‘ಭಾರತದ ಎಡಪಂಥೀಯರು ಚೀನಾದ ಗುಲಾಮರು ?’ ಕುರಿತು ವಿಶೇಷ ಆನ್‌ಲೈನ್ ಸಂವಾದ

‘ಭಾರತವಿರೋಧಿ ಎಡಪಂಥೀಯರ ವಿರುದ್ಧ ಕ್ರಮಕೈಗೊಳ್ಳುವವರೆಗೆ ಪ್ರಯತ್ನಿಸಬೇಕು ! – ಶ್ರೀ. ಚಕ್ರವರ್ತಿ ಸೂಲಿಬೆಲೆ, ಲೇಖಕ ಮತ್ತು ಮಾರ್ಗದರ್ಶಕರು, ಯುವಾ ಬ್ರಿಗೇಡ್

‘ಮೊದಲಿನಿಂದಲೂ, ಅಂದರೆ ಕಾಂಗ್ರೆಸ್‌ನ ಆಡಳಿತದ ಅವಧಿಯಲ್ಲಿ ಕೂಡ ಭಾರತಕ್ಕೆ ಚೀನಾದ ಅಪಾಯ ಇತ್ತು. ಎಡಪಂಥೀಯರ ಇತಿಹಾಸ ಭಾರತವಿರೋಧಿಯೇ ಆಗಿದೆ. ಇವರಿಗೆ ದೇಶಕ್ಕಿಂತ ತಮ್ಮ ವಿಚಾರಧಾರೆ ಮತ್ತು ಪಕ್ಷವೇ ದೊಡ್ಡದೆನಿಸುವುದರಿಂದ ಅವರು ಭಾರತವನ್ನು ಒಡೆಯಲು ಪ್ರಯತ್ನಿಸುತ್ತಾರೆ. ಅವರು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಬಲೆಗಳನ್ನು ಬೀಸಿದ್ದಾರೆ ಮತ್ತು ಎಂದಿಗೂ ಭಾರತದ ಪರವಾಗಿರುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇವರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ನಾವು ಸತತವಾಗಿ ಪ್ರಯತ್ನವನ್ನು ಮುಂದುವರಿಸಬೇಕು, ಎಂದು ಲೇಖಕ ಮತ್ತು ಯುವಾ ಬ್ರಿಗೇಡ್‌ನ ಮಾರ್ಗದರ್ಶಕರಾದ ಶ್ರೀ. ಚಕ್ರವರ್ತಿ ಸೂಲಿಬೆಲೆಯವರು ಹೇಳಿದ್ದಾರೆ. ಅವರು ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ ‘ಭಾರತ್ ಕೆ ವಾವಪಂಥಿ ಚೀನಾ ಕೆ ಗುಲಾಂ’ ಎಂಬ ವಿಶೇಷ ಆನ್‌ಲೈನ್ ಸಂವಾದದಲ್ಲಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮವನ್ನು ಸಮಿತಿಯ ಜಾಲತಾಣ Hindujagruti.org, ಯೂಟ್ಯೂಬ್ ಮತ್ತು ಟ್ವಿಟರ್‌ನಲ್ಲಿ ಸಾವಿರಾರು ಜನರು ವೀಕ್ಷಿಸಿದರು.

ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಗೌರವ್ ಗೋಯಲ್ ಇವರು ಮಾತನಾಡುತ್ತಾ, ಯಾವುದೇ ವಿಚಾರಧಾರೆಯು ಶ್ರೇಷ್ಠವಾಗಿರಲು ಸಾಧ್ಯವಿಲ್ಲ; ಆದರೆ ಶತ್ರುರಾಷ್ಟ್ರ ಚೀನಾದೊಂದಿಗೆ ಸ್ನೇಹವನ್ನು ಕಾಪಾಡಿಕೊಳ್ಳುವ ಎಡಪಂಥೀಯ ವಿಚಾರಧಾರೆಯ ನಾಯಕರಿಗೆ ತಮ್ಮ ವಿಚಾರಧಾರೆ ಮಾತ್ರ ಮಹತ್ವದ್ದಾಗಿದೆ ಎಂದು ಅನಿಸುತ್ತದೆ. ಅವರಿಗೆ ಭಾರತ ಮತ್ತು ಭಾರತೀಯ ಸಂಸ್ಕೃತಿಯೊಂದಿಗೆ ಯಾವುದೇ ಸಂಬಂಧವಿಲ್ಲ. ಒಂದೆಡೆ, ನಮ್ಮ ಯೋಧರು ಗಡಿಯಲ್ಲಿ ಚೀನಾದ ವಿರುದ್ಧ ಹೋರಾಡುತ್ತಿದ್ದರೆ, ಮತ್ತೊಂದೆಡೆ, ‘ಕಮ್ಯುನಿಸ್ಟ್ ಪಾರ್ಟಿ ಆಫ್ ಚೈನಾ’ದ ೧೦೦ ನೇ ವಾರ್ಷಿಕೋತ್ಸವದ ನಿಮಿತ್ತ ಚೀನಾದ ರಾಯಭಾರ ಕಚೇರಿಯು ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ದೇಶದ ಪ್ರಮುಖ ಕಮ್ಯುನಿಸ್ಟ್ ನಾಯಕರು ಉಪಸ್ಥಿತರಿದ್ದು ಚೀನಾ ಮತ್ತು ಅದರ ನೀತಿಗಳನ್ನು ಹೊಗಳಿದರು. ಇದು ದೇಶದ್ರೋಹವಾಗಿದೆ. ಇದು ಯಾವುದೇ ಭಯೋತ್ಪಾದಕ ಕೃತ್ಯಕ್ಕಿಂತ ಕಡಿಮೆ ಅಪಾಯಕಾರಿವಾಗಿರದೇ ಭಾರತವನ್ನು ಒಡೆಯುವ ಕಾರ್ಯವಾಗಿದೆ. ಭಾರತ ಸರಕಾರವು ಈ ಕಮ್ಯೂನಿಸ್ಟ್ ನಾಯಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಬೇಕು. ಇದೇ ಎಡಪಂಥೀಯರಲ್ಲಿ ಹಿಂದೂಗಳ ಬಗ್ಗೆ ತಿರಸ್ಕಾರದ ಭಾವನೆ ಇದೆ. ಕಳೆದ ಶತಮಾನದಲ್ಲಿ ಪ್ರಪಂಚದಾದ್ಯಂತ ಕಮ್ಯುನಿಸ್ಟರು ಲಕ್ಷಾಂತರ ಜನರ ಕಗ್ಗೊಲೆ ಮಾಡಿದ್ದಾರೆ. ಅವರ ನಿಜ ಸ್ವರೂಪ ಈಗ ಬಹಿರಂಗವಾಗಿದೆ, ಎಂದರು.

