‘ತಾಲಿಬಾನ್ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎರಡೂ ಒಂದೇ ಸಮಾನ (ಅಂತೆ) !’

ಕರ್ನಾಟಕ ಪ್ರದೇಶ ಕೆಪಿಸಿಸಿಯ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣರ ದ್ವೇಷಭರಿತ ಹೇಳಿಕೆ !

  • ಸಂಘವು ತಾಲಿಬಾನ್‌ನಂತಿದ್ದರೆ, ಧ್ರುವನಾರಾಯಣರು ಹೀಗೆ ಬಹಿರಂಗವಾಗಿ ಇಂತಹ ಹೇಳಿಕೆ ನೀಡಲು ಧೈರ್ಯ ಮಾಡುತ್ತಿದ್ದರೇನು ? ತಾಲಿಬಾನ್‌ಗಳ ಬಳಿಯಿರುವಂತಹ ಶಸ್ತ್ರಾಸ್ತ್ರಗಳು ಸಂಘದವರಲ್ಲಿ ಇದೆಯೇ ? ಸಂಘವು ಎಂದಾದರೂ ಜನಸಾಮಾನ್ಯರನ್ನು ಹಿಂಸಿಸುತ್ತದೆಯೇ ಅಥವಾ ಅವರನ್ನು ಕೊಲ್ಲುತ್ತದೆಯೇ ? ಹಿಂದುತ್ವನಿಷ್ಠ ಸಂಘಟನೆಯನ್ನು ಅತ್ಯಂತ ದ್ವೇಷಪೂರ್ಣವಾಗಿ ಅತ್ಯಂತ ಕೀಳು ಮಟ್ಟಕ್ಕೆ ಹೋಗಿ ಆರೋಪ ಮಾಡುವ ಕಾಂಗ್ರೆಸಿಗರಿಗೆ ಹಿಂದೂಗಳು ಅವರಿಗೆ ತಮ್ಮ ಸ್ಥಾನವನ್ನು ತೋರಿಸಬೇಕು !
  • ಮಾ. ಗಾಂಧಿಯವರ ಹತ್ಯೆಯ ನಂತರ ಸಾವಿರಾರು ಬ್ರಾಹ್ಮಣರನ್ನು ಹಾಗೂ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ದೆಹಲಿಯಲ್ಲಿ ಮೂರುವರೆ ಸಾವಿರ ಸಿಖ್ಖರನ್ನು ಹತ್ಯೆ ಮಾಡಿರುವ ಆರೋಪವು ಕಾಂಗ್ರೆಸ್ ನ ಮೇಲಿದೆ. ಇದು ತಾಲಿಬಾನ್‌ಗಿಂತ ಕಡಿಮೆಯಿಲ್ಲ. ಈ ಬಗ್ಗೆ ಧ್ರುವನಾರಾಯಣ ಏಕೆ ಬಾಯಿ ತೆರೆಯುವುದಿಲ್ಲ ?

ಮೈಸೂರು – ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ತಾಲಿಬಾನ್‌ಗೆ ಹೋಲಿಸಿದ್ದೆ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಧರ್ಮದ ಆಧಾರದ ಮೇಲೆ ನಡೆಯುತ್ತದೆ, ಮತ್ತು ತಾಲಿಬಾನ್ ಕೂಡ ಹಾಗೆ ಮಾಡುತ್ತದೆ; ಹಾಗಾಗಿ ನಾನು ಸಂಘವನ್ನು ತಾಲಿಬಾನ್‌ಗೆ ಹೋಲಿಸಿದೆ. ಬಿಜೆಪಿ ಮತ್ತು ರಾ.ಸ್ವ.ಸಂಘವು ನನ್ನನ್ನು ಎಷ್ಟೇ ವಿರೋಧಿಸಿದರೂ ನನ್ನ ಹೇಳಿಕೆಯನ್ನು ಹಿಂದೆ ತೆಗೆದುಕೊಳ್ಳುವುದಿಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (‘ಕೆ.ಪಿ.ಸಿ.ಸಿ.’ಯ) ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಧ್ರುವನಾರಾಯಣರು, ರಾ.ಸ್ವ.ಸಂಘದ ಬಗ್ಗೆ ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ; ಏಕೆಂದರೆ ಸಂಘದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯವಿಲ್ಲ ಎಂದು ಹೇಳಿದ್ದಾರೆ. (ಕಾಂಗ್ರೆಸ್‌ನ ನ್ಯಾಯವಾದಿಯಾಗಿರುವ ನಾಯಕನ ಮೇಲೆ ಮಹಿಳಾ ನ್ಯಾಯವಾದಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪವಿದೆ, ಇನ್ನೋರ್ವ ನಾಯಕನು ಸಾರ್ವಜನಿಕ ಸಭೆಯಲ್ಲಿ ತಮ್ಮದೇ ಪಕ್ಷದ ಮಹಿಳಾ ಕಾರ್ಯಕರ್ತೆಯರ ಬಗ್ಗೆ ಮಾತನಾಡುವಾಗ ಅಶ್ಲೀಲ ಭಾಷೆಯನ್ನು ಉಪಯೋಗಿಸಿದ್ದರು. ಹಲವಾರು ಆರೋಪಗಳು ಕಾಂಗ್ರೆಸ್‌ನವರ ಮೇಲೆ ಇರುವಾಗ ಅವರಿಗೆ ಬೇರೆಯವರ ಮೇಲೆ ಆರೋಪ ಮಾಡಲು ಏನು ಅಧಿಕಾರವಿದೆ ? ಸಂಪಾದಕರು)