ಚೀನಾಗೆ ಕೊರೊನಾದ ‘ಸೂಪರ್ ಸ್ಪ್ರೆಡರ್’ ಎಂದು ಕರೆದಿದ್ದಕ್ಕಾಗಿ ಭಾರತೀಯ ಮಾಸಿಕ ಪತ್ರಿಕೆಯನ್ನು ಚೀನಾವು ನಿಷೇಧಿಸಿದೆ !

  • ಭಾರತದ ಒಂದು ಪತ್ರಿಕೆಯು ವಿರೋಧದ ಸುದ್ದಿಯನ್ನು ಪ್ರಕಟಿಸಿತು; ಎಂದು, ಚೀನಾ ಪತ್ರಿಕೆಯನ್ನು ನೇರವಾಗಿ ನಿಷೇಧಿಸುತ್ತದೆ, ತದ್ವಿರುದ್ಧವಾಗಿ, ಚೀನಾವು ಆಗಾಗ್ಗೆ ಭಾರತ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಿದ್ದರೂ ಅದರ ಉತ್ಪನ್ನಗಳನ್ನು ಭಾರತದಲ್ಲಿ ನಿಷೇಧಿಸುತ್ತಿಲ್ಲ. ಇದರಿಂದಲೇ ಚೀನಾದ ಸೊಕ್ಕು ಮತ್ತು ಭಾರತದ ಸ್ವಾಭಿಮಾನಶೂನ್ಯತೆ ಕಂಡುಬರುತ್ತದೆ. ಸರಕಾರವು ಈ ಚಿತ್ರಣವನ್ನು ಬದಲಾಯಿಸಬೇಕು ಎಂದು ಜನರ ಅಪೇಕ್ಷೆಯಾಗಿದೆ !
  • ಭಾರತ ವಿರೋಧಿ ಸುದ್ದಿ ಪ್ರಕಟಿಸುವ ‘ನ್ಯೂಯಾರ್ಕ್ ಟೈಮ್ಸ್’, ‘ವಾಷಿಂಗ್ಟನ್ ಪೋಸ್ಟ್’, ಬಿಬಿಸಿ ಇತ್ಯಾದಿ ವಿದೇಶಿ ಮಾಧ್ಯಮಗಳನ್ನು ಭಾರತವು ಯಾವಾಗ ನಿಷೇಧಿಸಲಿದೆ ?

ಬೀಜಿಂಗ್ : ಚೀನಾವನ್ನು ಕೊರೊನಾದ ‘ಸುಪರ ಸ್ಪ್ರೆಡರ್’ (ದೊಡ್ಡ ಪ್ರಮಾಣದಲ್ಲಿ ಸೋಂಕು ಹರಡಿಸುವ) ಎಂದು ಹೇಳಿದ್ದರಿಂದ ಚೀನಾವು ಭಾರತದ ‘ಸ್ವರಾಜ್ಯ’ ಮಾಸಿಕ ಪತ್ರಿಕೆಯನ್ನು ನಿಷೇಧಿಸಿದೆ, ಕೊರೊನಾ ರೋಗಾಣುವು ಚೀನಾದ ವುಹಾನ್‌ನ ಪ್ರಸಿದ್ಧ ಪ್ರಯೋಗಾಲಯದಿಂದಲೇ ಹುಟ್ಟಿಕೊಂಡಿತು, ಎಂಬುದು ವಿಶ್ವದ ಅನೇಕ ವಿಜ್ಞಾನಿಗಳ ಅಭಿಪ್ರಾಯವಾಗಿದೆ.

ಭಾರತದ ‘ಸ್ವರಾಜ್ಯ’ವು ರಾಷ್ಟ್ರೀಯವಾದಿ ಪತ್ರಿಕೆಯಾಗಿದೆ. ಇದರಲ್ಲಿ ರಾಜಕೀಯ, ರಕ್ಷಣೆ, ಅರ್ಥಶಾಸ್ತ್ರ, ಭಾರತೀಯ ಸಂಸ್ಕೃತಿಯಂತಹ ವಿವಿಧ ವಿಷಯಗಳ ಸುದ್ದಿಗಳು ಒಳಗೊಂಡಿರುತ್ತವೆ. ಈ ಪತ್ರಿಕೆಯ ‘ಮುಖಪುಟ ಕಥೆ’ ಎಂದು ‘ಸೂಪರ್ ಸ್ಪ್ರೆಡರ್ ಚೀನಾಗೆ ಸಿಗುತ್ತಿದೆ ರಕ್ಷಣೆ, ವಿಶ್ವ ಆರೋಗ್ಯ ಸಂಸ್ಥೆ ಜೊತೆ ಸಹಭಾಗಿತ್ವ ಸಿಗುತ್ತದೆ, ಜಗತ್ತಿಗೆ ಗೊತ್ತಾಗುವ ಮೊದಲೇ ಮಾನವೀಯತೆಯು ಅಪಾಯಕ್ಕೊಳಗಾಗಿದೆ !’, ಎಂಬ ಶೀರ್ಷಿಕೆಯಡಿಯಲ್ಲಿ ವಿವರವಾದ ಸುದ್ದಿಯನ್ನು ಪ್ರಕಟಿಸಿದೆ. ಮುಖಪುಟದಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಛಾಯಾಚಿತ್ರವಿದೆ. ಚೀನಾವು ಈ ಸುದ್ದಿಪತ್ರಿಕೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಾ ಪತ್ರಿಕೆಯನ್ನು ಚೀನಾದಲ್ಲಿ ನಿಷೇಧಿಸಿದೆ.