ಸತ್ತವರಲ್ಲಿ ೬ ಚೀನಿ ನಾಗರಿಕರು
ಚೀನಾ ಪಾಕಿಸ್ತಾನದಲ್ಲಿ ಭಯೋತ್ಪಾದನೆಗೆ ಪ್ರೋತ್ಸಾಹ ನೀಡಿತು. ಅದರ ಪರಿಣಾಮವನ್ನು ಈಗ ಅದು ಅನುಭವಿಸುತ್ತಿದೆ. ಈ ಘಟನೆಯ ಬಳಿಕವಾದರೂ ಚೀನಾ ಜಾಣತನದಿಂದ ವರ್ತಿಸಬಹುದೇ, ಎಂದು ನೋಡಬೇಕಾಗಬಹುದು.
ಇಸ್ಲಾಮಾಬಾದ(ಪಾಕಿಸ್ತಾನ)- ಚೀನಿ ಅಭಿಯಂತರನ್ನು ಕರೆದೊಯ್ಯುತ್ತಿದ್ದ ಬಸ್ಸನ್ನು ರಸ್ತೆಯ ಪಕ್ಕದಲ್ಲಿ ಮುಚ್ಚಿಡಲಾಗಿದ್ದ ಸ್ಫೋಟಕದಿಂದ ಉಡಾಯಿಸಿದ ಘಟನೆ ಪಾಕಿಸ್ತಾನದ ಕೊಹಿಸ್ತಾನದಲ್ಲಿ ಘಟಿಸಿದೆ. ಇದರಲ್ಲಿ ಕಡಿಮೆಪಕ್ಷ ೧೦ ಜನರು ಮರಣ ಹೊಂದಿರುವರೆಂದು ಹೇಳಲಾಗುತ್ತಿದೆ. ಇದರಲ್ಲಿ ೬ ಚೀನಿ ನಾಗರಿಕರು ಇದ್ದಾರೆ. ಈ ಬಸ್‍ನಲ್ಲಿ ೩೬ ಚೀನಿ ನಾಗರಿಕರು ಪ್ರಯಾಣಿಸುತ್ತಿದ್ದರು. ಮರಣ ಹೊಂದಿರುವವರ ಅಂಕಿ-ಅಂಶಗಳು ಹೆಚ್ಚಾಗುವ ಸಾಧ್ಯತೆಯಿದೆ.
೧. ಚೀನ- ಪಾಕಿಸ್ತಾನ ಆರ್ಥಿಕ ಮಹಾಮಾರ್ಗದ ಒಂದು ಭಾಗವಾಗಿರುವ ದಾಸೂ ಸೇತುವೆಯ ನಿರ್ಮಾಣ ಕಾಮಗಾರಿಗಾಗಿ ಚೀನಿ ಅಭಿಯಂತರು ಮತ್ತು ಕಾರ್ಮಿಕರು ಈ ಬಸನಲ್ಲಿ ಕಾಮಗಾರಿಯ ಸ್ಥಳಕ್ಕೆ ತೆರಳುತ್ತಿದ್ದರು. ಅವರೊಂದಿಗೆ ಪಾಕಿಸ್ತಾನದ ಇಬ್ಬರು ಸೈನಿಕರೂ ಇದ್ದರು. ಈ ಇಬ್ಬರೂ ಸೈನಿಕರು ಈ ಸ್ಫೋಟದಲ್ಲಿ ಮರಣ ಹೊಂದಿದ್ದಾರೆ. ಪಾಕಿಸ್ತಾನಿ ಸುರಕ್ಷಾದಳವು ಈ ಸ್ಫೋಟದ ತಪಾಸಣೆಯನ್ನು ಪ್ರಾರಂಭಿಸಿದೆ.
