೫ ಕ್ಕಿಂತಲೂ ಹೆಚ್ಚು ಮಕ್ಕಳಿರುವ ಕೇರಳದಲ್ಲಿನ ಕ್ರೈಸ್ತರಿಗೆ ಕ್ಯಾಥೋಲಿಕ್ ಚರ್ಚ್ ಆರ್ಥಿಕ ಸಹಾಯ ನೀಡಲಿದೆ !

ಕೇರಳ ಕ್ಯಾಥೋಲಿಕ್ ಬಿಶಪ್ಸ್ ಕೌನ್ಸಿಲ್ (ಕೆ.ಸಿ.ಬಿ.ಸಿ.) ಈ ಸಂಘಟನೆಯು ಕೇರಳದಲ್ಲಿನ ಕ್ರೈಸ್ತರ ಕ್ಷೀಣಿಸುತ್ತಿರುವ ಜನನದರದ ಬಗ್ಗೆ ಚಿಂತೆ ವ್ಯಕ್ತಪಡಿಸಿದೆ; ಆದರೆ ಮತ್ತೊಂದೆಡೆಯಲ್ಲಿ ಕೇರಳ ಕ್ಯಾಥೋಲಿಕ್ ಚರ್ಚ್‌ನಿಂದ ಕಲ್ಯಾಣಕಾರಿ ಯೋಜನೆಯನ್ನು ಘೋಷಣೆ ಮಾಡಿದೆ.

ವಾರಾಣಸಿಯಲ್ಲಿ ಹಿಂದೂ ಕುಟುಂಬವನ್ನು ಮತಾಂತರಿಸಲು ಪ್ರಯತ್ನಿಸಿದ ಮೂವರು ಕ್ರೈಸ್ತರ ಬಂಧನ !

ಮೂವರು ಆರೋಪಿಗಳು ಕರಖಿಯಾವ ಎಂಬ ಊರಿನಲ್ಲಿ ಲಾಲಜೀ ವಿಶ್ವಕರ್ಮ ಎಂಬ ಹೆಸರಿನ ಹಿಂದೂವಿನ ಮನೆಗೆ ಬಂದಿದ್ದರು. ಅವರು ಕುಟುಂಬದವರಿಗೆ ಒಳ್ಳೆಯ ಜೀವನ, ಮಕ್ಕಳಿಗೆ ಶಿಕ್ಷಣ ಹಾಗೂ ಆಹಾರದ ವ್ಯವಸ್ಥೆ ಇತ್ಯಾದಿಯ ಆಮಿಷ ತೋರಿಸಿದ್ದರು.

ಬಿಹಾರ ಶಿಕ್ಷಣ ಮಂಡಳಿಯ 5 ನೇ ತರಗತಿಯ ಪಠ್ಯ ಪುಸ್ತಕದಲ್ಲಿ ಮಕ್ಕಳ ಮನಸ್ಸಿನ ಮೇಲೆ ಯೇಸು ಕ್ರಿಸ್ತನ ಪ್ರಭಾವ ಬೀರುವ ಅಧ್ಯಾಯ !

ರಾಜ್ಯದ ಶಿಕ್ಷಣ ಮಂಡಳಿಯ `ಸ್ಟೇಟ್ ಕೌನ್ಸಿಲ್ ಫಾರ್ ಎಜುಕೇಷನಲ್ ರಿಸರ್ಚ್ ಮತ್ತು ಟ್ರೈನಿಂಗ್’ (ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತಿನ) 5 ನೇ ತರಗತಿಯ `ಬ್ಲಾಸಮ್ ಪಾರ್ಟ್ – 4′ ಪಠ್ಯ ಪುಸ್ತಕದಲ್ಲಿ, ಮಕ್ಕಳ ಮನಸ್ಸಿನಲ್ಲಿ ಯೇಸು ಕ್ರಿಸ್ತನ ಪ್ರಭಾವ ಬೀರುವಂತಹ ಪಠ್ಯವನ್ನು ನೀಡಲಾಗಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡದ ವ್ಯಕ್ತಿಯು ಮತಾಂತರವಾದರೆ ಆತನಿಗೆ ಅವರಿಗಾಗಿರುವ ಯೋಜನೆಯ ಲಾಭ ಸಿಗಲಾರದು ! – ಕೇಂದ್ರ ಸರಕಾರ

ಪರಿಶಿಷ್ಟ ಜಾತಿ ಮತ್ತು ಪಂಗಡದವರಲ್ಲಿ ಯಾರಾದರೂ ಮತಾಂತರವಾದರೆ ಅವರಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗಾಗಿ ಇರುವ ಯೋಜನೆಯ ಲಾಭ ಸಿಗುವುದಿಲ್ಲ; ಎಂದು ಕೇಂದ್ರ ಸರಕಾರವು ಸಂಸತ್ತಿನಲ್ಲಿ ಒಂದು ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ಹೇಳಿದೆ.

ಅಸ್ಸಾಂನಲ್ಲಿ ರೋಗಿಗಳನ್ನು ಉಪಚರಿಸುವ ನೆಪದಿಂದ ಮತಾಂತರಿಸುವ ಕ್ರೈಸ್ತ ಧರ್ಮಪ್ರಚಾರಕನ ಬಂಧನ.

ಒತ್ತಾಯಪೂರ್ವಕವಾಗಿ ಜನರನ್ನು ಮತಾಂತರಿಸುತ್ತಿದ್ದ ಪ್ರಕರಣದಲ್ಲಿ ಅಸ್ಸಾಂ ಪೊಲೀಸರು ಇಲ್ಲಿಯ ಕ್ರಿಶ್ಚನ್ ಮಿಷಿನರಿ(ಧರ್ಮಪ್ರಚಾರಕ) ರಂಜನ್ ಸುತಿಯಾನನ್ನು ಬಂಧಿಸಿದ್ದಾರೆ.

