ವಾಪಿ (ಗುಜರಾತ್)ನಲ್ಲಿ ಮತಾಂತರಗೊಂಡ ೨೧ ಕ್ರೈಸ್ತ ಕುಟುಂಬಗಳಿಂದ ಪುನಃ ಹಿಂದೂ ಧರ್ಮಕ್ಕೆ ಪ್ರವೇಶ !

ಆಮಿಷ ತೋರಿಸಿದ್ದರಿಂದ ಕ್ರೈಸ್ತ ಧರ್ಮವನ್ನು ಸ್ವೀಕರಿಸಲಾಗಿತ್ತು !

ಇಡೀ ದೇಶದಲ್ಲಿ ಮತಾಂತರ ವಿರೋಧಿ ಕಾನೂನು ಜಾರಿಗೆ ಬರುವವರೆಗೆ ಹಿಂದೂಗಳ ಮತಾಂತರವನ್ನು ತಡೆಯಲು ಸಾಧ್ಯವಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರಕಾರವು ಈ ಕಾನೂನನ್ನು ಆದಷ್ಟು ಬೇಗ ಜಾರಿಗೆ ತರಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !

ವಾಪಿ (ಗುಜರಾತ) – ಇಲ್ಲಿನ ಧರ್ಮಪುರ ಮತ್ತು ಕಪರಾಡಾದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ೨೧ ಕುಟುಂಬಗಳು ಮತ್ತೆ ಹಿಂದೂ ಧರ್ಮಕ್ಕೆ ಮರಳಿದೆ. ವಿಶ್ವ ಹಿಂದೂ ಪರಿಷತ್ತಿನ ಪ್ರಯತ್ನದಿಂದ ಅವರನ್ನು ಪುನಃ ಹಿಂದೂ ಧರ್ಮಕ್ಕೆ ಕರೆತರಲಾಯಿತು. ಆಮಿಷದಿಂದಾಗಿ ಈ ಕುಟುಂಬಗಳು ಮತಾಂತರಗೊಂಡಿದ್ದವು.

ಅವರನ್ನೆಲ್ಲ ೫ ವರ್ಷಗಳ ಹಿಂದೆ ಮತಾಂತರಿಸಲಾಗಿತ್ತು; ಆದರೆ ಅವರ ಸಮಸ್ಯೆಗಳು ಬಗೆಹರಿದಿರಲಿಲ್ಲ. (ಇದರರ್ಥ ಮತಾಂತರದಿಂದ ಸಮಸ್ಯೆಗಳನ್ನು ಪರಿಹರಿಸಲಾಗುವುದಿಲ್ಲ, ಎಂಬುದನ್ನು ಹಿಂದೂ ಧರ್ಮವನ್ನು ತ್ಯಜಿಸಲು ಪ್ರಯತ್ನಿಸುತ್ತಿರುವವರು ಗಮನದಲ್ಲಿಡಬೇಕು ! – ಸಂಪಾದಕ)