ಪಾಕಿಸ್ತಾನಕ್ಕೆ ಇದೇ ಭಾಷೆ ಅರ್ಥವಾಗುತ್ತದೆ ಎಂಬುದು ಭಾರತೀಯ ಆಡಳಿತಗಾರರಿಗೆ ಗಮನಕ್ಕೆ ಬರುತ್ತಿದೆಯೇನು?
ಇಸ್ಲಾಮಾಬಾದ್ : ಚೀನಾವು ತನ್ನ ಕ್ಸಿನ್‍ಜಿಯಾಂಗ್ ಪ್ರಾಂತ್ಯದಲ್ಲಿನ ಉಯಿಘರ್ ಮುಸಲ್ಮಾನರನ್ನು ದಮನಿಸುತ್ತಿದೆ. ಇದನ್ನು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಬೆಂಬಲಿಸಿದ್ದಾರೆ. ಚೀನಾದ ಮಾಧ್ಯಮಗಳೊಂದಿಗೆ ಮಾತನಾಡುವಾಗ ಅವರು ಈ ಹೇಳಿಕೆಯನ್ನು ನೀಡಿದ್ದಾರೆ. ಚೀನಾವು ಉಯಿಘರ್ ಮುಸಲ್ಮಾನರ ಮೇಲೆ ನಡೆಸುತ್ತಿರುವ ಅಮಾನವೀಯ ದೌರ್ಜನ್ಯವನ್ನು ವಿಶ್ವಸಂಸ್ಥೆ ಮತ್ತು ವಿಶ್ವದಾದ್ಯಂತದ ಮಾನವ ಹಕ್ಕುಗಳ ಸಂಘಟನೆಗಳು ತೀವ್ರವಾಗಿ ಆಕ್ಷೇಪಿಸಿವೆ. (ಈ ಮಾನವ ಹಕ್ಕುಗಳ ಸಂಘಟನೆಗೆ ನಿರಾಶ್ರಿತ ಕಾಶ್ಮೀರಿ ಹಿಂದೂಗಳ ಬಗ್ಗೆ ಕಳವಳಿ ಏಕೆ ಅನಿಸುತ್ತಿಲ್ಲ ? ಅವರನ್ನು ಕಾಶ್ಮೀರದಿಂದ ಹೊರಹಾಕಿದ ಜಿಹಾದಿ ಭಯೋತ್ಪಾದಕ ಸಂಘಟನೆಯ ಬಗ್ಗೆ ಏಕೆ ಆಕ್ಷೇಪ ವ್ಯಕ್ತಪಡಿಸಿಲ್ಲ ? ಅಥವಾ ಅವರ ಪಾಲಿಗೆ ಕಾಶ್ಮೀರಿ ಹಿಂದೂಗಳಿಗೆ ಮಾನವ ಹಕ್ಕುಗಳು ಇಲ್ಲವೇ ? – ಸಂಪಾದಕರು) ಚೀನಾದಲ್ಲಿ ಶಿ ಜಿನಪಿಂಗ್ ಆಡಳಿತವನ್ನು ಹೊಗಳುತ್ತಾ ‘ಈ ಆಡಳಿತವು ಪ್ರಜಾಪ್ರಭುತ್ವದ ಉತ್ತಮ ಉದಾಹರಣೆಯಾಗಿದೆ’, ಎಂಬ ನುಡಿಮುತ್ತನ್ನು ಇಮ್ರಾನ್ ಖಾನ್ ಈ ಸಮಯದಲ್ಲಿ ಉದುರಿಸಿದರು.
Pakistan’s support to China’s clampdown on Uyghurs continues to grow https://t.co/gPaBa0uYZR pic.twitter.com/lf2Q77xoKX
— The Times Of India (@timesofindia) June 29, 2021