ವಾಪಿ (ಗುಜರಾತ್)ನಲ್ಲಿ ಮತಾಂತರಗೊಂಡ ೨೧ ಕ್ರೈಸ್ತ ಕುಟುಂಬಗಳಿಂದ ಪುನಃ ಹಿಂದೂ ಧರ್ಮಕ್ಕೆ ಪ್ರವೇಶ !

ಇಲ್ಲಿನ ಧರ್ಮಪುರ ಮತ್ತು ಕಪರಾಡಾದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ೨೧ ಕುಟುಂಬಗಳು ಮತ್ತೆ ಹಿಂದೂ ಧರ್ಮಕ್ಕೆ ಮರಳಿದೆ. ವಿಶ್ವ ಹಿಂದೂ ಪರಿಷತ್ತಿನ ಪ್ರಯತ್ನದಿಂದ ಅವರನ್ನು ಪುನಃ ಹಿಂದೂ ಧರ್ಮಕ್ಕೆ ಕರೆತರಲಾಯಿತು. ಆಮಿಷದಿಂದಾಗಿ ಈ ಕುಟುಂಬಗಳು ಮತಾಂತರಗೊಂಡಿದ್ದವು.

5 ಅಥವಾ ಹೆಚ್ಚಿನ ಮಕ್ಕಳನ್ನು ಹೊಂದಿರುವ ಕ್ರೈಸ್ತ ದಂಪತಿಗಳಿಗೆ ಆರ್ಥಿಕ ನೆರವು ಘೋಷಿಸಿದ ಕೇರಳದ ಸಾಯರೋ ಮಲಬಾರ್ ಚರ್ಚ್ !

ಇಂದು ಭಾರತದ 8 ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ಆದ್ದರಿಂದ, ಈ ರಾಜ್ಯಗಳಲ್ಲಿ ಹಿಂದೂಗಳು ಹೆಚ್ಚು ಮಕ್ಕಳಿಗೆ ಜನ್ಮ ನೀಡಬೇಕು ಎಂದು ಘೋಷಿಸಿದರೆ, ಅದರಲ್ಲಿ ಏನು ತಪ್ಪಿದೆ ?

ಪ್ರಧಾನಿ ಮೋದಿ, ಅಮಿತ್ ಶಾಹ ಮೊದಲಾದವರ ಬಗ್ಗೆ ಅವಹೇಳನಕಾರಿ ಭಾಷೆಯಲ್ಲಿ ಟೀಕಿಸಿದ ಪಾದ್ರಿಯ ಬಂಧನ !

ಇಲ್ಲಿಯವರೆಗೆ ಜಗತ್ತಿನಾದ್ಯಂತ ಕಾಮಾಂಧ ಪಾದ್ರಿಗಳ ಚಟುವಟಿಕೆಗಳು ಬೆಳಕಿಗೆ ಬರುತಿದ್ದವು. ಈಗ ದ್ವೇಷಭಾವನೆ ಹಾಗೂ ಅವಹೇಳನಕಾರಿ ಹೇಳಿಕೆ ನೀಡುವ ಪಾದ್ರಿಗಳೂ ಇದ್ದಾರೆ, ಎಂಬುದು ಬೆಳಕಿಗೆ ಬರುತ್ತಿದೆ.

‘ತಮ್ಮದೇ ಮನೆಯಲ್ಲಿ ಮರ್ಯಾದೆ ಸಿಗದೇ ಇದ್ದುದರಿಂದ ದಲಿತರು ಮತಾಂತರವಾಗುತ್ತಾರೆ !’ – ಬಿಹಾರದ ಮಾಜಿ ಮುಖ್ಯಮಂತ್ರಿ ಜೀತನ್ ರಾಮ ಮಾಂಝಿ

ಹಿಂದುತ್ವನಿಷ್ಠ ಸಂಘಟನೆಗಳು, ಧಾರ್ಮಿಕ ಸಂಘಟನೆಗಳು, ಸಂಪ್ರದಾಯಗಳು ಇವುಗಳೆಲ್ಲ ಜಾತಿಬೇಧವನ್ನು ನಾಶ ಮಾಡಲು ಕಾರ್ಯನಿರತವಾಗಿವೆ; ಆದರೆ ಬಡ ಹಿಂದೂಗಳಿಗೆ ಆಮಿಷಗಳನ್ನು ತೋರಿಸುವುದರಿಂದಲೇ ಅವರು ಮತಾಂತರವಾಗುತ್ತಾರೆ, ಇದೇ ಸತ್ಯವಾಗಿದೆ.

ಕೇರಳದಲ್ಲಿ ಮುಸಲ್ಮಾನ ಹಾಗೂ ಕ್ರೈಸ್ತರಿಗೆ ನೀಡಿದ ಅಲ್ಪಸಂಖ್ಯಾತ ಸ್ಥಾನದ ಬಗ್ಗೆ ಮರುಪರಿಶೀಲಿಸಬೇಕು ! – ಕೇರಳ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ

ಕೇರಳದಲ್ಲಿ ಮುಸಲ್ಮಾನ ಮತ್ತು ಕ್ರೈಸ್ತರಿಗೆ ನೀಡಲಾಗಿರುವ ‘ಅಲ್ಪಸಂಖ್ಯಾತ’ ಸ್ಥಾನಮಾನದ ಬಗ್ಗೆ ಮರುಪರಿಶೀಲಿಸುವಂತೆ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗಕ್ಕೆ ಆದೇಶ ನೀಡಬೇಕು, ಎಂದು ಅರ್ಜಿಯೊಂದನ್ನು ಕೇರಳ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ.