ಅಫ್ಘಾನಿಸ್ತಾನದಿಂದ ಅಮೆರಿಕಾವನ್ನು ಓಡಿಸಿಬಿಟ್ಟ ತಾಲಿಬಾನಿಗಳನ್ನು ಶ್ಲಾಘಿಸಲೇಬೇಕು! (ಅಂತೆ) -ಜಾರ್ಖಂಡದ ಕಾಂಗ್ರೆಸ್ ಸಂಸದ ಇರ್ಫಾನ್ ಅನ್ಸಾರಿ

* ಭಯೋತ್ಪಾದಕರು ಮತ್ತು ಮತಾಂಧರನ್ನು ವೈಭವೀಕರಿಸುವುದು ಕಾಂಗ್ರೆಸ್ಸಿನ ‘ಪರಂಪರೆ’ಯಾಗಿದೆ. ಇಂತಹ ಪಕ್ಷದವರು ಭಾರತದಲ್ಲಿ ಎಲ್ಲಕ್ಕಿಂತ ಹೆಚ್ಚು ಕಾಲ ರಾಜ್ಯಭಾರ ಮಾಡಿದರು, ಎಂಬುದು ಖೇದಕರ ! – ಸಂಪಾದಕರು

* ‘ಭಾರತದಲ್ಲಿ ಜಾತ್ಯತೀತತೆ ಬೇಕು’, ಎನ್ನುವ ಮತಾಂಧರಿಗೆ ಅಫ್ಘಾನಿಸ್ತಾನದಲ್ಲಿ ಮಾತ್ರ ಶರಿಯತ್‍ನ ರಾಜ್ಯ ಬೇಕು, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು

ಕಾಂಗ್ರೆಸ್‍ನ ಸಂಸದ ಇರ್ಫಾನ್ ಅನ್ಸಾರಿ

ರಾಂಚಿ (ಜಾರ್ಖಂಡ) – ಅಫ್ಘಾನಿಸ್ತಾನದಿಂದ ಅಮೇರಿಕಾದವರನ್ನು ಓಡಿಸಿದುದಕ್ಕಾಗಿ ತಾಲಿಬಾನಿಗಳನ್ನು ಶ್ಲಾಘಿಸಲೇಬೇಕು. ಅಮೆರಿಕಾವು ಅಫ್ಘಾನಿಸ್ತಾನದಲ್ಲಿ ಎಷ್ಟೊಂದು ದೌರ್ಜನ್ಯ ನಡೆಸುತ್ತಿತ್ತು, ಎಂಬುದು ಎಲ್ಲರಿಗೂ ಗೊತ್ತಿದೆ. ಅಲ್ಲಿಯ ಜನರು ಈಗ ತುಂಬಾ ಸಂತೋಷದಲ್ಲಿದ್ದಾರೆ. ಅಮೆರಿಕಾದವರು ಅಲ್ಲಿಗೆ ಹೋಗಿ ಅಫಫಾನಿಗಳ ಮತ್ತು ತಾಲಿಬಾನಿಗಳ ಮೇಲೆ ದೌರ್ಜನ್ಯ ನಡೆಸುತ್ತಿತ್ತು. ತಾಯಿ-ಸಹೋದರಿಯರು ಮತ್ತು ಮಕ್ಕಳಿಗೂ ತೊಂದರೆ ಕೊಡುತ್ತಿದ್ದರು. ಅದರ ವಿರುದ್ಧವೇ ಈ ಹೋರಾಟವಿತ್ತು. ಹಾಗೆಯೇ ಏನೆಲ್ಲ(ತಾಲಿಬಾನಿಗಳ ವಿರುದ್ಧ) ಪ್ರಸಾರ ಮಾಡಲಾಗುತ್ತಿತ್ತೋ ಅದೆಲ್ಲವೂ ತಪ್ಪಾಗಿದೆ, ಎಂದು ಕಾಂಗ್ರೆಸ್‍ನ ಸಂಸದ ಇರ್ಫಾನ್ ಅನ್ಸಾರಿ ಇವರು ಪ್ರಸಾರ ಮಾಧ್ಯಮದವರ ಜೊತೆ ಮಾತನಾಡುವಾಗ ಹೇಳಿದರು.

ಬಿಜೆಪಿಯ ಪ್ರದೇಶಾಧ್ಯಕ್ಷ ದೀಪಕ ಪ್ರಕಾಶ ಇವರು ಅನ್ಸಾರಿಯವರ ಹೇಳಿಕೆಯನ್ನು ಟೀಕಿಸುತ್ತಾ, ಯಾವ ಸಂಘಟನೆ ಮಹಿಳೆಯರ ಮೇಲೆ ದೌರ್ಜನ್ಯ ಮಾಡುವುದರಲ್ಲಿ ಕುಖ್ಯಾತವಾಗಿದೆಯೋ, ಅಂತಹ ಭಯೋತ್ಪಾದಕ ಸಂಘಟನೆಗೆ ಅನ್ಸಾರಿ ಬೆಂಬಲ ನೀಡುತ್ತಿದ್ದಾರೆ. ಅಫ್ಘಾನಿಸ್ತಾನದಿಂದ ಜನರು ಪಲಾಯನ ಮಾಡುತ್ತಿದ್ದಾರೆ. ಅನ್ಸಾರಿ ಇವರು ಭಾರತದಲ್ಲಿಯೂ ಇಂತಹ ಪರಿಸ್ಥಿತಿಯನ್ನು ನೋಡಲು ಬಯಸುತ್ತಿದ್ದಾರೇನು ? ಎಂದು ಪ್ರಕಾಶ ಇವರು ಪ್ರಶ್ನಿಸಿದರು.