು ನಿರ್ಮಾಣ ಮಾಡಿದರು. ಆದರೂ, ಅವರಿಗೆ ಮುಸಲ್ಮಾನರಿಂದ ಯಾವುದೇ ಗೌರವವು ಮೊದಲೂ ಸಿಕ್ಕಿರಲಿಲ್ಲ ಈಗಲೂ ಸಿಗುತ್ತಿಲ್ಲ ಎಂಬುದನ್ನೇ ಈ ಘಟನೆಯು ಹೇಳುತ್ತದೆ !

ಭರತಪುರ (ರಾಜಸ್ಥಾನ) ದಲ್ಲಿ ಬಿಜೆಪಿ ಮಹಿಳಾ ಸಂಸದೆಯ ಮೇಲೆ ಗೂಂಡಾಗಳಿಂದ ಹಲ್ಲೆ

ರಾಜ್ಯದ ಭಾರತಪುರದ ಬಿಜೆಪಿ ಸಂಸದೆ ರಂಜಿತಾ ಕೋಲಿ ಅವರ ಮೇಲೆ ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ಇದರಲ್ಲಿ ಅವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ಮೇ ೨೭ ರ ರಾತ್ರಿ ಧರಸೋನಿ ಗ್ರಾಮದಲ್ಲಿ ನಡೆದಿದೆ. ಪೊಲೀಸರಿಗೆ ಮಾಹಿತಿ ನೀಡಿದ ೪೫ ನಿಮಿಷಗಳ ನಂತರ ಪೊಲೀಸರು ಸ್ಥಳಕ್ಕೆ ಬಂದರು ಎಂದು ಆರೋಪಿಸಲಾಗಿದೆ.