ಪಾಕಿಸ್ತಾನದಲ್ಲಿ ಚೀನಾದ ನಾಗರಿಕರ ಮೇಲೆ ನಡೆಸಿದ ಗುಂಡು ಹಾರಾಟದಲ್ಲಿ ಇಬ್ಬರಿಗೆ ಗಾಯ

ಸಾಲ ನೀಡಿ ಅಥವಾ ಪ್ರಕಲ್ಪಗಳ(ಯೋಜನೆಗಳ) ಮೂಲಕ ಪಾಕಿಸ್ತಾನದ ಮೇಲೆ ಹಿಡಿತ ಸಾಧಿಸಬಹದು, ಎಂದು ಚೀನಾಕ್ಕೆ ಅನಿಸುತ್ತಿದ್ದರೆ, ಅದು ಅಷ್ಟು ಸುಲಭವಲ್ಲ, ಎಂದು ಅದು ಇಂತಹ ಘಟನೆಗಳಿಂದ ಗಮನದಲ್ಲಿಟ್ಟುಕೊಳ್ಳಬೇಕು !

ಕರಾಚಿ (ಪಾಕಿಸ್ತಾನ) – ಇಲ್ಲಿ ಜುಲೈ 28 ರಂದು ಸಂಜೆ ಅಪರಿಚಿತ ದಾಳಿಕೋರರು ಓರ್ವ ಚೀನಾ ನಾಗರಿಕನ ಚತುಶ್ಚಕ್ರವಾಹನದ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಚೀನಾದ ನಾಗರಿಕ ಗಂಭೀರವಾಗಿ ಗಾಯಗೊಂಡಿದ್ದಾರೆ ಹಾಗೂ ಇನ್ನೋರ್ವನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪೊಲೀಸರು ನೀಡಿದ ಮಾಹಿತಿಗನುಸಾರ, ಮಾಸ್ಕ್ ಹಾಕಿಕೊಂಡಿದ್ದ 2 ದಾಳಿಕೋರರು ದ್ವಿಚಕ್ರ ವಾಹನದಲ್ಲಿ ಬಂದು ಗುಂಡು ಹಾರಿಸಿದರು ಮತ್ತು ಅಲ್ಲಿಂದ ಪರಾರಿಯಾದರು. ‘ಈ ಘಟನೆಯ ತನಿಖೆಯ ಬಗ್ಗೆ ಸೂಕ್ಷ್ಮವಾಗಿ ನಿಗಾ ಇಡುತ್ತಿದ್ದೇವೆ. ಪಾಕಿಸ್ತಾನದಲ್ಲಿನ ಚೀನಾ ನಾಗರಿಕರ ಸುರಕ್ಷೆಯ ಕಾಳಜಿಯನ್ನು ಸರಕಾರವು ನೋಡಿಕೊಳ್ಳಲಿದೆ, ಎಂಬ ನಂಬಿಕೆ ಇದೆ’, ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರಾದ ಜಾವೊ ಲಿಜಿಯಾನ ಇವರು ಹೇಳಿದ್ದಾರೆ. (ಯಾವುದು ಎಂದಿಗೂ ಸಾಧ್ಯವಾಗುವುದಿಲ್ಲವೋ ಅದನ್ನು ಚೀನಾವು ಪಾಕಿಸ್ತಾನದಿಂದ ಅಪೇಕ್ಷಿಸುತ್ತಿದೆ, ಮತ್ತು ಅದು ಯಾವತ್ತೂ ಪೂರ್ಣವಾಗಲಾರದು ಎಂದು ಚೀನಾವು ಯಾವಾಗಲೂ ನೆನಪಿಟ್ಟುಕೊಳ್ಳಬೇಕು ! ಅಮೇರಿಕಾದಿಂದ ಪಾಕಿಸ್ತಾನಕ್ಕೆ ಎಲ್ಲಾ ರೀತಿಯ ಸೌಲಭ್ಯ ಹಾಗೂ ಸಹಾಯ ನೀಡಿಯೂ ಪಾಕಿಸ್ತಾನ ಅದಕ್ಕೆ ಸೊಪ್ಪು ಹಾಕಲಿಲ್ಲ, ಚೀನಾವು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು ! – ಸಂಪಾದಕರು)

ಪಾಕಿಸ್ತಾನದಲ್ಲಿ ವಿವಿಧ ಪ್ರಕಲ್ಪದ ಕೆಲಸದ ನಿಮಿತ್ತ ಚೀನಾದ ಇಂಜಿನಿಯರ್ ಗಳು ಹಾಗೂ ಕಾರ್ಮಿಕರು ಪಾಕಿಸ್ತಾನದಲ್ಲಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಈ ಚೀನಾದ ನಾಗರಿಕರನ್ನು ಗುರಿಯಾಗಿಸಲಾಗುತ್ತಿದೆ. ಕೆಲವು ದಿನಗಳ ಹಿಂದೆ ಚೀನಾದ ನಾಗರಿಕರ ಬಸ್ಸಿನ ಮೇಲೆ ನಡೆದ ದಾಳಿಯಲ್ಲಿ 9 ಚೀನಾದ ನಾಗರಿಕರ ಸಹಿತ 13 ಜನ ಸಾವನ್ನಪ್ಪಿದ್ದರು. ಇದರಲ್ಲಿ 2 ಪಾಕಿಸ್ತಾನದ ಸೈನಿಕರೂ ಇದ್ದರು.