ಲಡಾಖ್‍ನಲ್ಲಿ ಮತ್ತೆ ಚೀನಾದ ಅತಿಕ್ರಮಣ

ಭಾರತವು ಆಕ್ರಮಕ ಭೂಮಿಕೆಯಲ್ಲಿಲ್ಲದಿರುವುದರ ಲಾಭ ಪಡೆದುಕೊಂಡು ಚೀನಾವು ಈ ರೀತಿ ಅತಿಕ್ರಮಣ ನಡೆಸುತ್ತಿದೆ. ಇದಕ್ಕೆ ಭಾರತವು ತಕ್ಕ ಉತ್ತರ ನೀಡಿದಾಗಲೇ ಈ ರೀತಿಯ ಘಟನೆಗಳು ನಿಲ್ಲಬಲ್ಲದು !

ನವ ದೆಹಲಿ – ಚೀನಾವು ಮತ್ತೊಮ್ಮೆ ಭಾರತದ ಗಡಿಯಲ್ಲಿ ಅತಿಕ್ರಮಣ ನಡೆಸಿರುವ ಘಟನೆಯು ಬೆಳಕಿಗೆ ಬಂದಿದೆ. ಪೂರ್ವ ಲಡಾಖ್‍ನಲ್ಲಿನ ಡೆಮಚೋಕನಲ್ಲಿನ ಚಾರ್ಡಿಂಗ ನಾಲೆಯ ಪಕ್ಕದಲ್ಲಿರುವ ಭಾರತದ ಗಡಿಯಲ್ಲಿ ಚೀನಾವು ತನ್ನ ಡೇರೆ ಹಾಕಿರುವ ಮಾಹಿತಿಯನ್ನು ಹಿರಿಯ ಸರಕಾರಿ ಅಧಿಕಾರಿಗಳು ನೀಡಿದ್ದಾರೆ. ‘ಡೇರೆಯಲ್ಲಿರುವ ಜನರು ಚೀನಾದ ನಾಗರಿಕರು ಎಂದು ಹೇಳಲಾಗುತ್ತಿದೆ. ಅವರನ್ನು ವಾಪಸ್ಸು ಹೋಗಲು ಹೇಳಿದರೂ, ಇನ್ನೂ ಅವರು ಅಲ್ಲಿಯೇ ಇದ್ದಾರೆ’, ಎಂದು ಅಧಿಕಾರಿಗಳು ಹೇಳಿದರು. (ಅವರು ಚೀನಾದ ನಾಗರಿಕರಲ್ಲ, ಸೈನಿಕರು ಎಂಬುದರಲ್ಲಿ ಅನುಮಾನವೇ ಇಲ್ಲ ! – ಸಂಪಾದಕರು)