ಸಂತ್ರಸ್ತ ಯುವತಿಯು ಸಾಯಂಕಾಲ ಮಿತ್ರನೊಂದಿಗೆ ನಿರ್ಜನ ಸ್ಥಳಕ್ಕೆ ಹೋಗಬಾರದಾಗಿತ್ತು !’ (ಅಂತೆ) – ರಾಜ್ಯದ ಗೃಹಮಂತ್ರಿ ಅರಗ ಜ್ಞಾನೇಂದ್ರರಿಂದ ಸಂತ್ರಸ್ತರನ್ನೇ ಆರೋಪಿಯನ್ನಾಗಿಸುವ ಪ್ರಯತ್ನ 

ಮೈಸೂರು(ಕರ್ನಾಟಕ) ನಲ್ಲಾದ ಸಾಮೂಹಿಕ ಅತ್ಯಾಚಾರದ ಪ್ರಕರಣ

* ಮುಖ್ಯಮಂತ್ರಿಗಳು ಗದರಿಸಿದ ಬಳಿಕ ಪ್ರತಿಪಾದನೆ (ಸಮರ್ಥನೆ)!

* ಭಾಜಪದ ರಾಜ್ಯದ ಗೃಹಮಂತ್ರಿಗಳು ಈ ರೀತಿಯಲ್ಲಿ ಮಾತನಾಡುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ ! – ಸಂಪಾದಕರು 

* ಎಲ್ಲಿ ರಾಮರಾಜ್ಯದಲ್ಲಿ ಮಧ್ಯರಾತ್ರಿಯ ಸಮಯದಲ್ಲಿ ಒಡವೆಗಳನ್ನು ತೊಟ್ಟು ಮಹಿಳೆಯೊಬ್ಬಳೇ ಹೊರಗೆ ಹೋಗಬಹುದಾಗಿತ್ತು, ಹಾಗೂ ಎಲ್ಲಿ ಇಂದಿನ ಕಾಲದಲ್ಲಿ ಮಿತ್ರರೊಂದಿಗಿದ್ದಾಗ ಹಗಲಿನಲ್ಲಿಯೂ ಯುವತಿಯ ಮೇಲೆ ಸಾಮೂಹಿಕ ಬಲಾತ್ಕಾರವಾಗುತ್ತದೆ ಹಾಗೂ ಆಡಳಿತಗಾರರು ಅದಕ್ಕೆ ಯುವತಿಯನ್ನೇ ಹೊಣೆಯನ್ನಾಗಿಸುತ್ತಾರೆ ! ಈ ಸ್ಥಿತಿ ಬದಲಾಗಲು ಧರ್ಮಾಚರಣೀ ಆಡಳಿತಗಾರರಿರುವ ಹಿಂದೂ ರಾಷ್ಟ್ರವೇ ಬೇಕು ! – ಸಂಪಾದಕರು 

ಗೃಹಮಂತ್ರಿ ಅರಗ ಜ್ಞಾನೇಂದ್ರ

ಬೆಂಗಳೂರು (ಕರ್ನಾಟಕ) – ರಾಜ್ಯದ ಮೈಸೂರು ಜಿಲ್ಲೆಯಲ್ಲಿ ಕೆಲವು ದಿನಗಳ ಹಿಂದೆ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ಮಹಾರಾಷ್ಟ್ರದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವಾಗಿತ್ತು. ಪೊಲೀಸರು ಈ ಪ್ರಕರಣದಲ್ಲಿ ಕೆಲವರನ್ನು ಬಂಧಿಸಿದ್ದಾರೆ. ಈ ಘಟನೆಯ ಬಗ್ಗೆ ಕರ್ನಾಟಕದ ಗೃಹಮಂತ್ರಿಗಳಾದ ಜ್ಞಾನೇಂದ್ರರವರು ‘ಅತ್ಯಾಚಾರವು ಮೈಸೂರಿನಲ್ಲಿ ನಡೆದಿದೆ; ಆದರೆ ಕಾಂಗ್ರೆಸ್ ಪಕ್ಷವು ಇದರಿಂದ ರಾಜಕೀಯ ಪ್ರಯೋಜನ ಪಡೆದುಕೊಳ್ಳಲು ಪ್ರಯತ್ನಿಸುತ್ತಿದೆ. ಇದೊಂದು ಅಮಾನವೀಯ ಘಟನೆಯಾಗಿದೆ. ಯುವತಿ ಹಾಗೂ ಅವಳ ಸ್ನೇಹಿತನು ನಿರ್ಜನ ಪ್ರದೇಶಕ್ಕೆ ಹೋಗಿದ್ದರು. ಆ ಸ್ಥಳಕ್ಕೆ ಅವರು ಹೋಗಬಾರದಾಗಿತ್ತು. ಯುವತಿಯು ಸಾಯಂಕಾಲ 7 ಘಂಟೆಗೆ ನಿರ್ಜನ ಸ್ಥಳದಲ್ಲಿ ಏನು ಮಾಡುತ್ತಿದ್ದಳು?’ ಎಂದು ಪ್ರಶ್ನಿಸಿ ಸಂತ್ರಸ್ತೆಯನ್ನೇ ಆರೋಪಿಯನ್ನಾಗಿಸಲು ಪ್ರಯತ್ನಿಸಿದ್ದಾರೆ.

