2007-08 ರಲ್ಲಿ, ಭಾರತ ಮತ್ತು ಅಮೆರಿಕ ನಡುವಿನ ಪರಮಾಣು ಒಪ್ಪಂದವನ್ನು ತಡೆಯಲು ಚೀನಾವು ಭಾರತದ ಕಮ್ಯುನಿಸ್ಟ್ ನಾಯಕರೊಂದಿಗೆ ಕೈಜೋಡಿಸಿತ್ತು !

ಈ ಮಾಹಿತಿಯನ್ನು ವಿಜಯ ಗೋಖಲೆಯವರು ಆ ಸಮಯದಲ್ಲಿಯೇ ಏಕೆ ಬಹಿರಂಗಪಡಿಸಲಿಲ್ಲ? ಈಗ ಪುಸ್ತಕವನ್ನು ಪ್ರಕಟಿಸುವ ಮೂಲಕ ಪುಸ್ತಕಕ್ಕೆ ಪ್ರತಿಕ್ರಿಯೆ ಸಿಗಬೇಕು ಎಂಬುದಕ್ಕಾಗಿ ಅವರು ಇದನ್ನು ಬಹಿರಂಗಪಡಿಸಿದ್ದಾರೆಯೇ ?

ವುಹಾನ್ (ಚೀನಾ) ಪಟ್ಟಣದಲ್ಲಿ ವರ್ಷಗಳ ನಂತರ ಮತ್ತೆ ಕೊರೊನಾದ ರೋಗಿಗಳು ಪತ್ತೆ !

ಚೀನಾದ ವುಹಾನನಲ್ಲಿ ಕೊರೊನಾವು ಹುಟ್ಟಿಕೊಂಡಿತ್ತು ಹಾಗೂ ನಂತರದ ಕಾಲಾವಧಿಯಲ್ಲಿ ಚೀನಾವು ಅದರ ಮೇಲೆ ನಿಯಂತ್ರಣವನ್ನು ಸಾಧಿಸಿತ್ತು; ಆದರೆ ಈಗ ಮತ್ತೆ ವುಹಾನನಲ್ಲಿ ಕೊರೊನಾದ ರೋಗಿಗಳು ಪತ್ತೆಯಾಗಿದ್ದಾರೆ.

ಚೀನಾಗೆ ಕೊರೊನಾದ ‘ಸೂಪರ್ ಸ್ಪ್ರೆಡರ್’ ಎಂದು ಕರೆದಿದ್ದಕ್ಕಾಗಿ ಭಾರತೀಯ ಮಾಸಿಕ ಪತ್ರಿಕೆಯನ್ನು ಚೀನಾವು ನಿಷೇಧಿಸಿದೆ !

ಚೀನಾವನ್ನು ಕೊರೊನಾದ ‘ಸುಪರ ಸ್ಪ್ರೆಡರ್’ (ದೊಡ್ಡ ಪ್ರಮಾಣದಲ್ಲಿ ಸೋಂಕು ಹರಡಿಸುವ) ಎಂದು ಹೇಳಿದ್ದರಿಂದ ಚೀನಾವು ಭಾರತದ ‘ಸ್ವರಾಜ್ಯ’ ಮಾಸಿಕ ಪತ್ರಿಕೆಯನ್ನು ನಿಷೇಧಿಸಿದೆ, ಕೊರೊನಾ ರೋಗಾಣುವು ಚೀನಾದ ವುಹಾನ್‌ನ ಪ್ರಸಿದ್ಧ ಪ್ರಯೋಗಾಲಯದಿಂದಲೇ ಹುಟ್ಟಿಕೊಂಡಿತು, ಎಂಬುದು ವಿಶ್ವದ ಅನೇಕ ವಿಜ್ಞಾನಿಗಳ ಅಭಿಪ್ರಾಯವಾಗಿದೆ.

ದೆಹಲಿಯಲ್ಲಿನ ಚೀನಾ ರಾಯಭಾರಿ ಕಛೇರಿಯು ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾರತದಲ್ಲಿನ ಸಾಮ್ಯವಾದಿ ಪಕ್ಷ, ದ್ರಮುಕ ಇತ್ಯಾದಿ ಪಕ್ಷಗಳ ನೇತಾರರ ಸಹಭಾಗ !

ಶತ್ರುರಾಷ್ಟ್ರದ ರಾಯಭಾರಿ ಕಛೇರಿಯು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಹಭಾಗಿಯಾಗುವ ಪಕ್ಷಗಳ ನೇತಾರರನ್ನು  ರಾಷ್ಟ್ರವಾದಿ ನಾಗರಿಕರು ಕಾನೂನುಬದ್ಧ ಮಾರ್ಗದಿಂದ ಕಠೋರವಾಗಿ ಪ್ರಶ್ನಿಸಬೇಕಿದೆ !

ಪಾಕಿಸ್ತಾನದಲ್ಲಿ ಚೀನಾದ ನಾಗರಿಕರ ಮೇಲೆ ನಡೆಸಿದ ಗುಂಡು ಹಾರಾಟದಲ್ಲಿ ಇಬ್ಬರಿಗೆ ಗಾಯ

ಜುಲೈ 28 ರಂದು ಸಂಜೆ ಅಪರಿಚಿತ ದಾಳಿಕೋರರು ಓರ್ವ ಚೀನಾ ನಾಗರಿಕನ ಚತುಶ್ಚಕ್ರವಾಹನದ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಚೀನಾದ ನಾಗರಿಕ ಗಂಭೀರವಾಗಿ ಗಾಯಗೊಂಡಿದ್ದಾರೆ ಹಾಗೂ ಇನ್ನೋರ್ವನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಲಡಾಖ್‍ನಲ್ಲಿ ಮತ್ತೆ ಚೀನಾದ ಅತಿಕ್ರಮಣ

ಭಾರತವು ಆಕ್ರಮಕ ಭೂಮಿಕೆಯಲ್ಲಿಲ್ಲದಿರುವುದರ ಲಾಭ ಪಡೆದುಕೊಂಡು ಚೀನಾವು ಈ ರೀತಿ ಅತಿಕ್ರಮಣ ನಡೆಸುತ್ತಿದೆ. ಇದಕ್ಕೆ ಭಾರತವು ತಕ್ಕ ಉತ್ತರ ನೀಡಿದಾಗಲೇ ಈ ರೀತಿಯ ಘಟನೆಗಳು ನಿಲ್ಲಬಲ್ಲದು !

