ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥರನ್ನು ಶ್ರೀಕೃಷ್ಣನ ಮತ್ತು ಸದ್ಯದ ಮುಖ್ಯಮಂತ್ರಿ ಶಿವರಾಜಸಿಂಹ ಚೌಹಾನರನ್ನು ಕಂಸನ ರೂಪದಲ್ಲಿ ತೋರಿಸಿದ ಕಾಂಗ್ರೆಸ್!

  • ಹಿಂದೂಗಳ ದೇವತೆಗಳನ್ನು ಅಪಮಾನಿಸುವವರ ಮೇಲೆ ಈ ದೇಶದಲ್ಲಿ ಯಾವುದೇ ಕಾರ್ಯಾಚರಣೆಯಾಗುವುದಿಲ್ಲ ಎಂಬುದನ್ನು ಗಮನದಲ್ಲಿಡಿ ! ಇಂದು ದೇಶದಲ್ಲಿ ಈಶ ನಿಂದೆಯಂತಹ ಕಾನೂನು ಇದ್ದಲ್ಲಿ ಹಿಂದೂದ್ವೇಷಿ ಕಾಂಗ್ರೆಸ್ಸಿನ ಮೇಲೆ ಕಠೋರ ಕಾರ್ಯಾಚರಣೆಯನ್ನು ಮಾಡಬಹುದಾಗಿತ್ತು ! ಈಗಲಾದರೂ ಕೇಂದ್ರ ಸರಕಾರವು ಇಂತಹ ಕಾನೂನುಗಳನ್ನು ತರಲು ಪ್ರಯತ್ನಿಸಬೇಕು ಎಂದು ಅಪೇಕ್ಷಿಸುತ್ತೇವೆ !
  • ಈ ರೀತಿಯಲ್ಲಿ ಹಿಂದೂ ದೇವತೆಗಳ ಅಪಮಾನ ಮಾಡುವಲ್ಲಿ ಹಿಂದೂಗಳೇ ಮುಂಚೂಣಿಯಲ್ಲಿರುತ್ತಾರೆ. ಆದುದರಿಂದ ‘ಆಪತ್ಕಾಲದಲ್ಲಿ ಇಂತಹ ಹಿಂದೂಗಳನ್ನು ಶ್ರೀ ಕೃಷ್ಣನಾದರೂ ಏಕೆ ರಕ್ಷಿಸಬೇಕು ?’ ಎಂಬ ಪ್ರಶ್ನೆ ಯಾರದ್ದಾದರೂ ಮನಸ್ಸಿನಲ್ಲಿ ನಿರ್ಮಾಣವಾದಲ್ಲಿ ಅದರಲ್ಲಿ ಆಶ್ಚರ್ಯವೇನಿದೆ ? ಆದರೂ ಇಂತಹವರಿಗೆ ಈಗ ಸಾಧನೆಯನ್ನು ಕಲಿಸುವುದು ಅವಶ್ಯಕವಾಗಿದೆ !

ಕಾಂಗ್ರೆಸ್ಸಿನ ನೇತಾರ ಶಹಯಾರ ಖಾನ ಇವರಿಂದ ಸಮರ್ಥನೆ

ಕಾಂಗ್ರೆಸ್ ಶಹಯಾರ ಖಾನರವರ ಧರ್ಮದ ಶ್ರದ್ಧಾಸ್ಥಾನಗಳ ಅಪಮಾನವನ್ನು ಮಾಡಿದ್ದರೆ, ಅವರು ಹೀಗೆಯೇ ಸಮರ್ಥನೆ ಮಾಡುತ್ತಿದ್ದರೇ ? ಮತ್ತು ಅನಂತರ ಅವರನ್ನು ಅವರ ಧರ್ಮಬಾಂಧವರು ಬಿಡುತ್ತಿದ್ದರೇ ? ಹಿಂದೂಗಳು ಧರ್ಮಾಭಿಮಾನಶೂನ್ಯ ರಾಗಿರುವುದರಿಂದ ಅವರ ದೇವತೆಗಳ ಅಪಮಾನ ಮಾಡಲು ಯಾರೂ ಹಿಂಜರಿಯುವುದಿಲ್ಲ. ಇದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿಯಾಗಿದೆ !

