ಶ್ರೀಲಂಕಾದ ನಾಗರಿಕರು ಚೀನಾದ ವಿರುದ್ಧ ಸಂಘಟಿತರಾಗಿ ಅವರನ್ನು ಹೊರದಬ್ಬಲು ಪ್ರಯತ್ನಿಸಬೇಕು ಇಲ್ಲದಿದ್ದರೆ ಚೀನಾವು ಶ್ರೀಲಂಕಾವನ್ನು ನುಂಗಿಬಿಟ್ಟರೆ ಆಶ್ವರ್ಯ ಪಡಬೇಡಿ !
ಕೊಲಂಬೊ (ಶ್ರೀಲಂಕಾ) – ಶ್ರೀಲಂಕಾವು ತನ್ನ ದೇಶದ ಹಂಬನಟೊಟಾ ಬಂದರನ್ನು ಅಭಿವೃದ್ಧಿ ಪಡಿಸಲು ಚೀನಾಗೆ ನೀಡಿದೆ. ಚೀನಾದ ಸೈನಿಕರು ಇಲ್ಲಿಯ ಪ್ರಾಚೀನ ಸರೋವರದ ಹತ್ತಿರ ಕೆಲಸ ಮಾಡುತ್ತಿರುವಾಗ ಸ್ಥಳಿಯ ನಾಗರಿಕರು ನೋಡಿದ ನಂತರ ಅವರು ಸೈನಿಕರನ್ನು ವಿರೋಧಿಸಿದರು. ಈ ಸೈನಿಕರು ಸಮವಸ್ತ್ರದಲ್ಲಿದ್ದರಿಂದ ಸ್ಥಳಿಯ ನಾಗರಿಕರಿಗೆ ಗಮನಕ್ಕೆ ಬಂದಿತು. ಇನ್ನೊಂದು ಕಡೆ ಶ್ರೀಲಂಕಾದಲ್ಲಿನ ಚೀನಾದ ರಾಯಭಾರಿಯು ಸಮವಸ್ತ್ರದಲ್ಲಿರುವ ತಮ್ಮ ಸೈನಿಕರಾಗಿದ್ದಾರೆ ಎಂಬುದನ್ನು ನಿರಾಕರಿಸಿದ್ದಾರೆ. ‘ಚೀನಾದ ಸೈನಿಕರ ಸಮವಸ್ತ್ರದಂತಹ ಬಟ್ಟೆಯನ್ನು ಹಾಕಿಕೊಂಡರೂ, ಅವರು ಚೀನಾದ ಸೈನಿಕರಲ್ಲ’, ಎಂದು ರಾಯಭಾರ ಕಚೇರಿಯು ಸ್ಪಷ್ಟೀಕರಣ ನೀಡಿದೆ. (ಒಂದು ವೇಳೆ ಅವರು ಕೆಲಸಗಾರರು ಇದ್ದರೆ, ಅವರು ಚೀನಾದ ಸೈನಿಕರಂತಹ ಸಮವಸ್ತ್ರವನ್ನು ಏಕೆ ಹಾಕಿಕೊಳ್ಳುವರು ? ಇದಕ್ಕೆ ಚೀನಾವು ಏಕೆ ಉತ್ತರಿಸುತ್ತಿಲ್ಲ ? – ಸಂಪಾದಕರು) ಶ್ರೀಲಂಕಾದ ಸರಕಾರವೂ ಕೂಡ ಚೀನಾದ ಸೈನಿಕರಾಗಿದ್ದಾರೆಂಬುದನ್ನು ತಳ್ಳಿ ಹಾಕಿದೆ. ‘ಚೀನಾದ ಸೈನಿಕರಂತಹ ಬಟ್ಟೆಯನ್ನು ಹಾಕಿಕೊಂಡಿರುವ ಚೀನಾದ ಕೆಲಸಗಾರರಾಗಿದ್ದಾರೆ’, ಎಂದು ಸರಕಾರವು ತಿಳಿಸಿದೆ. ಶ್ರೀಲಂಕಾದ ಕಾನೂನಿನ ಪ್ರಕಾರ ಸೈನಿಕರಲ್ಲದವರು ಸೈನಿಕರ ಸಮವಸ್ತ್ರವನ್ನು ಹಾಕಿಕೊಳ್ಳುವುದು ಅಪರಾಧವಾಗಿದೆ. ಅದಕ್ಕನುಸಾರ ಬಂಧನ ಮತ್ತು ಶಿಕ್ಷೆಯಾಗಬಹುದು.
#LankaChinaUniforms: Chinese men in military uniform spotted; PLA soldiers in SL? https://t.co/VVoEa8rypJ
— NewsX (@NewsX) July 5, 2021
೧. ಪ್ರಸಾರ ಮಾಧ್ಯಮದವರು ನೀಡಿದ ಮಾಹಿತಿಗನುಸಾರ ಚೀನಾದಿಂದ ಸರೋವರದ ಹತ್ತಿರ ಕೆಲಸ ಮಾಡುತ್ತಿರುವ ಬಗ್ಗೆ ಪುರಾತತ್ತ್ವ ವಿಭಾಗದಿಂದ ಪರವಾನಗಿಯನ್ನು ತೆಗೆದುಕೊಂಡಿಲ್ಲ ಎಂಬುದು ಗಮನಕ್ಕೆ ಬಂದಿದೆ. (ಚೀನಾವು ಶ್ರೀಲಂಕಾದಲ್ಲಿ ಕಾಲಿಟ್ಟಾಗಿನಿಂದ ಶ್ರೀಲಂಕಾದ ಮೇಲೆ ಅಧಿಕಾರವನ್ನು ಸಾಧಿಸುವ ಪ್ರಯತ್ನ ನಡೆಯುತ್ತಿದೆ, ಇದೇ ಇದರಿಂದ ಗಮನಕ್ಕೆ ಬರುತ್ತದೆ ! – ಸಂಪಾದಕರು)
೨. ಈ ಘಟನೆಯ ಬಗ್ಗೆ ಶ್ರೀಲಂಕಾದ ಶಾಸಕ ಮತ್ತು `ಫೀಲ್ಡ ಮಾರ್ಶಲ್’ ಪದವಿ ಸಿಕ್ಕಿದ ಸರಥ ಫೊನ್ಸೆಕಾ ಇವರು ಅಸಮಧಾನ ವ್ಯಕ್ತಪಡಿಸುತ್ತಾ ‘ಚೀನಾದ ಸೈನಿಕರು ಮತ್ತು ಅಧಿಕಾರಿಗಳು ದೇಶದಲ್ಲಿ ನುಗ್ಗಿ ಕೆಲಸ ಮಾಡುತ್ತಿದ್ದಾರೆ’, ಎಂದು ಹೇಳಿದರು.
೩. ಶ್ರೀಲಂಕಾವು ಚೀನಾಗೆ ‘ಕೊಲಂಬೊ ಪೋರ್ಟ್’ ಪ್ರಕಲ್ಪಕ್ಕಾಗಿ ೯೯ ವರ್ಷಗಳ ಒಪ್ಪಂದವನ್ನು ಮಾಡಿಕೊಂಡಿದೆ. ಇದರ ಬಗ್ಗೆಯೂ ವಿರೋಧ ಪಕ್ಷದಿಂದಲೂ ವಿರೋಧಿಸಲಾಗುತ್ತಿದೆ.