ವೀಡಿಯೋಗಳನ್ನು ವೀಕ್ಷಿಸಿ : ಕಳೆದ ೧೦೦೦ ವರ್ಷಗಳಲ್ಲೇ ಗರಿಷ್ಠ ಮಳೆ : ಚೀನಾದಲ್ಲಿ ಲಕ್ಷಾಂತರ ಜನರು ನಿರಾಶ್ರಿತರು !

೨೫ ಜನರು ಮೃತಪಟ್ಟರು

೨ ಅಣೆಕಟ್ಟುಗಳು ನಾಶ

ಚೀನಾ ಬ್ರಹ್ಮಪುತ್ರ ಮತ್ತು ಇತರ ನದಿಗಳಲ್ಲಿ ಅಕ್ರಮವಾಗಿ ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ಕಟ್ಟಿ ನೀರನ್ನು ತಡೆಯುತ್ತಿದೆ. ಇದರ ಹೊಡೆತ ಭಾರತ ಮತ್ತು ನೆರೆಯ ರಾಷ್ಟ್ರಗಳ ಮೇಲೆ ಬೀಳುತ್ತದೆ. ಇಂತಹ ಅನೈಸರ್ಗಿಕ ಕೃತ್ಯಗಳಿಂದ ಇತರ ದೇಶಗಳಿಗೆ ತೊಂದರೆ ನೀಡುತ್ತಿರುವ ಚೀನಾಗೆ ಪ್ರಕೃತಿಯೇ ಈಗ ಪಾಠ ಕಲಿಸುತ್ತಿದೆ ಎಂದು ಯಾರಾದರು ಹೇಳಿದರೆ ತಪ್ಪಾಗಲಾರದು !

ಬೀಜಿಂಗ್ – ಇಲ್ಲಿಯ ಹವಾಮಾನ ಇಲಾಖೆಯ ಪ್ರಕಾರ ಹೆನಾನ್ ಪ್ರಾಂತ್ಯದಲ್ಲಿ ಕಳೆದ ೧೦೦೦ ವರ್ಷಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ. ವಿದೇಶಿ ಸುದ್ದಿ ಜಾಲತಾಣ ‘ಟೆಲಿಗ್ರಾಫ್’ನ ಮಾಹಿತಿಯ ಪ್ರಕಾರ, ಇದುವರೆಗೆ ೨೫ ಜನರು ಸಾವನ್ನಪ್ಪಿದ್ದಾರೆ ಮತ್ತು ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಚೀನಾದ ರಾಷ್ಟ್ರಾಧ್ಯಕ್ಷ ಶಿ ಜಿನಪಿಂಗ್ ಇವರು ‘ಭಯಾನಕ ಪ್ರವಾಹವು ರಕ್ಷಣಾ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ’ ಎಂದು ಹೇಳಿದ್ದಾರೆ.

೧. ಹೆನಾನ್ ಪ್ರಾಂತ್ಯದ ರಾಜಧಾನಿಯಾದ ಚಾಂಗ್‌ಚೊವು ಪಟ್ಟಣದಲ್ಲಿ ವಾರ್ಷಿಕ ಸರಾಸರಿ ಮಳೆಯ ಪ್ರಮಾಣ ೬೪೦.೮ ಮಿ.ಮೀ ಇರುವಾಗ, ಜುಲೈ ೧೭ ರಿಂದ ಜುಲೈ ೨೧ ರವರೆಗಿನ ಐದು ದಿನಗಳಲ್ಲಿ ೬೧೭.೧ ಮಿ.ಮೀ ಮಳೆಯಾಗಿದೆ.

