ಭಾರತೀಯ ನೌಕಾಪಡೆಯು ವಾಸ್ಕೋದ ಸೇಂಟ್ ಜೆಸಿಂತೊ ದ್ವೀಪದಲ್ಲಿ ಸ್ಥಳೀಯರ ಉಪಸ್ಥಿತಿಯಲ್ಲಿ ಧ್ವಜಾರೋಹಣ ಮಾಡಿದ್ದರಿಂದ ರಾಜ್ಯಾದ್ಯಂತ ದೇಶಭಕ್ತ ನಾಗರಿಕರಿಂದ ಅಭಿಪ್ರಾಯ !

ಯೋಗ್ಯರೀತಿಯಲ್ಲಿ ಪರಿಹಾರ ಕಂಡುಕೊಂಡ ಬಗ್ಗೆ ಗೋವಾ ಸರಕಾರ ಮತ್ತು ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್ ಅವರಿಗೆ ಸಾಖಳಿಯಲ್ಲಿನ ದೇಶಪ್ರೇಮಿಗಳಿಂದ ಅಭಿನಂದನೆ

ಸಾಖಳಿ – ಭಾರತೀಯ ನೌಕಾಪಡೆಯು ಆಗಸ್ಟ್ 14 ರಂದು ಮಧ್ಯಾಹ್ನ ಸ್ಥಳೀಯರ ಸಮ್ಮುಖದಲ್ಲಿ ವಾಸ್ಕೋದ ಸೇಂಟ್ ಜೆಸಿಂತೊ ದ್ವೀಪದಲ್ಲಿ ಧಜಾರೋಹಣ ಮಾಡಿತು. ಆರಂಭದಲ್ಲಿ, ಸ್ಥಳೀಯರು ಈ ದ್ವೀಪವು ಖಾಸಗಿ ಆಸ್ತಿ ಎಂದು ಹೇಳುತ್ತಾ ಧ್ವಜಾರೋಹಣವನ್ನು ವಿರೋಧಿಸಿದ್ದರು, ಸ್ಥಳೀಯರ ವಿರೋಧದ ನಂತರ ನೌಕಾಪಡೆಯು ಧ್ವಜಾರೋಹಣ ಕಾರ್ಯಕ್ರಮವನ್ನು ರದ್ದುಗೊಳಿಸಿತ್ತು; ಆದರೆ, ಈ ಪ್ರಕರಣವನ್ನು ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ ಇವರು ಗಂಭೀರವಾಗಿ ತೆಗೆದುಕೊಂಡು ನೌಕಾಪಡೆಗೆ ಧ್ವಜಾರೋಹಣ ಕಾರ್ಯಕ್ರಮವನ್ನು ಆಯೋಜಿಸುವಂತೆ ಹೇಳಿ ಅದಕ್ಕಾಗಿ ಸರಕಾರದ ಸಂಪೂರ್ಣ ಸಹಕಾರವಿದೆ ಎಂದು ಭರವಸೆ ನೀಡಿದರು.

ಅದರ ನಂತರ ದ್ವೀಪದಲ್ಲಿ ಸ್ಥಳೀಯರ ಸಮ್ಮುಖದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಈ ಹಿನ್ನೆಲೆಯಲ್ಲಿ, ಸಾಖಳಿಯ ದೇಶಪ್ರೇಮಿ ನಾಗರಿಕರು ಆಗಸ್ಟ್ 14 ರ ಸಂಜೆ ಸಾಖಳಿಯಲ್ಲಿನ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯ ಬಳಿ ಜಮಾಯಿಸಿದರು ಮತ್ತು ಸೇಂಟ್ ಜೆಸಿಂತೋ ದ್ವೀಪದಲ್ಲಿ ಸ್ಥಳೀಯರ ವಿವಾದವನ್ನು ಸರಿಯಾದ ರೀತಿಯಲ್ಲಿ ಪರಿಹರಿಸಿದ ಬಗ್ಗೆ ಗೋವಾ ಸರಕಾರ ಮತ್ತು ಮುಖ್ಯಮಂತ್ರಿ ಪ್ರಮೋದ ಸಾವಂತ ಅವರಿಗೆ ಅಭಿನಂದನೆ ತಿಳಿಸಿದರು. ಸಾಖಳಿಯ ದೇಶಭಕ್ತ ನಾಗರಿಕರು ದ್ವೀಪದಲ್ಲಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ಸ್ಥಳೀಯರನ್ನು ಅಭಿನಂದಿಸಿದರು. ಪ್ರತಿಯೊಬ್ಬ ಪ್ರಜೆಯೂ ಭಾರತವನ್ನು ತನ್ನ ದೇಶವೆಂದು ಒಪ್ಪಿಕೊಳ್ಳಬೇಕು ಮತ್ತು ಹಾಗೆ ಮಾಡದಿದ್ದರೆ ದೇಶದ ಸಮಗ್ರತೆಗೆ ಧಕ್ಕೆ ಬರುತ್ತದೆ, ಎಂದು ನಾಗರಿಕರು ಹೇಳಿದರು.

ಧ್ವಜಾರೋಹಣವನ್ನು ವಿರೋಧಿಸುವ ರಾಷ್ಟ್ರವಾದಿ ಕಾಂಗ್ರ್ರೆಸ್‍ನ ನಾಯಕ ಜುಝೆ ಫಿಲಿಪ್ ಇವರ ವರ್ತನೆಯು ದೇಶದ್ರೋಹಿಯಾಗಿದೆ ! – ಬಿಜೆಪಿ

ಮಾಪಸಾ : ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ನಾಯಕ ಮತ್ತು ಮಾಜಿ ಸಚಿವ ಜುಝೆ ಫಿಲಿಪ್ ಡಿಸೋಜ ಇವರಿಂದಾದ ಧ್ವಜಾರೋಹಣವನ್ನು ವಿರೋಧಿಸುವ ವರ್ತನೆಯು ದೇಶದ್ರೋಹಿಯಾಗಿದೆ. ನಾವು ಜುಝೆ ಫಿಲಿಪ್ ಅವರನ್ನು ಖಂಡಿಸುತ್ತೇವೆ. ಅವರು ಎಲ್ಲರಲ್ಲಿ ಕ್ಷಮೆ ಕೇಳಬೇಕು. ರಾಷ್ಟ್ರವಾದಿ ಕಾಂಗ್ರೆಸ್‍ನ ರಾಷ್ಟ್ರೀಯ ನಾಯಕ ಶರದ ಪವಾರ ಇವರು ಜುಝೆ ಫಿಲಿಪ್ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು; ಇಲ್ಲದಿದ್ದರೆ ನಾವು ಅವರನ್ನು ಯಾವುದೇ ವೇದಿಕೆಯಲ್ಲಿ ಕುಳಿತುಕೊಳ್ಳಲು ಬಿಡುವುದಿಲ್ಲ. ಅವರ ಮೇಲೆ ಕಪ್ಪು ಮಸಿ ಬಳಿಯಲಾಗುವದು ಎಂದು ಬಿಜೆಪಿಯ ಸಂದೀಪ ಫಲಾರಿ ಅವರು ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.