ಸನಾತನ ಸಂಸ್ಥೆಯ ಧರ್ಮಪ್ರಚಾರಕ ಶ್ರೀ. ಅಭಯ ವರ್ತಕ್ ಮಾತನಾಡಿ, ‘೧೯೬೨ ರ ಭಾರತ-ಚೀನಾ ಯುದ್ಧದ ಸಮಯದಲ್ಲಿ ಚೀನಾವನ್ನು ಬೆಂಬಲಿಸುವ ಯಾವ ವಿಚಾರಧಾರೆ ಎಡಪಂಥೀಯರು ಅನುಸರಿಸಿದ್ದರೋ ಈಗಲೂ ಅದನ್ನೇ ಪಾಲಿಸುತ್ತಿದ್ದಾರೆ ಮತ್ತು ಅದು ಮುಂದೆಯೂ ಹಾಗೇ ಇರಲಿದೆ. ನಕ್ಸಲರನ್ನು ಕೊಡುಗೆಯಾಗಿ ನೀಡಿರುವ ಈ ಎಡಪಂಥೀಯರು ಚೀನಾದ ‘ಸ್ಲೀಪರ್ ಸೆಲ್’ಗಳಂತೆ ಕೆಲಸ ಮಾಡುತ್ತಿದ್ದಾರೆ. ಸರಕಾರವು ಈ ‘ಸ್ಲೀಪರ್ ಸೆಲ್’ಗಳನ್ನು ನಾಶಪಡಿಸಬೇಕು. ಹಿಂದೂ ಹಬ್ಬ ಮತ್ತು ಗ್ರಂಥಗಳಿಂದ ಹಿಡಿದು ಭಾರತದ ಗಡಿಗಳಲ್ಲಿನ ಅಭಿವೃದ್ಧಿ ಕೆಲಸಗಳನ್ನು ಈ ‘ಎಡಪಂಥೀಯರು’ ನಿರಂತರವಾಗಿ ವಿರೋಧಿಸುತ್ತಿರುತ್ತಾರೆ. ಅವರು ಭಾರತವನ್ನು ಛಿದ್ರಗೊಳಿಸಲು ಕೆಲಸ ಮಾಡುತ್ತಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರೂ ಕೂಡ ಹಿಂದವಿ ಸ್ವರಾಜ್ಯದ ವಿರುದ್ಧ ಬಂದವರಿಗೆ ಪಾಠ ಕಲಿಸಿದರು. ಎಲ್ಲರೂ ಕೂಡ ಮಹಾರಾಜರ ಆದರ್ಶವನ್ನು ಮುಂದಿಟ್ಟುಕೊಂಡು ವಿವಿಧ ಮಾರ್ಗಗಳಿಂದ ದೇಶದ ವಿರುದ್ಧ ಕಾರ್ಯ ನಿರ್ವಹಿಸುತ್ತಿರುವ ಎಡಪಂಥೀಯ ವಿಚಾರಸರಣಿಯ ಸಂಘಟನೆ, ಪಕ್ಷಗಳ ಮೇಲೆ ನಿಷೇಧ ಹೇರುವ ಮತ್ತು ಅವರು ಸೆರೆಮನೆ ಸೇರುವ ತನಕ ಈ ಹೋರಾಟ ಮುಂದುವರಿಸಬೇಕು ಎಂದರು.