೨. ಪಾಕಿಸ್ತಾನದಲ್ಲಿರುವ ಆರ್ಥಿಕ ಮಹಾಮಾರ್ಗಕ್ಕೆ ಸ್ಥಳೀಯರು ಮೇಲಿಂದ ಮೇಲೆ ವಿರೋಧ ವ್ಯಕ್ತಪಡಿಸಿದ್ದರು. ಬಲೂಚಿಸ್ತಾನದಲ್ಲಿರುವ ಕಟ್ಟರ ಸಂಘಟನೆಯು ಇದರ ವಿರುದ್ಧ ಬಹಿರಂಗವಾಗಿಯೇ ವಿರೋಧಿಸಿತ್ತು. ಕೆಲವು ತಿಂಗಳುಗಳ ಹಿಂದೆ ಕ್ವೇಟಾದಲ್ಲಿ ಚೀನಿ ರಾಯಭಾರಿ ವಾಸ್ತವ್ಯವಿದ್ದ ಹೊಟೇಲನಲ್ಲಿ ಸ್ಫೋಟ ಜರುಗಿತ್ತು. ಈ ಸ್ಫೋಟದ ಸಮಯದಲ್ಲಿ ರಾಯಭಾರಿಯು ಹೊಟೇಲಿನಲ್ಲಿರಲಿಲ್ಲ. ಈ ಸ್ಫೋಟದಲ್ಲಿ ೫ ಜನರು ಮರಣಿಸಿದ್ದರು. ಈ ಸ್ಫೋಟವನ್ನು ಬಲೂಚಿಸ್ತಾನ ಲಿಬರೇಶನ ಆರ್ಮಿಯು ನಡೆಸಿರುವ ಬಗ್ಗೆ ಸಂಶಯವನ್ನು ವ್ಯಕ್ತಪಡಿಸಲಾಗುತ್ತಿದೆ.
ಪಾಕಿಸ್ತಾನದಲ್ಲಿ ಭೀಕರ ಬಸ್ ಸ್ಫೋಟ: ಚೀನೀ ಪ್ರಜೆಗಳು ಸೇರಿ ಕನಿಷ್ಠ 13 ಸಾವು
#Pakistan https://t.co/fqqCPos6to— vijaykarnataka (@Vijaykarnataka) July 14, 2021
ಪಾಕಿಸ್ತಾನವು ವಿಚಾರಣೆ ನಡೆಸಬೇಕು- ಚೀನಾದ ಮನವಿ.
ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾಓ ಲಿಝಿಆನ ಇವರು ಈ ಭಯೋತ್ಪಾದಕ ಆಕ್ರಮಣದ ಬಗ್ಗೆ ನಿಷೇಧವನ್ನು ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗವಹಿಸಿರುವ ದೋಷಿಗಳನ್ನು ಬಂಧಿಸಬೇಕು ಹಾಗೂ ಪಾಕಿಸ್ತಾನದಲ್ಲಿರುವ ಚೀನಿ ಅಭಿಯಂತರಿಗೆ ಮತ್ತು ಕಾರ್ಮಿಕರಿಗೆ ಅವರು ಸಂಪೂರ್ಣ ಸಂರಕ್ಷಣೆಯನ್ನು ನೀಡುವಂತೆ ಕೋರಿದ್ದಾರೆ. ಈ ಮೊದಲು ಪಾಕಿಸ್ತಾನವು ಈ ಸ್ಫೋಟವು ಅಪಘಾತವೆಂದು ಬಿಂಬಿಸಲು ಪ್ರಯತ್ನಿಸಿತ್ತು. ಆದರೆ ಚೀನಿ ರಾಯಭಾರ ಕಚೇರಿಯು ಇದು ಆಕ್ರಮಣವಾಗಿದೆಯೆಂದು ಹೇಳಿದ ಬಳಿಕ ಪ್ರಧಾನಮಂತ್ರಿ ಇಮ್ರಾನ್ ಖಾನರ ಸಂಸದೀಯ ಸಲಹೆಗಾರರಾದ ಬಾಬರ ಅವಾನ ಇವರು ಆಕ್ರಮಣ ನಡೆದಿದೆಯೆಂದು ತಿಳಿಸಿದರು.