ದೇಶದಲ್ಲಿನ ಹಿಂದೂಗಳು ಅಲ್ಪಸಂಖ್ಯಾತರಾಗುವ ಮೊದಲು ಭಾಜಪ ಸರಕಾರವು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಿ ಇಲ್ಲಿ ಸಮಾನ ನಾಗರಿಕ ಕಾನೂನು, ಜನಸಂಖ್ಯಾ ನಿಯಂತ್ರಣ ಕಾನೂನು, ಮತಾಂತರ ವಿರೋಧಿ ಕಾನೂನು ಇತ್ಯಾದಿ ರಾಷ್ಟ್ರ ಹಿತದ ಕಾನೂನುಗಳನ್ನು ತರಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ ! – ಸಂಪಾದಕರು
ನವದೆಹಲಿ – ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿರುವ ತನಕ ಡಾ. ಬಾಬಾಸಾಹೇಬ ಅಂಬೇಡ್ಕರರು ಬರೆದಿರುವ ಸಂವಿಧಾನ ಉಳಿಯುವುದು. ಹಿಂದೂಗಳು ಬಹುಸಂಖ್ಯಾತರಾಗಿರುವ ವರೆಗೆ ಎಲ್ಲರಿಗೂ ಸಮಾನ ಅವಕಾಶವಿರುವುದು. ಒಮ್ಮೆ ಹಿಂದೂಗಳು ಅಲ್ಪಸಂಖ್ಯಾತರಾದರೆ ಗಾಂಧಾರದ (ಅಫಘಾನಿಸ್ತಾನದ) ಸಂದರ್ಭದಲ್ಲಿ ಆದಂತೆ ಆಗುವುದು, ಎಂದು ಭಾಜಪದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಸಿ.ಟಿ. ರವಿಯವರು ಎಚ್ಚರಿಕೆ ನೀಡಿದ್ದಾರೆ.
Constitution and Women will be safe in India as long as Hindus are in majority.
Once Hindus become minority what happened to Afghanistan will happen here too.https://t.co/AQe7yUTPEy
— C T Ravi 🇮🇳 ಸಿ ಟಿ ರವಿ (@CTRavi_BJP) September 1, 2021
ಸಿ.ಟಿ. ರವಿ ಅವರು ಮುಂದಿನ ಅಂಶಗಳನ್ನು ಸಹ ಆ ಸಮಯದಲ್ಲಿ ಹೇಳಿದರು,
1. ಜಾತ್ಯತೀತತೆ ಮತ್ತು ಧಾರ್ಮಿಕ ಸಹಿಷ್ಣತೆ ಇವು ಹಿಂದೂಗಳ ಮುಖ್ಯ ಸ್ವಭಾವವಾಗಿದೆ. ಸಹಿಷ್ಣುತೆ ಇರುವ ಜನರು ಬಹುಸಂಖ್ಯಾತರಾಗಿರುವ ವರೆಗೆ ಜಾತ್ಯತೀತತೆಯು ಉಳಿಯುವುದು. ಮಹಿಳೆಯರಿಗೆ ಸಂರಕ್ಷಣೆ ಇರುವುದು. ಒಮ್ಮೆ ಸಹಿಷ್ಣುತೆ ಇರುವ ಜನರು ಅಲ್ಪಸಂಖ್ಯಾತರಾದರೆ ಅಪಘಾನಿಸ್ತಾನದಂತಹ ಸ್ಥಿತಿ ನಿರ್ಮಾಣವಾಗುವುದು. ಅವರ (ಮುಸಲ್ಮಾನರ) ಸಂಖ್ಯೆ ಹೆಚ್ಚಾದರೆ ಅವರು ಶರಿಯತನ ಬಗ್ಗೆ ಮಾತನಾಡುತ್ತಾರೆಯೇ ಹೊರತು ಸಂವಿಧಾನದ ಬಗ್ಗೆ ಅಲ್ಲ.
2. ಕಾಂಗ್ರೆಸ್ ಇಂದು ದೇಶದ ಹಿತವನ್ನು ಮರೆತಿದೆ. ಇಂದು ಅದು ಕುರುಡಾಗಿದೆ. ದೇಶಭಕ್ತಿ ಮತ್ತು ಭಯೋತ್ಪಾದನೆಯ ನಡುವಿನ ವ್ಯತ್ಯಾಸವು ಕಾಂಗ್ರೆಸ್ಸಿನವರಿಗೆ ತಿಳಿಯುತ್ತಿಲ್ಲ. ಆದುದರಿಂದಲೇ ಅವರು ರಾ. ಸ್ವ. ಸಂಘವನ್ನು ತಾಲಿಬಾನಿನೊಂದಿಗೆ ಹೋಲಿಸುತ್ತಿದ್ದಾರೆ.
3. ಓಲೈಕೆಯ ರಾಜಕಾರಣದಿಂದಾಗಿ ಭಾರತದಲ್ಲಿ ಇನ್ನೂ ಅನೇಕ ಪಾಕಿಸ್ತಾನಗಳ ನಿರ್ಮಾಣವಾಗಬಹುದು. ಆದ್ದರಿಂದ ನೀವು (ಕಾಂಗ್ರೆಸ್) ಸ್ವಲ್ಪ ಸಮಯದವರೆಗೆ ಆಡಳಿತಕ್ಕೆ ಬರಬಹುದು; ಆದರೆ ಇದರಿಂದ ಇನ್ನೂ ಅನೇಕ ಪಾಕಿಸ್ತಾನಗಳ ನಿರ್ಮಾಣವಾಗಬಹುದು. ಇದನ್ನು ತಡೆಯಬೇಕಾದರೆ ವಸ್ತುನಿಷ್ಠತೆಯಿಂದ ಮತ್ತು ದೇಶದ ಹಿತಕ್ಕಾಗಿ ರಾಜಕಾರಣ ಮಾಡಿ. ಭಾಜಪ ಓಲೈಕೆಯ ರಾಜಕಾರಣದಲ್ಲಿ ಸಿಲುಕುವುದಿಲ್ಲ. ‘ಸಬಕಾ ಸಾಥ ಸಬಕಾ ವಿಕಾಸ’ ಈ ಘೋಷಣೆಯೊಂದಿಗೆ ಹಿಂದುತ್ವದ ಕಟಿಬದ್ಧತೆಯೊಂದಿಗೆ ವಿಕಾಸಕ್ಕೆ ಪ್ರಾಧಾನ್ಯತೆ ನೀಡುತ್ತದೆ.