ಭೋಪಾಲ (ಮಧ್ಯಪ್ರದೇಶ) – ಇಲ್ಲಿನ ಕಾಂಗ್ರೆಸ್ಸಿನ ಕಾರ್ಯಾಲಯದ ಹೊರಗೆ ಹಾಕಲಾದ ಫಲಕದ ಮೇಲೆ ಕಾಂಗ್ರೆಸ್ ನೇತಾರ ಮತ್ತು ಮಾಜಿ ಮುಖ್ಯಮಂತ್ರಿ ಕಮಲನಾಥರನ್ನು ಶ್ರೀಕೃಷ್ಣ, ಭಾಜಪದ ನೇತಾರ ಮತ್ತು ರಾಜ್ಯದ ಮುಖ್ಯಮಂತ್ರಿ ಶಿವರಾಜಸಿಂಹ ಚೌಹಾನರನ್ನು ಕಂಸನ ರೂಪದಲ್ಲಿ ತೋರಿಸಲಾಗಿದೆ. ಭಾಜಪವು ಇದನ್ನು ಹಿಂದೂ ಧರ್ಮದ ಮತ್ತು ದೇವತೆಗಳ ಅಪಮಾನ ಎಂದು ಹೇಳುತ್ತಾ ಟೀಕಿಸಿದೆ.

ಈ ವಿಷಯದಲ್ಲಿ ಕಾಂಗ್ರೆಸ್ಸಿನ ನೇತಾರ ಶಹಯಾರ ಖಾನ ‘2023ರ ವಿಧಾನಸಭೆಯ ಚುನಾವಣೆಯಲ್ಲಿ ಭಾಜಪಕ್ಕೆ ಬುದ್ಧಿ ಕಲಿಸಲಾಗುವುದು. ಪೃಥ್ವಿಯ ಮೇಲೆ ಪಾಪ ಹೆಚ್ಚಾದಾಗ ಭಗವಂತನು ಯಾರನ್ನಾದರೂ ಅದನ್ನು ನಷ್ಟಗೊಳಿಸಲು ಕಳುಹಿಸುತ್ತಾನೆ. (ಜಿಹಾದಿ ಭಯೋತ್ಪಾದನೆ, ಧರ್ಮಾಂಧರಿಂದ ಪೃಥ್ವಿಯ ಮೇಲೆ ಹೆಚ್ಚುತ್ತಿರುವ ಪಾಪವನ್ನು ನಾಶಗೊಳಿಸುವ ಬಗ್ಗೆ ಶಹಯಾರ ಖಾನ ಏಕೆ ಮಾತನಾಡುವುದಿಲ್ಲ ?- ಸಂಪಾದಕರು) ಕಮಲನಾಥರು ವಿಕಾಸ ಪುರುಷರಾಗಿದ್ದಾರೆ. ಅವರು ಛಿಂದವಾಡದಲ್ಲಿ ವಿಕಾಸ ಮಾಡಿದ್ದಾರೆ. ಶಿವರಾಜಸಿಂಹ ಚೌಹಾನರು ಏನು ಮಾಡಿಲ್ಲ’ ಎಂದು ಹೇಳಿದರು.

