ಭಾರತದಲ್ಲಿ ಕ್ರೈಸ್ತ ಧರ್ಮಪ್ರಚಾರಕರನ್ನು ಶಾಶ್ವತವಾಗಿ ನಿಷೇಧಿಸಬೇಕು ಎಂದು ಈಗ ಹಿಂದೂಗಳು ಬೇಡಿಕೆಯನ್ನು ಇಡಬೇಕು.ಭಾಜಪ ಸರಕಾರವು ಇದಕ್ಕಾಗಿ ಪ್ರಯತ್ನಿಸಬೇಕು ಎಂಬುದು ಹಿಂದೂಗಳ ಅಪೇಕ್ಷೆಯಾಗಿದೆ. |
ದಿಬ್ರುಗಡ (ಅಸ್ಸಾಂ)– ಒತ್ತಾಯಪೂರ್ವಕವಾಗಿ ಜನರನ್ನು ಮತಾಂತರಿಸುತ್ತಿದ್ದ ಪ್ರಕರಣದಲ್ಲಿ ಅಸ್ಸಾಂ ಪೊಲೀಸರು ಇಲ್ಲಿಯ ಕ್ರಿಶ್ಚನ್ ಮಿಷಿನರಿ(ಧರ್ಮಪ್ರಚಾರಕ) ರಂಜನ್ ಸುತಿಯಾನನ್ನು ಬಂಧಿಸಿದ್ದಾರೆ. ಹಿಂದೂ ಯುವ ವಿದ್ಯಾರ್ಥಿ ಪರಿಷತ್ತಿನಿಂದ ರಂಜನ್ ಸುತಿಯಾ ಇವರ ವಿರುದ್ಧ ಆರೋಪ ದಾಖಲಿಸಲಾಗಿತ್ತು; ತದನಂತರ ಈ ಕಾರ್ಯಾಚರಣೆ ಮಾಡಲಾಯಿತು. (ಈ ರೀತಿ ದೂರನ್ನು ಏಕೆ ಸಲ್ಲಿಸ ಬೇಕಾಗುತ್ತದೆ? ಪೊಲೀಸರಿಗೆ ಇದು ಗಮನಕ್ಕೆ ಬರುವುದಿಲ್ಲವೇ? ಅಸ್ಸಾಂನಲ್ಲಿ ಭಾಜಪ ಸರಕಾರ ಇರುವುದರಿಂದ ಪೊಲೀಸರಿಗೆ ಈ ಸಂದರ್ಭದಲ್ಲಿ ಹೆಚ್ಚು ಜಾಗರೂಕರಾಗಿರಲು ಆದೇಶ ನೀಡಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ. ಸಂಪಾದಕೀಯ)
Assam: Christian evangelist Ranjan Chutia arrested for converting people in the name of treatments, had changed Vaishnav devotional songs to praise Jesus Christhttps://t.co/K8tJksrN45
— OpIndia.com (@OpIndia_com) July 29, 2021
ಮತಾಂತರಕ್ಕಾಗಿ ರಂಜನ್ ಸುತಿಯಾ ಇವರು ಇಲ್ಲಿಯ 15 ನೇ ಶತಮಾನದ ಸಂತ ಶ್ರೀಮಂತ ಶಂಕರದೇವ ಇವರ ಧಾರ್ಮಿಕ ಮತ್ತು ಸಾಂಸ್ಕೃತಿಕ ಗೀತೆಗಳನ್ನು ಉಪಯೋಗಿಸಿದ್ದಾರೆ. ಈ ಗೀತೆಗಳಲ್ಲಿ ಅವರು ಕೆಲವು ಬದಲಾವಣೆಯನ್ನು ಮಾಡಿ ಅದರಲ್ಲಿ ಯೇಸುವಿನ ಹೆಸರನ್ನು ಸೇರಿಸಿದ್ದಾರೆ. (ಸಮಯಸಾಧಕ ಕ್ರೈಸ್ತ ಧರ್ಮಪ್ರಚಾರಕ – ಸಂಪಾದಕರು) ರಂಜನ ಸತಿಯಾ ಇವನು ಇಲ್ಲಿ ‘ವಲ್ರ್ಡ್ ಹೀಲಿಂಗ್ ಪ್ರೇಯರ್ ಸೆಂಟರ್’ ನಡೆಸುತ್ತಿದ್ದನು. ಇಲ್ಲಿ ಯೇಸುಕ್ರಿಸ್ತನ ಶಕ್ತಿಯಿಂದ ರೋಗಿಗಳನ್ನು ಗುಣಮುಖರನ್ನಾಗಿಸುತ್ತೇನೆ ಎಂದು ಹೇಳಿ ಅವರ ದಾರಿ ತಪ್ಪಿಸುತ್ತಿದ್ದನು. (ಅಂ.ನಿ.ಸ. ದವರಿಗೆ ಇಂತಹ ಹೀಲಿಂಗ್ ಸೆಂಟರ್ ಗಳು ಯಾಕೆ ಕಾಣಲಿಲ್ಲ? ಸಂಪಾದಕರು) ತದನಂತರ ಅವರನ್ನು ಮತಾಂತರಿಸಲಾಗುತ್ತಿತ್ತು. ಆರೋಗ್ಯ ಸೌಲಭ್ಯಗಳು ಮತ್ತು ಆರ್ಥಿಕ ಸಹಾಯ ಮಾಡುವ ಹೆಸರಿನಲ್ಲಿ ರಂಜನ್ ಇವನು ನೂರಾರು ಹಿಂದೂಗಳನ್ನು ಮತಾಂತರಿಸಿದ ಆರೋಪವನ್ನು ಹೊಂದಿದ್ದಾನೆ. (ಹಿಂದೂಗಳನ್ನು ಮತ್ತೆ ಹಿಂದೂ ಧರ್ಮಕ್ಕೆ ಕರೆತರಲು ರಾಜ್ಯದ ಭಾಜಪ ಸರಕಾರವು ಮತ್ತು ಅಲ್ಲಿಯ ಹಿಂದೂ ತತ್ತ್ವನಿಷ್ಠ ಸಂಘಟನೆಗಳು ಪ್ರಯತ್ನಿಸಬೇಕು.- ಸಂಪಾದಕರು)