ಚೀನಾದಲ್ಲಿ ಕಮ್ಯುನಿಸ್ಟ್ ಪಕ್ಷವು ೧೦೦ ವರ್ಷ ಪೂರ್ಣಗೊಳಿಸಿರುವ ನಿಮಿತ್ತ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು !
* ಶತ್ರುರಾಷ್ಟ್ರದ ರಾಯಭಾರಿ ಕಛೇರಿಯು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಹಭಾಗಿಯಾಗುವ ಪಕ್ಷಗಳ ನೇತಾರರನ್ನು ರಾಷ್ಟ್ರವಾದಿ ನಾಗರಿಕರು ಕಾನೂನುಬದ್ಧ ಮಾರ್ಗದಿಂದ ಕಠೋರವಾಗಿ ಪ್ರಶ್ನಿಸಬೇಕಿದೆ ! * ಚೀನಾಗೆ ಭಾರತವಿರೋಧಿ ಕಾರ್ಯಾಚರಣೆಗಳಲ್ಲಿ ಭಾರತದಲ್ಲಿನ ಸಾಮ್ಯವಾದಿಗಳು ಸದಾ ಸಹಾಯ ಮಾಡಿರುವುದರ ಇತಿಹಾಸವಿದೆ. ಆದುದರಿಂದ ಅವರ ನೇತಾರರು ಇಂತಹ ಕಾರ್ಯಕ್ರಮಗಳಲ್ಲಿ ಸಹಭಾಗಿಯಾಗುವುದು ಆಶ್ಚರ್ಯಕರ ಸಂಗತಿಯೇನಲ್ಲ ! ಈಗ ಸರಕಾರವು ಇಂತಹ ಪಕ್ಷಗಳ ಮೇಲೆ ನಿರ್ಬಂಧ ಹೇರುವ ಬಗ್ಗೆ ವಿಚಾರ ಮಾಡುವುದು ಆವಶ್ಯಕವಾಗಿದೆ ! |
ನವದೆಹಲಿ – ಚೀನಾದ ಅಧಿಕಾರಾರೂಢ ಕಮ್ಯುನಿಸ್ಟ್ ಪಕ್ಷಕ್ಕೆ ೧೦೦ ವರ್ಷಗಳು ಪೂರ್ಣವಾಗಿರುವ ಹಿನ್ನೆಲೆಯಲ್ಲಿ ಭಾರತದ ದೆಹಲಿಯಲ್ಲಿರುವ ಚೀನಾ ರಾಯಭಾರಿ ಕಛೇರಿಯಲ್ಲಿ ಒಂದು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಭಾರತದ ಕಮ್ಯುನಿಸ್ಟ ಪಕ್ಷ, ದ್ರವಿಡ ಮುನ್ನೇತ್ರ ಕಳಘಮ್ (ದ್ರವಿಡ ಪ್ರಗತಿ ಸಂಘ) ಹಾಗೂ ಇತರ ಕೆಲವು ಪಕ್ಷಗಳ ನೇತಾರರು ಸಹಭಾಗಿಯಾಗಿದ್ದರು. ಇದರಲ್ಲಿ ಮಾಪಕದ ಪ್ರಧಾನ ಕಾರ್ಯದರ್ಶಿಯಾದ ಸೀತಾರಾಮ ಯೆಚುರೀ, ಭಾರತೀಯ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾದ ಡಿ. ರಾಜಾ, ಸಂಸದ ಡಾ. ಎಸ್. ಸೆಂಥಿಲಕುಮಾರ, ಆಲ್ ಇಂಡಿಯಾ ಫಾರ್ವರ್ಡ ಬ್ಲಾಕ್ ನ ಕೆ. ಜೀ. ದೇವರಾಜನ ಮುಂತಾದವರು ಸಹಭಾಗಿಯಾಗಿದ್ದರು.
Yechury and other leaders had congratulated Chinese Communist Party on completing 100 years on July 1https://t.co/Ho4bJx2c9T
— OpIndia.com (@OpIndia_com) July 29, 2021
‘ಚೀನಾ ಹಾಗೂ ಭಾರತವು ಪರಸ್ಪರರಿಗೆ ಅಡಚಣೆಯಾಗದೇ ಪೂರಕವಾಗಿರಬೇಕು ! ’ – ಚೀನಾ (ಅಂತೆ)
ಈ ಕಾರ್ಯಕ್ರಮದಲ್ಲಿ ಚೀನಾದ ರಾಜದೂತ ಸುನ ವೀಡಾಂಗರು ‘ಭಾರತ ಹಾಗೂ ಚೀನಾ ಶತ್ರುಗಳಲ್ಲ, ಬದಲಾಗಿ ಪರಸ್ಪರ ಪೂರಕವಾಗಿವೆ. ಎರಡೂ ದೇಶಗಳು ಪರಸ್ಪರರ ಯಶಸ್ಸಿಗಾಗಿ ಅಡಚಣೆಗಳಾಗದೇ ಪೂರಕವಾಗಬೇಕಿದೆ’ ಎಂದು ಹೇಳಿದರು. (ವಿಶ್ವಾಸಘಾತ ಮಾಡುವ ಚೀನಾದ ಈ ಮಾತಿನ ಮೇಲೆ ಯಾರು ನಂಬಿಕೆಯಿಡುವರು ? – ಸಂಪಾದಕರು)
ಗಲ್ವಾನ ಕಣಿವೆಯ ಬಗ್ಗೆ ಮಾತನಾಡುವಾಗ ವಿಡಾಂಗರು ‘ಚೀನಾವು ಪ್ರತಿಬಾರಿಯೂ ತನ್ನ ಭೂಮಿಕೆಯನ್ನು ಸ್ಪಷ್ಟಪಡಿಸಿದೆ’ ಎಂದು ಹೇಳಿದರು. (ಸ್ವಂತದ ಭೂಮಿಕೆ ಅಂದರೆ ಚೀನಾವು ‘ನಾನು ತಪ್ಪು ಮಾಡಿಲ್ಲ, ಭಾರತವು ತಪ್ಪು ಮಾಡಿದೆ’ ಎಂದು ಹೇಳಲು ಇಂದಿನವರೆಗೂ ಪ್ರಯತ್ನಿಸಿದೆ. ಭಾರತೀಯ ನೇತಾರರ ಎದುರು ಈ ಕಾರ್ಯಕ್ರಮದ ಮಾಧ್ಯಮದಿಂದ ಸುಳ್ಳುತನವನ್ನು ಮೆರೆಯುವ ಚೀನಾಗೆ ಈ ನೇತಾರರು ಏಕೆ ಛಿಮಾರಿ ಹಾಕಲಿಲ್ಲ ? – ಸಂಪಾದಕರು)