ವೀಡಿಯೋಗಳನ್ನು ವೀಕ್ಷಿಸಿ : ಕಳೆದ ೧೦೦೦ ವರ್ಷಗಳಲ್ಲೇ ಗರಿಷ್ಠ ಮಳೆ : ಚೀನಾದಲ್ಲಿ ಲಕ್ಷಾಂತರ ಜನರು ನಿರಾಶ್ರಿತರು !

ಇಲ್ಲಿಯ ಹವಾಮಾನ ಇಲಾಖೆಯ ಪ್ರಕಾರ ಹೆನಾನ್ ಪ್ರಾಂತ್ಯದಲ್ಲಿ ಕಳೆದ ೧೦೦೦ ವರ್ಷಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ. ವಿದೇಶಿ ಸುದ್ದಿ ಜಾಲತಾಣ ‘ಟೆಲಿಗ್ರಾಫ್’ನ ಮಾಹಿತಿಯ ಪ್ರಕಾರ, ಇದುವರೆಗೆ ೨೫ ಜನರು ಸಾವನ್ನಪ್ಪಿದ್ದಾರೆ ಮತ್ತು ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಪಾಕಿಸ್ತಾನದಲ್ಲಿ ಚೀನಿ ಅಭಿಯಂತರು ಮತ್ತು ಕಾರ್ಮಿಕರಿದ್ದ ಬಸ್ಸಿನ ಮೇಲಾದ ಆಕ್ರಮಣದಲ್ಲಿ ೧೦ ಜನರ ದುರ್ಮರಣ.

ಚೀನಿ ಅಭಿಯಂತರನ್ನು ಕರೆದೊಯ್ಯುತ್ತಿದ್ದ ಬಸ್ಸನ್ನು ರಸ್ತೆಯ ಪಕ್ಕದಲ್ಲಿ ಮುಚ್ಚಿಡಲಾಗಿದ್ದ ಸ್ಫೋಟಕದಿಂದ ಉಡಾಯಿಸಿದ ಘಟನೆ ಪಾಕಿಸ್ತಾನದ ಕೊಹಿಸ್ತಾನದಲ್ಲಿ ಘಟಿಸಿದೆ. ಇದರಲ್ಲಿ ಕಡಿಮೆಪಕ್ಷ ೧೦ ಜನರು ಮರಣ ಹೊಂದಿರುವರೆಂದು ಹೇಳಲಾಗುತ್ತಿದೆ.

ಚೀನಾದ ಸೈನಿಕರು ಶ್ರೀಲಂಕಾದಲ್ಲಿ ಕೆಲಸ ಮಾಡುವುದಕ್ಕೆ ಸ್ಥಳಿಯ ನಾಗರಿಕರಿಂದ ವಿರೋಧ !

ಚೀನಾದ ಸೈನಿಕರು ಇಲ್ಲಿಯ ಪ್ರಾಚೀನ ಸರೋವರದ ಹತ್ತಿರ ಕೆಲಸ ಮಾಡುತ್ತಿರುವಾಗ ಸ್ಥಳಿಯ ನಾಗರಿಕರು ನೋಡಿದ ನಂತರ ಅವರು ಸೈನಿಕರನ್ನು ವಿರೋಧಿಸಿದರು. ಈ ಸೈನಿಕರು ಸಮವಸ್ತ್ರದಲ್ಲಿದ್ದರಿಂದ ಸ್ಥಳಿಯ ನಾಗರಿಕರಿಗೆ ಗಮನಕ್ಕೆ ಬಂದಿತು. ಇನ್ನೊಂದು ಕಡೆ ಶ್ರೀಲಂಕಾದಲ್ಲಿನ ಚೀನಾದ ರಾಯಭಾರಿಯು ಸಮವಸ್ತ್ರದಲ್ಲಿರುವ ತಮ್ಮ ಸೈನಿಕರಾಗಿದ್ದಾರೆ ಎಂಬುದನ್ನು ನಿರಾಕರಿಸಿದ್ದಾರೆ.

ಉಯಿಘರ್ ಮುಸಲ್ಮಾನರ ವಿರುದ್ಧ ಚೀನಾದಿಂದಾಗುತ್ತಿರುವ ದಮನಕ್ಕೆ ಪಾಕಿಸ್ತಾನದ ಬೆಂಬಲ !

ಚೀನಾವು ತನ್ನ ಕ್ಸಿನ್‍ಜಿಯಾಂಗ್ ಪ್ರಾಂತ್ಯದಲ್ಲಿನ ಉಯಿಘರ್ ಮುಸಲ್ಮಾನರನ್ನು ದಮನಿಸುತ್ತಿದೆ. ಇದನ್ನು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಬೆಂಬಲಿಸಿದ್ದಾರೆ. ಚೀನಾದ ಮಾಧ್ಯಮಗಳೊಂದಿಗೆ ಮಾತನಾಡುವಾಗ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.