1. ಇದರಿಂದ ಜ್ಞಾನೇಂದ್ರರವರ ಬಗ್ಗೆ ವಿರೋಧಿ ಪಕ್ಷದವರಿಂದ ಹಾಗೂ ಸಮಾಜದಿಂದ ಟೀಕೆಯಾಗುತ್ತಿದೆ. ಅದರಲ್ಲಿ ಜ್ಞಾನೇಂದ್ರರು `ಕಾಂಗ್ರೆಸ್‍ರವರು ನನ್ನನ್ನು ಬಲಾತ್ಕಾರ ಮಾಡಲು ಪ್ರಯತ್ನಿಸುತ್ತಿದ್ದಾರೆ’, ಎಂದು ಉತ್ತರಿಸಿದರು. ಈ ಹೇಳಿಕೆಗಾಗಿ ಅವರು ರಾಜೀನಾಮೆ ನೀಡಲಿ, ಎಂದು ಈಗ ಬೇಡಿಕೆ ಮಾಡಲಾಗುತ್ತಿದೆ.

2. ಈ ವಿಷಯದಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಸಹ ‘ನನಗೂ ಕೂಡ ಅತ್ಯಾಚಾರದ ಘಟನೆಗೆ ಸಂಬಂಧಪಟ್ಟಂತೆ ನಮ್ಮ ಗೃಹಮಂತ್ರಿಗಳು ನೀಡಿರುವ ಟಿಪ್ಪಣಿ ಒಪ್ಪಿಗೆಯಿಲ್ಲ. ನಾನು ಅವರನ್ನು ಸ್ಪಷ್ಟೀಕರಣ ನೀಡಲು ಆದೇಶ ನೀಡಿದ್ದೇನೆ’, ಎಂದು ಪತ್ರಕರ್ತರೊಂದಿಗೆ ಮಾತನಾಡುವಾಗ ನುಡಿದರು.

ಅದಕ್ಕೆ ಜ್ಞಾನೇಂದ್ರರವರು ಸ್ಪಷ್ಟೀಕರಣ ನೀಡುವಾಗ ಹೀಗೆಂದರು ‘ಇಂತಹ ದುರದೃಷ್ಠಕರ ಘಟನೆಯ ವಿಷಯ ನಡೆದಿರುವಾಗ ನನಗೆ ಯಾರನ್ನೂ ನೋಯಿಸುವ ಉದ್ದೇಶವಿರಲಿಲ್ಲ. ಕಾಂಗ್ರೆಸ್ ಪಕ್ಷದ ಮುಖಂಡರ ವಿರುದ್ಧ ನಾನು ಮಾಡಿರುವ ಹೇಳಿಕೆಯನ್ನು ಹಿಂದೆಗೆದುಕೊಳ್ಳುತ್ತಿದ್ದೇನೆ. ಸರಕಾರ ಹಾಗೂ ಪೊಲೀಸರು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಅಪರಾಧಿಗಳನ್ನು ಬಂಧಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸಲಾಗುತ್ತಿದೆ.’