ವಾರಾಣಸಿಯಲ್ಲಿ ಹಿಂದೂ ಕುಟುಂಬವನ್ನು ಮತಾಂತರಿಸಲು ಪ್ರಯತ್ನಿಸಿದ ಮೂವರು ಕ್ರೈಸ್ತರ ಬಂಧನ !

ಮತಾಂತರ ನಿರ್ಬಂಧ ಕಾನೂನು ತರಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !

* ಒಳ್ಳೆಯ ಜೀವನ, ಮಕ್ಕಳ ಶಿಕ್ಷಣ ಹಾಗೂ ಆಹಾರದ ವ್ಯವಸ್ಥೆ ಮಾಡಿಕೊಡುವುದಾಗಿ ಆಮಿಷ !

* ಮೋದಿ ಸರಕಾರವು ಹಿಂದೂಗಳ ಮತಾಂತರವನ್ನು ತಡೆಯಲು ರಾಷ್ಟ್ರೀಯ ಮಟ್ಟದಲ್ಲಿ ಕಠೋರ

ವಾರಾಣಸಿ (ಉತ್ತರಪ್ರದೇಶ)– ಇಲ್ಲಿನ ಫೂಲಪೂರ ಪೊಲೀಸ್ ಠಾಣೆಯ ಕ್ಷೇತ್ರಕ್ಕೆ ಸೇರಿದ ಕರಖಿಯಾವ ಎಂಬ ಊರಿನಲ್ಲಿ ಒಂದು ಹಿಂದೂ ಕುಟುಂಬವನ್ನು ಮತಾಂತರಿಸಲು ಪ್ರಯತ್ನಿಸಿದ ಮೂವರನ್ನು ಬಂಧಿಸಲಾಗಿದೆ. ವಿಜಯ ಕುಮಾರ ಹಾಗೂ ಕಿರಣ ಎಂಬ ದಂಪತಿ ಹಾಗೂ ತಮಿಳುನಾಡಿನ ಕನ್ಯಾಕುಮಾರಿಯಿಂದ ಬಂದಿರುವ ನೀಲ ತುರೈ ಎಂಬುದು ಬಂಧಿತ ಆರೋಪಿಗಳ ಹೆಸರುಗಳಾಗಿವೆ. (ಕ್ರೈಸ್ತ ಮತಕ್ಕೆ ಮತಾಂತರಗೊಂಡರೂ ಕೂಡ ತಮ್ಮ ಹಿಂದೂ ಹೆಸರನ್ನು ಬದಲಾಯಿಸುವುದಿಲ್ಲ; ಏಕೆಂದರೆ ಅವರಿಗೆ ಇತರ ಹಿಂದೂಗಳನ್ನು ಮತಾಂತರಗೊಳಿಸಲು ಸುಲಭವಾಗುತ್ತದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ ! – ಸಂಪಾದಕರು) ಹಿಂದು ಜಾಗರಣಾ ಮಂಚನ ಪ್ರಾದೇಶಿಕ ಮಂತ್ರಿ ಗೌರೀಶ ಸಿಂಹರವರು ನೀಡಿದ ದೂರಿನ ಮೇರೆಗೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದರು.

ಮೂವರು ಆರೋಪಿಗಳು ಕರಖಿಯಾವ ಎಂಬ ಊರಿನಲ್ಲಿ ಲಾಲಜೀ ವಿಶ್ವಕರ್ಮ ಎಂಬ ಹೆಸರಿನ ಹಿಂದೂವಿನ ಮನೆಗೆ ಬಂದಿದ್ದರು. ಅವರು ಕುಟುಂಬದವರಿಗೆ ಒಳ್ಳೆಯ ಜೀವನ, ಮಕ್ಕಳಿಗೆ ಶಿಕ್ಷಣ ಹಾಗೂ ಆಹಾರದ ವ್ಯವಸ್ಥೆ ಇತ್ಯಾದಿಯ ಆಮಿಷ ತೋರಿಸಿದ್ದರು. ಪೊಲೀಸರು ಆರೋಪಿಗಳ ಮೇಲೆ ಅಪರಾಧ ನೋಂದಾಯಿಸಿದ್ದಾರೆ.