ಇದರಲ್ಲಿ ಕಾಂಗ್ರೆಸ್ಸಿನ ಹಿಂದೂದ್ವೇಷಿ ಮಾನಸಿಕತೆಯೇ ಕಂಡುಬಂದಿದೆ ! – ಬಿಜೆಪಿ

ಗೃಹ ಮಂತ್ರಿ ನರೋತ್ತಮ ಮಿಶ್ರಾ

ರಾಜ್ಯದ ಗೃಹ ಮಂತ್ರಿಯಾದ ಭಾಜಪದ ನರೋತ್ತಮ ಮಿಶ್ರಾರವರು ಟೀಕಿಸುತ್ತ ‘ಕಾಂಗ್ರೆಸ್ ಯಾವಾಗಲೂ ಹಿಂದೂ ಧರ್ಮವನ್ನು ಅಪಹಾಸ್ಯ ಮಾಡುತ್ತಿರುತ್ತದೆ. ಹಿಂದೆ ಕಾಂಗ್ರೆಸ್ಸಿನ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಶ್ರೀ ದುರ್ಗಾದೇವಿ, ಈಗ ಕಮಲನಾಥ ಇವರನ್ನು ಶ್ರೀಕೃಷ್ಣನ ರೂಪದಲ್ಲಿ ತೋರಿಸಲಾಗಿದೆ. ಕಾಂಗ್ರೆಸ್ ಯಾವಾಗಲೂ ಇಂತಹ ಕೆಲಸಗಳನ್ನು ಮಾಡಿ ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸುತ್ತದೆ. ಇದರಿಂದ ಕಾಂಗ್ರೆಸ್ಸಿನ ಮಾನಸಿಕತೆ ಸ್ಪಷ್ಟವಾಗುತ್ತದೆ’ ಎಂದು ಹೇಳಿದರು. (ನರೋತ್ತಮ ಮಿಶ್ರ ಇವರು ಗ್ರಹ ಮಂತ್ರಿಯಾಗಿದ್ದಾರೆ, ಆದುದರಿಂದ ಇವರು ತಕ್ಷಣ ದೂರನ್ನು ನೋಂದಾಯಿಸಿ ಸಂಬಂಧಿತರ ಮೇಲೆ ಕಾರ್ಯಾಚರಣೆ ಮಾಡುವುದು ಅಪೇಕ್ಷಿತವಿದೆ ಎಂದು ಧರ್ಮಾಭಿಮಾನಿ ಹಿಂದೂಗಳಿಗೆ ಅನಿಸುತ್ತದೆ ! – ಸಂಪಾದಕರು)

ಬಿಹಾರದಲ್ಲಿ ಲಾಲೂ ಪ್ರಸಾದರನ್ನೂ ಭಗವಾನ ಶ್ರೀಕೃಷ್ಣನ ರೂಪದಲ್ಲಿ ತೋರಿಸಲಾಯಿತು!

ಇನ್ನೊಂದು ಘಟನೆಯಲ್ಲಿ ಬಿಹಾರದಲ್ಲಿ ರಾಷ್ಟ್ರೀಯ ಜನತಾ ದಳದ ನೇತಾರ ಲಾಲೂ ಪ್ರಸಾದ ಯಾದವರನ್ನು ಸುದರ್ಶನ ಚಕ್ರವನ್ನು ಹಿಡಿದಿರುವ ಶ್ರೀಕೃಷ್ಣನ ರೂಪದಲ್ಲಿ ತೋರಿಸಲಾಗಿದೆ. ಲಾಲೂ ಪ್ರಸಾದ ಯಾದವರ ಮಗ ತೇಜ ಪ್ರತಾಪ ಯಾದವ ಇವರು ಫೇಸ್ ಬುಕ್ ನ ಮೂಲಕ ಈ ಚಿತ್ರವನ್ನು ಪ್ರಸಾರ ಮಾಡಿದ್ದಾರೆ. (ಬಿಹಾರದಲ್ಲಿಯೂ ಭಾಜಪ ಅಧಿಕಾರದಲ್ಲಿದೆ, ಅವರು ಕೂಡ ತಕ್ಷಣ ತೇಜ ಪ್ರತಾಪ ಯಾದವ ಇವರ ಮೇಲೆ ತಕ್ಷಣ ಕಾರ್ಯಾಚರಣೆ ಮಾಡುವುದು ಅಪೇಕ್ಷಿತವಿದೆ ಎಂದು ಹಿಂದೂಗಳಿಗೆ ಅನಿಸುತ್ತದೆ ! – ಸಂಪಾದಕರು)