೨. ಚೀನಾದಲ್ಲಿ ಕಳೆದ ಕೆಲವು ವಾರಗಳಿಂದ ಧಾರಾಕಾರವಾಗಿ ಮಳೆಯಾಗುತ್ತಿದೆ ಮತ್ತು ಹೆಚ್ಚಿನ ನದಿಗಳು ಅಪಾಯಕಾರಿ ಮಟ್ಟವನ್ನು ತಲುಪಿವೆ. ಉತ್ತರ ಚೀನಾದಲ್ಲಿ ಕನಿಷ್ಠ ಎರಡು ಅಣೆಕಟ್ಟುಗಳು ಧ್ವಂಸವಾಗಿವೆ. ಇನ್ನೂ ಅನೇಕ ಅಣೆಕಟ್ಟುಗಳು ವಿನಾಶದ ಅಂಚಿನಲ್ಲಿವೆ ಎಂದು ವರದಿಯಾಗಿದೆ. ಚಾಂಗ್‌ಚೂವು ನಗರದ ಸಮೀಪವಿರುವ ಇಹೆತಾನ್ ಹೆಸರಿನ ಅಣೆಕಟ್ಟು ಯಾವುದೇ ಕ್ಷಣದಲ್ಲಿ ಕೊಚ್ಚಿಹೋಗಬಹುದು ಎಂಬ ಆತಂಕ ವ್ಯಕ್ತಪಡಿಸಲಾಗಿದೆ.

೩. ಚೀನಾ ತನ್ನ ಜಲ ಸಂಪನ್ಮೂಲಕ್ಕಾಗಿ ಅಣೆಕಟ್ಟುಗಳನ್ನು ಅವಲಂಬಿಸಿದೆ. ದೇಶದಲ್ಲಿ ಒಟ್ಟು ೯೮೦೦೦ ಅಣೆಕಟ್ಟುಗಳಿವೆ. ಈ ಅಣೆಕಟ್ಟುಗಳಲ್ಲಿ ಹೆಚ್ಚಿನವು ಕೆಲವು ದಶಕಗಳ ಹಿಂದೆ ನಿರ್ಮಿಸಲ್ಪಟ್ಟವು ಮತ್ತು ಮಳೆನೀರನ್ನು ತಡೆದುಕೊಳ್ಳುವ ಅವುಗಳ ಸಾಮರ್ಥ್ಯದ ಬಗ್ಗೆ ಪ್ರಶ್ನೆ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತದೆ.

೪. ಚಾಂಗಚೊವುನಲ್ಲಿನ ಪ್ರವಾಹದಿಂದಾಗಿ ಹಾಹಾಕಾರವೆದ್ದಿರುವ ವೀಡಿಯೋಗಳು ಮತ್ತು ಛಾಯಾಚಿತ್ರಗಳು ವಿಶ್ವದಾದ್ಯಂತ ಸಾಮಾಜಿಕ ಮಾಧ್ಯಮಗಳಲ್ಲಿ ‘ವೈರಲ್’ (ದೊಡ್ಡ ಪ್ರಮಾಣದಲ್ಲಿ ಪ್ರಸಾರ) ಆಗಿದ್ದು, ಈ ಬಗ್ಗೆ ಜಾಗತಿಕ ಸಮುದಾಯದಲ್ಲಿ ಕಳವಳ ವ್ಯಕ್ತಪಡಿಸಲಾಗುತ್ತಿದೆ. ಈ ವೀಡಿಯೋಗಳಲ್ಲಿ ಜನರು ಕೊಚ್ಚಿಹೋಗುತ್ತಿರುವುದು ಕಂಡು ಬರುತ್ತಿದೆ. ನೂರಾರು ಚತುಶ್ಚಕ್ರ ವಾಹನಗಳು ಇದೇ ರೀತಿಯ ಪರಿಸ್ಥಿತಿಯಲ್ಲಿವೆ. ರೈಲುಗಳಲ್ಲಿ ಎದೆಯವರೆಗೆ ನೀರು ತುಂಬಿವೆ ಮತ್ತು ಚೀನಿಯರಿಗೆ ಅಲ್ಲಿಂದ ಪಾಲಯನವಾಗಲೂ ಸಾಧ್ಯವಾಗುತ್ತಿಲ್ಲ ಎಂಬುದು ವೀಡಿಯೋದಿಂದ ಬೆಳಕಿಗೆ ಬಂದಿದೆ.